ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ ಒಟ್ಟು 1240 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. 1252 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ 0.74, ಸೋಂಕಿತರ ಸಾವಿನ ಸರಾಸರಿ ಶೇ 1.77 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,51,844 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 28,96,079 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 18,378 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಸೋಂಕಿನಿಂದ 37,361 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರದಲ್ಲಿ ಒಟ್ಟು 319 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ. 264 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 12,38,515 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 12,14,901 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ 7609 ಸಕ್ರಿಯ ಪ್ರಕರಣಗಳಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 319, ದಕ್ಷಿಣ ಕನ್ನಡ 264, ಉಡುಪಿ 111, ಮೈಸೂರು 88, ಹಾಸನ 76, ಕೊಡಗು 52, ಬೆಳಗಾವಿ 49, ಉತ್ತರ ಕನ್ನಡ 42, ಕೋಲಾರ 32, ತುಮಕೂರು 35, ಶಿವಮೊಗ್ಗ 32, ಮಂಡ್ಯ 29, ಚಿಕ್ಕಮಗಳೂರು 26, ಧಾರವಾಡ 17, ಬೆಂಗಳೂರು ಗ್ರಾಮಾಂತರ 15, ಚಾಮರಾಜನಗರ 13, ಚಿತ್ರದುರ್ಗ 11, ಬಳ್ಳಾರಿ 7, ದಾವಣಗೆರೆ 6, ಕೊಪ್ಪಳ 5, ಕಲಬುರಗಿ 3, ರಾಯಚೂರು, ವಿಜಯಪುರ 2, ಯಾದಗಿರಿ, ರಾಮನಗರ, ಗದಗ, ಬಾಗಲಕೋಟೆ 1.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ದಕ್ಷಿಣ ಕನ್ನಡ 5, ಬೆಂಗಳೂರು ನಗರ 4, ಬೆಳಗಾವಿ 3, ಮಂಡ್ಯ, ಮೈಸೂರು 2, ತುಮಕೂರು, ಉಡುಪಿ, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮಗರಾನಗರ, ಕೋಲಾರ 1.
ಇಂದಿನ 02/09/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/7dP5Zda4cg @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/IjMrom5WLT
— K’taka Health Dept (@DHFWKA) September 2, 2021
(Coronavirus Karnataka Numbers 1240 infected 22 deaths on September 22)
ಇದನ್ನೂ ಓದಿ: ಕೇರಳದಲ್ಲಿ ಒಂದೇ ದಿನ 32,097 ಹೊಸ ಕೊವಿಡ್ ಪ್ರಕರಣ ಪತ್ತೆ, 188 ಸಾವು; ಟಿಪಿಆರ್ ಶೇ 18.41
ಇದನ್ನೂ ಓದಿ: Coronavirus cases in India: ದೇಶದಲ್ಲಿ 47,092 ಹೊಸ ಕೊವಿಡ್ ಪ್ರಕರಣ ಪತ್ತೆ, 509 ಮಂದಿ ಸಾವು
Published On - 9:17 pm, Thu, 2 September 21