ಕೊರೊನಾ ಲಸಿಕೆ ಪಡೆದುಕೊಂಡ ವ್ಯಕ್ತಿಯ ದೇಹದಲ್ಲಿ ಮ್ಯಾಗ್ನೆಟಿಕ್ ಅಂಶ; ಉಡುಪಿಯಲ್ಲೂ ಕಂಡುಬಂತು ಅಚ್ಚರಿ!

| Updated By: ganapathi bhat

Updated on: Jun 14, 2021 | 7:53 PM

ಈ ಲಕ್ಷಣ ಉಡುಪಿಯಲ್ಲಿ‌ ಮೊದಲ ಬಾರಿಗೆ ಕಂಡುಬಂದಿದ್ದು ಇನ್ನಷ್ಟು ಮಂದಿ ಆತಂಕಕ್ಕೊಳಗಾಗುವ ಮೊದಲು ಈ ಲಕ್ಷಣಕ್ಕೆ ಇರುವ ನೈಜ ಕಾರಣ ತಜ್ಞ ವೈದ್ಯರು ಕಾರಣ ಪತ್ತೆ ಹಚ್ಚಬೇಕಿದೆ.

ಕೊರೊನಾ ಲಸಿಕೆ ಪಡೆದುಕೊಂಡ ವ್ಯಕ್ತಿಯ ದೇಹದಲ್ಲಿ ಮ್ಯಾಗ್ನೆಟಿಕ್ ಅಂಶ; ಉಡುಪಿಯಲ್ಲೂ ಕಂಡುಬಂತು ಅಚ್ಚರಿ!
ರಾಮ್​ದಾಸ್ ಶೇಟ್
Follow us on

ಉಡುಪಿ: ಕೊರೊನಾ‌ದಿಂದ ಸೇಫ್‌ ಆಗ್ಬೇಕಿದ್ರೆ ವ್ಯಾಕ್ಸಿನ್ ಅತ್ಯಗತ್ಯ ‌ಆದ್ರೆ ಇದೇ ವ್ಯಾಕ್ಸಿನ್ ಪಡೆದ ವ್ಯಕ್ತಿಯೊಬ್ರು ತನ್ನ ದೇಹ ಅಯಸ್ಕಾಂತೀಯ ಆಗೋಗಿದೆ ಅಂತ ಆತಂಕಕ್ಕೆ ಒಳಗಾಗಿದ್ದಾರೆ. ಇವರ ದೇಹ ಮ್ಯಾಗ್ನೆಟಿಕ್ ಶಕ್ತಿ ಹೊಂದಿ ಬದಲಾಗಿದೆ. ಹಾಗಾದ್ರೆ ಇವರ ದೇಹದಲ್ಲಿ ನಿಜವಾಗಿಯೂ ಆಗಿರೋ ಬದಲಾವಣೆಯಾದ್ರೂ ಏನು? ಇದಕ್ಕೆ ಜಿಲ್ಲಾಡಳಿತ ಹೇಳೋ ಸ್ಪಷ್ಟನೆ ಆದ್ರೂ ಏನು ಅನ್ನೋ ಇನ್ಸೈಡ್ ಸ್ಟೋರಿ ನಾವ್ ಹೇಳ್ತೀವಿ ಕೇಳಿ.

ನಾಣ್ಯಗಳು, ಮೆಟಲ್‌ ಸಂಬಂಧಿ ಸ್ಪೂನು, ಸೌಟು ಹೀಗೆ ಮೆಟಲ್ ಇರುವ ವಸ್ತುಗಳೆಲ್ಲ ದೇಹವನ್ನು ಅಂಟಿಕೊಂಡು ಬಿಡುತ್ತೆ. ಸ್ನಾನ ಮಾಡಿದ ಮೇಲೂ ಈ ಅಯಸ್ಕಾಂತೀಯ ಲಕ್ಷಣ ಕಂಡುಬರ್ತಾ ಇದೆ. ಹಣೆ, ಭುಜ, ಎದೆ, ಹೊಟ್ಟೆ, ಬೆನ್ನು, ಮೊಣಕೈ ಹೀಗೆ ಎಲ್ಲಾ ಭಾಗದಲ್ಲೂ ಮ್ಯಾಗ್ನೆಟಿಕ್ ಲಕ್ಷಣ ಕಂಡುಬರ್ತಾ ಇದೆ. ಈ ಮೊದಲು ಯಾವತ್ತು ಕಂಡುಬಾರದ ಲಕ್ಷಣ ಇದೀಗ ವ್ಯಾಕ್ಸಿನ್ ತೆಗೆದುಕೊಂಡ‌ ಬಳಿಕ ಗೋಚರಿಸ್ತಾ ಇರುವುದು ಅಚ್ಚರಿ ಮೂಡಿಸಿದೆ.

ಮ್ಯಾಗ್ನೆಟಿಕ್ ಅಂಶ ಕಂಡು ಬಂದ ಈ ವ್ಯಕ್ತಿಯ ಹೆಸರು ರಾಮ್​ದಾಸ್ ಶೇಟ್.‌ ಉಡುಪಿ ತೆಂಕಪೇಟೆ ನಿವಾಸಿ. ಚಿನ್ನದ ಕೆಲಸ ಮಾಡುವ ಇವರು, ಕೊರೊನಾದಿಂದ ಸೇಫ್ ಆಗ್ಬೇಕು ಅಂತ ಏಪ್ರಿಲ್ ತಿಂಗಳಲ್ಲಿ ವ್ಯಾಕ್ಸಿನ್ ಪಡೆದುಕೊಂಡಿದ್ರು.‌ ಇತ್ತೀಚೆಗೆ ವ್ಯಾಕ್ಸಿನ್ ಪಡೆದ ಮೇಲೆ ಅಯಸ್ಕಾಂತೀಯ ದೇಹ ಲಕ್ಷಣ ಆಗಿರೋದು, ಮೆಟಲ್‌ ದೇಹಕ್ಕೆ ‌ಅಂಟಿಕೊಂಡಿರುವ ವೀಡಿಯೋ ಇವರ ಕೈ ಸೇರುತ್ತೆ. ಕೂಡಲೇ ನಾನು ಒಂದು ಪ್ರಯತ್ನ ಮಾಡ್ತೇನೆ‌‌ ಅಂತ ಮನೆಯಲ್ಲಿರೋ ಸ್ಪೂನು, ನಾಣ್ಯಗಳನ್ನ ದೇಹದ ಬಳಿ ತೆಗೆದುಕೊಂಡು ಹೋದಾಗ ದೇಹದಲ್ಲಿ ಅಯಸ್ಕಾಂತೀಯ ಅನುಭವ ಆಗಿದೆ.‌ ಮತ್ತೆ ಮುಂದುವರೆದು ದೇಹದ ಮೇಲೆ ನಾಣ್ಯ, ಸ್ಪೂನು, ಸೌಟು‌ಗಳನ್ನೆಲ್ಲ ಇಟ್ಟಾಗ ಎಲ್ಲವೂ ದೇಹಕ್ಕೆ ಅಂಟಿಕೊಂಡಿದೆ.

ಅಯಸ್ಕಾಂತೀಯ ಅನುಭವ ಪಡೆದ‌ ರಾಮ್​ದಾಸ್ ತನ್ನ ನೆರೆಮನೆ ಸ್ನೇಹಿತ ಕೆ.ವಿ ಕಾಮತ್ ಅವರನ್ನು ‌ಕರೆದು ಮ್ಯಾಗ್ನೆಟಿಕ್ ಲಕ್ಷಣ ತೋರಿಸಿ ಚರ್ಚಿಸಿದ್ರು.‌ ವೈದ್ತರೊಬ್ಬರಲ್ಲೂ ಸಲಹೆ ಪಡೆದುಕೊಂಡ್ರು. ಆದ್ರೆ ಯಾವುದೇ ಸರಿಯಾದ ಉತ್ತರ ಸಿಕ್ಕಿಲ್ಲ. ಇವರ ಸ್ನೇಹಿತ ಕಾಮತರಿಗೂ ಮೆದುಳಿನ ಮೇಲೆ ಈ ಬದಲಾವಣೆ ಪರಿಣಾಮ‌ ಬೀಳುತ್ತಾ ಎಂಬ ಹತ್ತು‌ ಹಲವು ಪ್ರಶ್ನೆಗಳ ಜೊತೆ ಕೊನೆಗೆ ವೀಡಿಯೋ ಮಾಡಿ‌ ಹರಿಯಬಿಟ್ಟಾಗ ಜಿಲ್ಲಾಧಿಕಾರಿ‌ ಜಗದೀಶ್ ಇವರನ್ನ ಸಂಪರ್ಕಿಸಿ ಪರೀಕ್ಷೆಗೂ ಒಳಪಡಿಸಿದ್ದಾರೆ. ಪರೀಕ್ಷೆಯಲ್ಲಿ ಮ್ಯಾಗ್ನೆಟಿಕ್ ಲಕ್ಷಣ ಇರುವುದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕಂಡುಬಂದಿದೆ. ಆದ್ರೆ ಇದು ವ್ಯಾಕ್ಸಿನ್​ನಿಂದ ಆಗಿಲ್ಲ. ಈ ಬಗ್ಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆ ನಡೆಸಬೇಕಿದೆ ಅಂತ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರತಿಕ್ರಿಯಿಸಿದ್ದಾರೆ.

ದೆಹಲಿ ಹಾಗೂ‌ ನಾಸಿಕ್ ನಲ್ಲಿ ಇತ್ತೀಚೆಗೆ ಸ್ಟೀಲ್ ಸಂಬಂಧಿ ವಸ್ತುಗಳು ವ್ಯಕ್ತಿಯ ದೇಹಕ್ಕೆ ಅಂಟಿಕೊಳ್ಳುವ ಮೂಲಕ ಸುದ್ದಿಯಾಗಿತ್ತು. ಆದ್ರೆ ಅಲ್ಲಿನ ತಜ್ಞ ವೈದ್ಯರು ಇದೇನೂ ವ್ಯಾಕ್ಸಿನ್​ನಿಂದ ಆಗಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಅಂತಹದ್ದೇ ಲಕ್ಷಣ ಉಡುಪಿಯಲ್ಲಿ‌ ಮೊದಲ ಬಾರಿಗೆ ಕಂಡುಬಂದಿದ್ದು ಇನ್ನಷ್ಟು ಮಂದಿ ಆತಂಕಕ್ಕೊಳಗಾಗುವ ಮೊದಲು ಈ ಲಕ್ಷಣಕ್ಕೆ ಇರುವ ನೈಜ ಕಾರಣ ತಜ್ಞ ವೈದ್ಯರು ಕಾರಣ ಪತ್ತೆ ಹಚ್ಚಬೇಕಿದೆ.

ಇತ್ತೀಚೆಗಷ್ಟೇ ಪಿಐಬಿ ಫ್ಯಾಕ್ಟ್ ಚೆಕ್ ಈ ಸುದ್ದಿಯನ್ನು ಅಲ್ಲಗಳೆದಿತ್ತು. ಲಸಿಕೆಯಿಂದ ಯಾವುದೇ ಅಯಸ್ಕಾಂತೀಯ ಗುಣ ಉಂಟಾಗುವುದಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ

ಕೊವಿಡ್ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತ ಶಕ್ತಿ ಉಂಟಾಗಿದೆ ಎಂದ ಉಲ್ಲಾಸನಗರ ವ್ಯಕ್ತಿಯ ವಾದ; ವಿಡಿಯೊ ವೈರಲ್