ಬೆಡ್ ಸಿಕ್ಕಿದರೆ, ಆಕ್ಸಿಜನ್ ಸಿಗಲ್ಲ ಹೀಗಾದ್ರೆ ಹೇಗೆ: ಯಲಹಂಕದ ರೀಗನ್ ಆಸ್ಪತ್ರೆಯ ವಿರುದ್ಧ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರೋಶ
Oxygen Shortage: ಬೆಡ್ ಸಿಕ್ರೆ, ಆಕ್ಸಿಜನ್ ಸಿಕ್ಕಲ್ಲ ಹೀಗಾದ್ರೆ ಹೇಗೆ? ನೀವೇ ಆಕ್ಸಿಜನ್ ತಗೊಂಡು ಬನ್ನಿ ಅಂತ ಖಾಸಗಿ ಆಸ್ಪತ್ರೆಯವರು ಹೇಳ್ತಾರೆ. ಆಕ್ಸಿಜನ್ ಇಲ್ಲ ಅಂದ್ರೆ ಆಸ್ಪತ್ರೆ ಏನಕ್ಕೆ ಇರ್ಬೇಕು?. ಆಕ್ಸಿಜನ್ ಇಲ್ಲ ಅಂತೇಳಿ ಖಾಸಗಿ ಆಸ್ಪತ್ರೆಗಳ ಜನರನ್ನ ಸಾಯಿಸ್ತಿದ್ದಾರೆ.
ಬೆಂಗಳೂರು: ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ನಮ್ಮಣ್ಣ ಸತ್ತಿದ್ದು. ಇನ್ನು ಎಷ್ಟು ಜನರನ್ನ ಬಲಿ ಪಡೆಯಬೇಕು? ಐದಾರು ಆಸ್ಪತ್ರೆ ಸುತ್ತಿದ್ವಿ, ಆದ್ರೂ ಪ್ರಾಣ ಉಳಿದಿಲ್ಲ. ಬೆಡ್ ಸಿಕ್ರೆ, ಆಕ್ಸಿಜನ್ ಸಿಕ್ಕಲ್ಲ ಹೀಗಾದ್ರೆ ಹೇಗೆ? ನೀವೇ ಆಕ್ಸಿಜನ್ ತಗೊಂಡು ಬನ್ನಿ ಅಂತ ಖಾಸಗಿ ಆಸ್ಪತ್ರೆಯವರು ಹೇಳ್ತಾರೆ. ಆಕ್ಸಿಜನ್ ಇಲ್ಲ ಅಂದ್ರೆ ಆಸ್ಪತ್ರೆ ಏನಕ್ಕೆ ಇರ್ಬೇಕು?. ಆಕ್ಸಿಜನ್ ಇಲ್ಲ ಅಂತೇಳಿ ಖಾಸಗಿ ಆಸ್ಪತ್ರೆಗಳು ಜನರನ್ನು ಸಾಯಿಸ್ತಿದ್ದಾರೆ. ಕೋವಿಡ್ ರೋಗಿಗಳಿಗೆ ಅಂತ ಬೆಡ್ ಇದ್ಮೇಲೆ ಆಕ್ಸಿಜನ್ ಯಾಕಿಲ್ಲ..? ವೈದ್ಯರನ್ನ ನಾವು ಪ್ರಶ್ನೆ ಮಾಡೋದೆ ತಪ್ಪಾ? ಯಲಹಂಕದ ರೀಗನ್ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬದ ಆಕ್ರೋಶದ ನುಡಿಗಳಿವು.
ಸರ್ಕಾರ ಇದ್ದು ಏನ್ ಮಾಡ್ತಿದೆ. ನಮ್ಮಂತಹ ಬಡವರು ಏನ್ ಮಾಡ್ಬೇಕು?.ನಮ್ಮಣ್ಣಗೆ 53 ವರ್ಷ ವಯಸ್ಸಾಗಿತ್ತು, ಅಡಿಗೆ ಕೆಲಸ ಮಾಡ್ತಿದ್ರು. ಈಗ ಆಕ್ಸಿಜನ್ ಇಲ್ಲದೆ ಪ್ರಾಣಪಕ್ಷಿ ಹಾರಿಹೋಯ್ತು. ಬಿಬಿಎಂಪಿ ಹೇಳಿದಕ್ಕೆ ಅಡ್ಮೆಂಟ್ ಮಾಡಿಕೊಂಡ್ರು. ಆ್ಯಂಬುಲೆನ್ಸ್ ಗೆ ಅಂತ 10 ಸಾವಿರ ಆಯ್ತು. ಬಿಬಿಎಂಪಿ ಕಡೆಯಿಂದ ಹೋದ್ರೂ ಆಸ್ಪತ್ರೆಯಿಂದ ಚಿತಾಗಾರಕ್ಕೆ ಬರೋಕೆ 16 ಸಾವಿರ ಆಯ್ತು ಎಂದು ಕುಟುಂಬ ಕಣ್ಣೀರಿಟ್ಟಿದೆ.
ಕೊರೊನಾ ಮಹಾಮಾರಿಗೆ 30 ವರ್ಷದ ಯುವಕ ಬಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಯುವಕ ಚಿರಂಜೀವಿ ಉಸಿರಾಟ ಸಮಸ್ಯೆ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕಳೆದ ವಾರ ಅಣ್ಣನಿಗೆ ಜ್ವರ ಕಾಣಿಸಿಕೊಂಡಿದೆ. ಎರಡು ದಿನ ನಂತರ ಜ್ವರ ಹೋಗಿದೆ. ನಂತರ ಅಮ್ಮನಿಗೆ ಜ್ವರ ಬಂದಿದೆ. ನಂತರ ನಾನು ಅಮ್ಮನ ಮನೆಗೆ ಬಂದೆ. ಅಮ್ಮ ಮತ್ತೆ ಅಣ್ಣನನ್ನ ಕರೆದುಕೊಂಡು ಆಸ್ಪತ್ರೆಗೆ ಹೋದೆ. ಚೆಕ್ ಮಾಡಿದಾಗ ಅಮ್ಮನಿಗೆ ಮತ್ತು ಅಣ್ಣನಿಗೆ ಪಾಸಿಟಿವ್ ಇದೆ ಅಂದ್ರು. ಅಮ್ಮ ರಿಕವರಿ ಆದರು. ಅಣ್ಣ ಕೊರೊನಾ ಕಿಟ್ ತೆಗೆದುಕೊಳ್ಳುತ್ತಿದ್ದರು. ಶನಿವಾರ ರಾತ್ರಿ ತುಂಬಾನೆ ಕೆಮ್ಮು ಶುರುವಾಗಿದೆ. ಕೆ.ಸಿ.ಜನರಲ್ ಗೆ ಕರೆದುಕೊಂಡು ಹೋದಾಗ ಆಕ್ಸಿಜನ್ ಲೆವಲ್ ಕಡಿಮೆ ಇದೆ ಅಂದ್ರು. ಕೈ ಕಾಲು ಹಿಡಿದ್ರು ಕೂಡ ಬೆಡ್ ಸಿಗಲಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲು ಮಾಡಿದ್ರು. ಡಾಕ್ಟರ್ ಇವರಿಗೆ ಧೈರ್ಯ ಕಡಿಮೆ ಇದೆ ಅಂತಾ ಹೇಳಿದ್ರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾಸು ಕಾಸು ಅವರ ಹೆಣದ ಮೇಲೆ ಹಾಕಿಕೊಳ್ಳಲಿ ಕಾಸು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಣ ಕೊಟ್ಟಿದ್ದೀನಿ. ಹಣ ಕೊಟ್ಟ ನಂತರ ಒಳಗೆ ಕರೆದುಕೊಂಡು ಹೋದರು. ಅಣ್ಣನ ಹತ್ತಿರ ಮೊಬೈಲ್ ಕೂಡ ಇರಲಿಲ್ಲ. ದೊಡ್ಡ ಮೊಬೈಲ್ ಬೇಡ ಚಿಕ್ಕ ಮೊಬೈಲ್ ಕೊಡಿ ಅಂದ್ರು. ಮೊಬೈಲ್ ಕೊಟ್ಟು ಕಳಿಸಿದ್ರು ಈಗ ನಾಟ್ ರೀಚೆಬಲ್.ವಾರ್ಡ್ ಗೆ ಫೋನ್ ಮಾಡುದ್ರೆ ಪಿಕ್ ಕೂಡ ಮಾಡಲ್ಲ. ಒಂದೊಂದು ಮನೆಯಲ್ಲಿ ಒಬ್ಬರು ಮಕ್ಕಳಿರ್ತಾರೆ. ಅಡ್ಮಿಟ್ ಮಾಡಿದಾಗಿನಿಂದಲೂ ಕ್ರಿಟಿಕಲ್ ಇದೆ ಅಂತಿದ್ರು. ಕ್ರಿಟಿಕಲ್ ಇದೆ ಅಂತಾ ತಾನೆ ಅಡ್ಮಿಟ್ ಮಾಡಿದ್ದು ರೀ.ಇಲ್ಲ ಅಂದ್ರೆ ಮನೆಯಲ್ಲಿ ಚಿಕಿತ್ಸೆ ನೀಡ್ತಾ ಇರ್ಲಿಲ್ವಾ. 30 ವರ್ಷ ಇನ್ನೂ ಮದುವೆ ಆಗಿಲ್ಲ..ನಮ್ಮ ತಂದೆ ತಾಯಿಗೆ ಯಾರು ದಿಕ್ಕು?. ಸತ್ತ ನಂತರ ಮೊಬೈಲ್ ಕೇಳಿದ್ರು ಕೊಡಲಿಲ್ಲ ಎಂದು ಮೃತ ಚಿರಂಜೀವಿ ಸಹೋದರಿ ಭವ್ಯ ಹೇಳಿದ್ದಾರೆ.
(Coronavirus oxygen crisis no bed available in hospital in Bangalore youth dead)
ಇದನ್ನೂ ಓದಿ: ಕೊರೊನಾ ಸಂಕಷ್ಟ: ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಬಿಲ್ ಕಟ್ಟಲು ಆಗದೇ ಪತಿಯ ಮೃತದೇಹ ಬಿಟ್ಟು ಹೋದ ಮಹಿಳೆ
Published On - 7:08 pm, Tue, 27 April 21