AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಗಮ ಮಂಡಳಿ ನೇಮಕಾತಿ: ಸಂಭಾವ್ಯರಿಗೆ ಕರೆ ಮಾಡಿ ವಿಚಾರಿಸುತ್ತಿರುವ ಸುರ್ಜೇವಾಲ, ಇಲ್ಲಿದೆ ಪಟ್ಟಿ

ಸಭೆ ನಡುವೆಯೇ ಹಿರಿಯ ಶಾಸಕರಿಗೆ ಸುರ್ಜೇವಾಲ ದೂರವಾಣಿ ಕರೆ ಮಾಡಿದ್ದು, ಪಟ್ಟಿ ಪ್ರಕಟಿಸಿದ ನಂತರ ತಕರಾರು ಮಾಡಬಾರದು ಎಂದು ಸೂಚನೆ ಕೊಟ್ಟಿದ್ದಾರೆ. ಅಲ್ಲದೆ, ಕೊಟ್ಟ ನಿಗಮ ಮಂಡಳಿ ಜವಾಬ್ದಾರಿ ನಿಭಾಯಿಸಬೇಕೆಂದು ಸೂಚನೆ ನೀಡಿದ್ದಾರೆ. ಏನಾದರೂ ತಕರಾರು ಇದ್ದರೆ ಈಗಲೇ ತಿಳಿಸಿ ಎಂದೂ ಹೇಳಿದ್ದಾರೆ.

ನಿಗಮ ಮಂಡಳಿ ನೇಮಕಾತಿ: ಸಂಭಾವ್ಯರಿಗೆ ಕರೆ ಮಾಡಿ ವಿಚಾರಿಸುತ್ತಿರುವ ಸುರ್ಜೇವಾಲ, ಇಲ್ಲಿದೆ ಪಟ್ಟಿ
ರಣದೀಪ್ ಸಿಂಗ್ ಸುರ್ಜೇವಾಲ
Shivaprasad B
| Updated By: Ganapathi Sharma|

Updated on: Nov 21, 2023 | 10:55 PM

Share

ಬೆಂಗಳೂರು, ನವೆಂಬರ್ 21: ನಿಗಮ ಮಂಡಳಿಗಳ ಅಧ್ಯಕ್ಷಸ್ಥಾನ ನೇಮಕ ವಿಚಾರವಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಂಭಾವ್ಯರ ಪಟ್ಟಿ ಸಿದ್ಧವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜತೆಗಿನ ಸಭೆಯ ನಡುವೆಯೇ ಸುರ್ಜೇವಾಲ ಅವರು ಶಾಸಕರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದಾರೆ.

ಸಭೆಯಲ್ಲಿ ಸಚಿವರಾದ ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್ ಕೂಡ ಭಾಗವಹಿಸಿದ್ದಾರೆ. ಸಭೆ ನಡುವೆಯೇ ಹಿರಿಯ ಶಾಸಕರಿಗೆ ಸುರ್ಜೇವಾಲ ದೂರವಾಣಿ ಕರೆ ಮಾಡಿದ್ದು, ಪಟ್ಟಿ ಪ್ರಕಟಿಸಿದ ನಂತರ ತಕರಾರು ಮಾಡಬಾರದು ಎಂದು ಸೂಚನೆ ಕೊಟ್ಟಿದ್ದಾರೆ. ಅಲ್ಲದೆ, ಕೊಟ್ಟ ನಿಗಮ ಮಂಡಳಿ ಜವಾಬ್ದಾರಿ ನಿಭಾಯಿಸಬೇಕೆಂದು ಸೂಚನೆ ನೀಡಿದ್ದಾರೆ. ಏನಾದರೂ ತಕರಾರು ಇದ್ದರೆ ಈಗಲೇ ತಿಳಿಸಿ ಎಂದೂ ಹೇಳಿದ್ದಾರೆ.

ಯಾರೆಲ್ಲ ಒಪ್ಪಿಕೊಳ್ಳಲಿದ್ದಾರೆಂದು ಖಚಿತಪಡಿಸಿಕೊಳ್ಳುತ್ತಿರುವ ಸುರ್ಜೇವಾಲ, ಒಬ್ಬೊಬ್ಬರೇ ಹಿರಿಯ ಶಾಸಕರಿಗೆ ಕರೆ ಮಾಡಿ ಮಾತಾಡುತ್ತಿದ್ದಾರೆ. ಸಚಿವಸ್ಥಾನಕ್ಕೆ ಪಟ್ಟು ಹಿಡಿದಿರುವ ಕೆಲ ಹಿರಿಯ ಶಾಸಕರು ಒಪ್ಪಿಕೊಳ್ಳದಿದ್ರೆ, ಪಟ್ಟಿ ಪ್ರಕಟಿಸಿದ ನಂತರ ಅಧಿಕಾರ ವಹಿಸಿಕೊಳ್ಳದಿದ್ದರೆ ತಪ್ಪು ಸಂದೇಶ ರವಾನೆ ಆಗಲಿದೆ ಎಂದು ಈಗಲೇ ಗೊಂದಲ ಬಗೆಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಸಂಭಾವ್ಯರ ಪಟ್ಟಿ ಹೀಗಿದೆ

  • ಪಿ.ಎಂ ನರೇಂದ್ರ ಸ್ವಾಮಿ
  • ರಮೇಶ್ ಬಾಬು ಬಂಡಿಸಿದ್ದೇಗೌಡ
  • ಅನಿಲ್ ಚಿಕ್ಕಮಾದು
  • ಟಿ.ಡಿ ರಾಜೇಗೌಡ
  • ಶಿವಲಿಂಗೇಗೌಡ
  • ಬಿ.ಕೆ ಸಂಗಮೇಶ್
  • ಬಂಗಾರಪೇಟೆ ನಾರಾಯಣಸ್ವಾಮಿ
  • ಕೆ.ವೈ ನಂಜೇಗೌಡ
  • ಬಿ.ಆರ್ ಪಾಟೀಲ್
  • ಗಣೇಶ್ ಹುಕ್ಕೇರಿ
  • ಮಹಾಂತೇಶ್ ಕೌಜಲಗಿ
  • ಯಶವಂತ್ ರಾಯ್ ಗೌಡ ಪಾಟೀಲ್
  • ಬಿ.ಜಿ ಗೋವಿಂದಪ್ಪ
  • ರಾಘವೇಂದ್ರ ಹಿಟ್ನಾಳ್
  • ರಘುಮೂರ್ತಿ
  • ಭೀಮಣ್ಣ ನಾಯ್ಕ್
  • ಸತೀಶ್ ಸೈಲ್
  • ಪ್ರಸಾದ್ ಅಬ್ಬಯ್ಯ
  • ಜಿ.ಟಿ ಪಾಟೀಲ್
  • ಡಿ.ಆರ್ ಪಾಟೀಲ್
  • ಬಸನಗೌಡ ತುರುವಿಹಾಳ್

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ