AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಣಿ ವಿವಿ ಕ್ಯಾಂಪಸ್​ನಲ್ಲಿರುವ ಹೊಸ ಹಾಸ್ಟೆಲನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಿದ ಸರ್ಕಾರ, ಭಾರೀ ವಿರೋಧ

ಅದು ಮೈಸೂರು ಅರಸರು ಮಹಿಳೆಯರ ಶಿಕ್ಷಣಕ್ಕೆ ಅಂತಾ ಬೆಂಗಳೂರಿನ ಮದ್ಯ ಭಾಗದಲ್ಲಿ ಒಳ್ಳೆ ಜಾಗ ನೀಡಿ ಕಟ್ಟಿರುವ ಮಹಾರಾಣಿ ಕಾಲೇಜು. ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮಹಾರಾಣಿ ಕಾಲೇಜ್ ನಿರ್ಮಾಣ ಮಾಡಿದ್ದಾರೆ. ವಿದ್ಯಾರ್ಥಿನಿಯರಿಗೆ ಬೇಕಾದ ಸೌಲಭ್ಯ ನೀಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಈ ಕಾಲೇಜು ಜಾಗದ ಮೇಲೆ ಕಣ್ಣು ಬೀದಿರುವುದು ವಿವಿ ವಿರೋಧಕ್ಕೆ ಕಾರಣವಾಗಿದೆ.

ಮಹಾರಾಣಿ ವಿವಿ ಕ್ಯಾಂಪಸ್​ನಲ್ಲಿರುವ ಹೊಸ ಹಾಸ್ಟೆಲನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಿದ ಸರ್ಕಾರ, ಭಾರೀ ವಿರೋಧ
ಮಹಾರಾಣಿ ವಿವಿ ಕ್ಯಾಂಪಸ್​ನಲ್ಲಿ ಕಟ್ಟಲಾಗಿರುವ ಹೊಸ ಹಾಸ್ಟೆಲ್
Vinay Kashappanavar
| Updated By: ಆಯೇಷಾ ಬಾನು|

Updated on: Nov 22, 2023 | 7:16 AM

Share

ಬೆಂಗಳೂರು, ನ.22: ಮೈಸೂರಿನ ಅರಸರ ಕೊಡೆಗೆಯಿಂದ ಪ್ರತಿ ವರ್ಷ ಸಾವಿರಾರು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಮಹಾರಾಣಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ (Maharani Cluster University) . ಆದರೆ ಸರ್ಕಾರ ಮಾತ್ರ ಪ್ರತಿ ವರ್ಷ ಇಂಚಿಚೂ ಭೂಮಿಯನ್ನು ಬೇರೆ ಬೇರೆ ಇಲಾಖೆಗಳಿಗೂ ನೀಡಲು ಮುಂದಾಗಿದ್ದು ಮಹಾರಾಣಿ ವಿಶ್ವವಿದ್ಯಾಲಯ ದಿನದಿಂದ ದಿನಕ್ಕೆ ಅವನತಿ ಹಾದಿ ಹಿಡದಿದೆ. ಮಹಾರಾಣಿ ವಿವಿಯ ಕ್ಯಾಂಪಸ್ ಒಳಭಾಗದಲ್ಲಿ ನಿರ್ಮಾಣ ಮಾಡಿರುವ ಹೊಸ ಹಾಸ್ಟೆಲನ್ನ ಈಗ ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ನೀಡಲು ಮುಂದಾಗಿದೆ. ಸಮಾಜ ಕಲ್ಯಾಣ ಇಲಾಖೆ ಇಲ್ಲಿ ಒಬಿಸಿ ಹಾಸ್ಟೆಲ್ ಗೆ ಮುಂದಾಗಿದೆ.

ಮಹಾರಾಣಿ ವಿವಿ ವಿದ್ಯಾರ್ಥಿಗಳಿದ್ದಾರೆ ಈಗ ಕ್ಯಾಂಪಸ್ ನಲ್ಲಿ ಹೊಸ ಹಾಸ್ಟೆಲ್ ಸಮಾಜ ಕಲ್ಯಾಣ ಇಲಾಖೆಗೆ ನೀಡಿದ್ರೆ ಬೇರೆ ವಿದ್ಯಾರ್ಥಿನಿಯರು ಬರೋದರಿಂದ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು ವಿರೋಧ ಕೇಳಿ ಬಂದಿದೆ. ಮಹಾರಾಣಿಯ ಸಾವಿರಾರು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ಹಾಸ್ಟೆಲ್ ಸಿಗುತ್ತಿಲ್ಲ. ಹೀಗಿರುವಾಗ ಈಗ ಹೊಸದಾಗಿ ನಿರ್ಮಾಣವಾಗಿರುವ ಹೊಸ ಹಾಸ್ಟೆಲ್ ನ ಸಮಾಜ ಕಲ್ಯಾಣ ಇಲಾಖೆಗೆ ನೀಡಿ ಒಬಿಸಿ ಹಾಸ್ಟೆಲ್ ಮಾಡಿದ್ರೆ ನಮಗೆ ಸಮಸ್ಯೆ ಆಗುತ್ತೆ ಎಂದು ಇಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರ ವಿರೋಧ

ಮಹಿಳೆಯರ ಶಿಕ್ಷಣಕ್ಕೆ ಅಂತಾ ಮಹಾರಾಣಿ ವಿವಿಯಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಈಗ ಈ ಕ್ಯಾಂಪಸ್ ನಲ್ಲಿ ಸಮಾಜ ಕಲ್ಯಾಣ ಇಲಾಖೆ ಒಬಿಸಿ ಹಾಸ್ಟೆಲ್ ನಿರ್ಮಾಣಕ್ಕೆ ಮುಂದಾಗಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಇದನ್ನ ಮಹಾರಾಣಿ ಕಾಲೇಜಿಗೆ ಬಿಡಬೇಕು ಬೇರೆ ಇಲಾಖೆಗೆ ನೀಡಬಾರದು ಅನ್ನೋ ಕೂಗು ಕೇಳಿ ಬಂದಿದೆ. ವಿದ್ಯಾರ್ಥಿನಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳ‌ ದುರಸ್ತಿಗೆ ಖಾಸಗಿ ನೆರವು! ಪ್ರಯೋಗಕ್ಕೆ ಮುಂದಾದ ಚಾಮರಾಜನಗರ ಡಿಸಿ ಶಿಲ್ಪಾನಾಗ್

ರೂಸಾ ಕೇಂದ್ರದ ಶೈಕ್ಷಣಿಕ ಅಭಿವೃದ್ಧಿ ಶಿಕ್ಷಣ ಅಭಿಯಾನದಡಿಯಲ್ಲಿ ಕೇಂದ್ರದ ಅನುದಾನದಲ್ಲಿ 29 ಕೋಟಿ ವೆಚ್ಚದಲ್ಲಿ ಈ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. 152 ಕೊಠಡಿಯ ಹೈಟೆಕ್ ಹಾಸ್ಟೆಲ್ ಮಹಿಳಾ ವಿದ್ಯಾರ್ಥಿನಿಯರಿಗೆ ನಿರ್ಮಾಣ ಮಾಡಲಾಗಿದೆ. ಆದ್ರೆ ಸರ್ಕಾರ ಮಹಿಳಾ ಹಾಸ್ಟೆಲ್ ವಿವಿ ಗಮನಕ್ಕೆ ತರಲಾರದೆ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದೆ. ಸರ್ಕಾರದದ ಈ ನಿರ್ಧಾರ ರಾಜ್ಯದ ಮಹಿಳೆಯರ ಹಾಗೂ ಕರ್ನಾಟಕ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಕಲಿಕೆಗೆ ತೊಂದರೆಯಾಗಿದೆ. ಸರ್ಕಾರದ ನಡೆಗೆ ವಿವಿ ಸಿಬ್ಬಂದಿ ವಿರೋಧ ಹೊರ ಹಾಕಿದ್ದಾರೆ. ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ 6.500 ವಿದ್ಯಾರ್ಥಿನಿಯರಿಂದ್ದಾರೆ. ಬೇಡಿಕೆ ಇರುವ ವಿದ್ಯಾರ್ಥಿನಿಯರಿಗೆ ಇಲ್ಲಿ ಹಾಸ್ಟೆಲ್ ಲಭ್ಯವಿಲ್ಲ. ಸದ್ಯ ಇರುವ ಕಟ್ಟಡ ದಶಕಗಳ ಹಳೆಯದು ಶಿಥಿಲಗೊಂಡಿದೆ. ಬೀಳವ ಸ್ಥಿತಿ ಇದೆ ಸದ್ಯ ಇತಂಹ ಕಟಡ್ಡದಲ್ಲಿಯೇ 600 ವಿದ್ಯಾರ್ಥಿನಿಯರಿದ್ದಾರೆ. ಇನ್ನು 500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಹಾಸ್ಟೆಲ್ ಬೇಡಿಕೆ ಇದೆ. ಅಲ್ಲದೆ ಈ ಹೊಸ ಹಾಸ್ಟೆಲ್ ಕಾಲೇಜಿನ ಮದ್ಯಭಾಗದಲ್ಲಿದೆ ಈಗ ಸಮಾಜ ಕಲ್ಯಾಣ ಇಲಾಖೆ ಬೇರೆ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಮಾಡಿಕೊಟ್ಟರೆ ಕ್ಯಾಂಪಸ್ ಅವರಣದಲ್ಲಿ ಸಮಸ್ಯೆಯಾಗುತ್ತೆ ಅಂತಿದ್ದಾರೆ.

ಸದ್ಯ ಮಹರಾಣಿ ಕ್ಯಾಂಪಸ್ ನಲ್ಲಿ ಹೊಸ ಹಾಸ್ಟೆಲ್ ನಿರ್ಮಾಣ ಮಾಡಿ ಬೇರೆಯವರಿಗೆ ನೀಡ್ತೀರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ಕಟ್ಟಿರುವ ಹಾಸ್ಟೆಲ್ ಈಗ ಸಮಾಜ ಕಲ್ಯಾಣ ಇಲಾಖೆ ಬಿಟ್ಟು ಕೊಡುವುದಕ್ಕೆ ಸಾಕಷ್ಟು ವಿರೋಧ ಶುರುವಾಗಿದ್ದು ಸರ್ಕಾರ ಮುಂದಿನ ದಿನಗಳಲ್ಲಿ ಯಾವ ನಿರ್ಧಾರಕ್ಕೆ ಬರುತ್ತೆ ಅಂತಾ ಕಾದು ನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲುಜ ಇದರ ಮೇಲೆ ಕ್ಲಿಕ್ ಮಾಡಿ