Covid 19 Karantaka Update: ಕರ್ನಾಟಕದಲ್ಲಿ 3310 ಮಂದಿಗೆ ಕೊರೊನಾ ಸೋಂಕು, 114 ಮಂದಿ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 25, 2021 | 8:07 PM

ಬೆಂಗಳೂರಿನಲ್ಲಿ 614 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 17 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 28,26,754ಕ್ಕೆ ಏರಿಕೆಯಾಗಿದೆ.

Covid 19 Karantaka Update: ಕರ್ನಾಟಕದಲ್ಲಿ 3310 ಮಂದಿಗೆ ಕೊರೊನಾ ಸೋಂಕು, 114 ಮಂದಿ ಸಾವು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಟ್ಟು 3,310 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 114 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 4 ಸಾವಿರಕ್ಕೂ ಕಡಿಮೆಯಾಗಿರುವುದು ಗಮನಾರ್ಹ ಬೆಳವಣಿಗೆ ಎನಿಸಿದೆ.

ಬೆಂಗಳೂರಿನಲ್ಲಿ 614 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 17 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 28,26,754ಕ್ಕೆ ಏರಿಕೆಯಾಗಿದೆ. ಈ ಪೈಕಿ 26,84,997 ಜನರು ಗುಣಮುಖರಾಗಿದ್ದಾರೆ. 1,07,195 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 34539 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 614 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,09,687ಕ್ಕೆ ಏರಿಕೆಯಾಗಿದೆ. ಈ ಪೈಕಿ 11,27,900 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 17 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15554 ಜನರು ಸಾವನ್ನಪ್ಪಿದ್ದಾರೆ. 66,232 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 3310 ಜನರಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 614 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಾಗಲಕೋಟೆ 8, ಬಳ್ಳಾರಿ 29, ಬೆಳಗಾವಿ 87, ಬೆಂಗಳೂರು ಗ್ರಾಮಾಂತರ 80, ಬೀದರ್ 6, ಚಾಮರಾಜನಗರ 71, ಚಿಕ್ಕಬಳ್ಳಾಪುರ 47, ಚಿಕ್ಕಮಗಳೂರು 39, ಚಿತ್ರದುರ್ಗ 13, ದಕ್ಷಿಣ ಕನ್ನಡ 377, ದಾವಣಗೆರೆ 89, ಧಾರವಾಡ 34, ಗದಗ 23, ಹಾಸನ 399, ಹಾವೇರಿ 29, ಕಲಬುರಗಿ 14, ಕೊಡಗು 183, ಕೋಲಾರ 140, ಕೊಪ್ಪಳ 21, ಮಂಡ್ಯ 119, ಮೈಸೂರು 367, ರಾಯಚೂರು 14, ರಾಮನಗರ 11, ಶಿವಮೊಗ್ಗ 212, ತುಮಕೂರು 80, ಉಡುಪಿ 92, ಉತ್ತರ ಕನ್ನಡ 99, ವಿಜಯಪುರ 8, ಯಾದಗಿರಿ 5 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ 114 ಜನರು ಸಾವನ್ನಪ್ಪಿದ್ದಾರೆ. ಮೈಸೂರು 22, ಬೆಂಗಳೂರು ನಗರ 17, ದಕ್ಷಿಣ ಕನ್ನಡ 14, ಬಳ್ಳಾರಿ, ಧಾರವಾಡ 9, ದಾವಣಗೆರೆ, ಶಿವಮೊಗ್ಗ 5, ಬಾಗಲಕೋಟೆ, ಮಂಡ್ಯ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾವೇರಿ ತಲಾ 3, ಬೆಳಗಾವಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ರಾಯಚೂರು, ರಾಮನಗರ, ಉಡುಪಿ ತಲಾ ಇಬ್ಬರು, ವಿಜಯಪುರ, ಕೊಡಗು ತಲಾ ಒಬ್ಬರು ಮೃತಪಟ್ಟಿದ್ದಾರೆ.

(Coronavirus Karnataka Numbers 3310 People Infected of Covid 114 deaths june 25)

ಇದನ್ನೂ ಓದಿ: ಕೊವಿಡ್ ಲಸಿಕೆಯನ್ನು ಗರ್ಭಿಣಿಯರಿಗೆ ನೀಡಬೇಕು, ಅದು ಅವರಿಗೆ ಉಪಯುಕ್ತ: ಐಸಿಎಂಆರ್

ಇದನ್ನೂ ಓದಿ: ಭಾರತಕ್ಕೆ ಶೀಘ್ರ ಮತ್ತೊಂದು ಲಸಿಕೆ: ಕೊವಾವ್ಯಾಕ್ಸ್​ ಲಸಿಕೆ ಉತ್ಪಾದನೆ ಆರಂಭಿಸಿದ ಪುಣೆಯ ಸೆರಮ್ ಇನ್​ಸ್ಟಿಟ್ಯೂಟ್

Published On - 7:56 pm, Fri, 25 June 21