ಜೋಯ್ಡಾ: ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಸೂಪಾ ಡ್ಯಾಂಗೆ ಬಿದ್ದ ಯುವಕ-ಯುವತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 12, 2021 | 8:34 PM

ಜೊಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಹಾಗೂ ಅಗ್ನಿಶಾಮಕದಳ ಬೋಟ್‌ಗಳಲ್ಲಿ ತೆರಳಿ ಟ್ಯೂಬ್ ಬೋಟ್ ಹಾಗೂ ಕಯಾಕ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ.

ಜೋಯ್ಡಾ: ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಸೂಪಾ ಡ್ಯಾಂಗೆ ಬಿದ್ದ ಯುವಕ-ಯುವತಿ
ಸೂಪಾ ಆಣೆಕಟ್ಟು
Follow us on

ಕಾರವಾರ: ಸೆಲ್ಫಿ ತೆಗೆಯುವಾಗ ಜಲಾಶಯಕ್ಕೆ ಬಿದ್ದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ರಾಮನಗರದಲ್ಲಿ ನಡೆದಿದೆ. ಜೋಯ್ಡಾದ ಸೂಪಾ‌ ಡ್ಯಾಂ ಬಳಿ ನಿಂತು ಈ ಜೋಡಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಸೂಪಾ ಆಣೆಕಟ್ಟನ್ನು ಕಾಳಿ ನದಿಗೆ ಕಟ್ಟಲಾಗಿದ್ದು, ಇದು ಕಾಳಿ ನದಿಗೆ ಕಟ್ಟಲಾದ ಅತಿ ದೊಡ್ಡ ಡ್ಯಾಂ ಆಗಿದೆ. ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಅತಿದೊಡ್ಡ ಆಣೆಕಟ್ಟು ಎಂಬ ಖ್ಯಾತಿಯು ಸಹ ಸೂಪಾ ಆಣೆಕಟ್ಟಿಗಿದೆ. ಸದ್ಯ ಜೋಡಿಗಳ ಫೋನ್ ನಂಬರ್ ಮಾತ್ರ ದೊರಕಿದ್ದು, ಉಳಿದಂತೆ ಯಾವುದೇ ಮಾಹಿತಿ ದೊರಕಿಲ್ಲ. ಜೊಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಹಾಗೂ ಅಗ್ನಿಶಾಮಕದಳ ಬೋಟ್‌ಗಳಲ್ಲಿ ತೆರಳಿ ಟ್ಯೂಬ್ ಬೋಟ್ ಹಾಗೂ ಕಯಾಕ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ.

ಸಿಡಿಲಿಗೆ ಮಹಿಳೆ ಬಲಿ
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಸಿಡಿಲಿಗೆ ಮಹಿಳೆ ಬಲಿಯಾದ ಘಟನೆ ನಡೆದಿದೆ.  ಲಕ್ಷ್ಮಿಬಾಯಿ ಅರ್ಜುನ ತಳವಾರ ಸಿಡಿಲಿಗೆ ಬಲಿಯಾದ ಮಹಿಳೆಯಾಗಿದ್ದು, ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ವೇಳೆ ಘಟನೆ ನಡೆದಿದೆ. ವಿವಿಧ ಭಾಗದಲ್ಲಿ ಸುರಿದ ಸಿಡಿಲು ಸಹಿತ ಅಕಾಲಿಕ ಮಳೆಗೆ ಈ ದುರ್ಘಟನೆ ನಡೆದಿದೆ. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾರಕಾಸ್ತ್ರದಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ತುಮಕೂರು ಜಿಲ್ಲೆ ತಿಪಟೂರಿನ ಗಾಂಧಿನಗರದಲ್ಲಿ ಮಾರಕಾಸ್ತ್ರದಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.  ಘಟನೆ 28 ವರ್ಷದ ಚಿಕ್ಕ ಮಂಜ ಎಂಬ ವ್ಯಕ್ತಿಯ ಮೇಲೆ ಹಲ್ಲೆ ವೆಂಕಟೇಶ್ ಎಂಬಾತ ಹಲ್ಲೆ ನಡೆಸಿದ್ದಾನೆ. ಗಾಯಾಳು ಚಿಕ್ಕ ಮಂಜನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಿಪಟೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹತ್ತಿಸಿದ ವಿನಯ್​ ಕುಲಕರ್ಣಿ ಸೋದರ ವಿಜಯ್; ಇಬ್ಬರ ದುರ್ಮರಣ, ಐವರಿಗೆ ಗಾಯ

ಚಿಕ್ಕಮಗಳೂರಿನಲ್ಲಿ ಅಪರೂಪದ ಕಾಡುಪಾಪ ದರ್ಶನ.. ನಾಯಿಗಳಿಂದ ರಕ್ಷಿಸಿ, ಸೆಲ್ಫಿ ಕ್ಲಿಕ್ಕಿಸಿ ಸಂತಸಪಟ್ಟ ಜನ
(Couple fell into Supa Dam when taking selfie in Joida Karwar Uttara Kannada)