ಕರ್ನಾಟಕದಲ್ಲಿ ಇಂದು 74 ಹೊಸ ಕೊವಿಡ್​ ಕೇಸ್ ಪತ್ತೆ: ಇಬ್ಬರು ಬಲಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 26, 2023 | 8:21 PM

COVID Subvariant JN1: ರಾಜ್ಯಕ್ಕೆ ಕೊರೊನಾ ರೂಪಾಂತರಿ ಆಗಿರುವ JN.1 ವಕ್ಕರಿಸಿದೆ. ರಾಜ್ಯದಲ್ಲಿ ಇಂದು 74 ಹೊಸ ಕೊವಿಡ್​ ಕೇಸ್ ಪತ್ತೆಯಾಗಿದ್ದು, ಇಬ್ಬರು ಬಲಿ ಆಗಿದ್ದಾರೆ. ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಬಲಿ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು 57 ಹೊಸ ಕೊವಿಡ್​ ಕೇಸ್ ಪತ್ತೆಯಾಗಿದೆ.

ಕರ್ನಾಟಕದಲ್ಲಿ ಇಂದು 74 ಹೊಸ ಕೊವಿಡ್​ ಕೇಸ್ ಪತ್ತೆ: ಇಬ್ಬರು ಬಲಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್​ 26: ರಾಜ್ಯಕ್ಕೆ ಕೊರೊನಾ ರೂಪಾಂತರಿ ಆಗಿರುವ JN.1 (COVID Subvariant JN1) ವಕ್ಕರಿಸಿದೆ. ರಾಜ್ಯದಲ್ಲಿ ಇಂದು 74 ಹೊಸ ಕೊವಿಡ್​ ಕೇಸ್ ಪತ್ತೆಯಾಗಿದ್ದು, ಇಬ್ಬರು ಬಲಿ ಆಗಿದ್ದಾರೆ. ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಬಲಿ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು 57 ಹೊಸ ಕೊವಿಡ್​ ಕೇಸ್ ಪತ್ತೆಯಾಗಿದೆ. ಹಾಸನ 4, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4, ಚಿಕ್ಕಬಳ್ಳಾಪುರ 3, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ತಲಾ 2 ಕೇಸ್​ಗಳು ಪತ್ತೆ ಆಗಿವೆ.

ವಿಜಯನಗರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 1, ರಾಜ್ಯದಲ್ಲಿ ಕೊವಿಡ್​ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 464, ಬೆಂಗಳೂರಿನಲ್ಲಿ ಕೊವಿಡ್​ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 376, ರಾಜ್ಯದಲ್ಲಿ ಕೊವಿಡ್​ ಪಾಸಿಟಿವಿಟಿ ರೇಟ್ ಶೇ.1.15ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೋನಾ ಉಪತಳಿ ಜೆಎನ್​.1 ಸೋಂಕು ದೃಢ, ನಾಳೆಯಿಂದ ನಿತ್ಯ 5 ಸಾವಿರ ಟೆಸ್ಟಿಂಗ್

ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಇಂದು ಸಚಿವ ದಿನೇಶ್ ಗುಂಡೂರಾವ್, ತಜ್ಞರ ಜತೆ ಸಭೆ ನಡೆಸಿದ್ದಾರೆ. ಸಭೆ ನಂತರ ಮಾತನಾಡಿದ ಅವರು ಸೋಂಕು ತಡೆಗೆ ಕೈಗೊಂಡ ಪ್ರಮುಖ ನಿರ್ಧಾರಗಳನ್ನ ತಿಳಿಸಿದ್ದಾರೆ.

ಸೋಂಕು ತಡೆಗೆ ಸರ್ಕಾರದ ಸೂತ್ರ

ಕೊರೊನಾ ಸೋಂಕಿತರು 7 ದಿನ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್​​ನಲ್ಲಿ ಇರಬೇಕು. ಸೋಂಕಿತರಿಗೆ 7 ದಿನ ರಜೆ ಅವಕಾಶ ನೀಡಬೇಕೆಂದು ಸರ್ಕಾರ ಸೂಚಿಸಿದೆ. ಹೋಮ್ ಕ್ವಾರಂಟೈನ್​​ನಲ್ಲಿ ಇರುವವರ ಬಗ್ಗೆ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. ಹಾಗೆ, ಜ್ವರ, ಶೀತ, ಕೆಮ್ಮು ಲಕ್ಷಣ ಇರುವ ಮಕ್ಕಳನ್ನ ಶಾಲೆಗೆ ಕಳಿಹಿಸುವುದು ಬೇಡ ಅಂತ ಸಚಿವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೂ ಕೊರೊನಾ ರೂಪಾಂತರಿ JN.1 ವೈರಸ್ ಎಂಟ್ರಿ, 35 ಕೇಸ್ ಪತ್ತೆ

ಮಾಸ್ಕ್​​​ ಧರಿಸುವುದು ಸೂಕ್ತ. ಆದರೆ ಕಡ್ಡಾಯ ಮಾಡಿಲ್ಲ. ತಜ್ಞರ ಜತೆ ಚರ್ಚಿಸಿ ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸೋಂಕು ಪತ್ತೆಗೆ ರಾಜ್ಯದಲ್ಲಿ ನಾಳೆಯಿಂದ ನಿತ್ಯ 5 ಸಾವಿರ ಕೊವಿಡ್ ಟೆಸ್ಟ್ ಮಾಡಲಾಗುವುದು. ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು, ಆಕ್ಸಿಜನ್​​ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸುವುದು ಕಡ್ಡಾಯ

ಹೊಸವರ್ಷದ ಆಚರಣೆ, ಕ್ರಿಸ್‌ಮಸ್‌ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಒಳಾಂಗಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಕೋವಿಡ್‌ ಗುಣಲಕ್ಷಣಗಳನ್ನು ಪರಿಶೀಲಿಸಿ ಒಳಗೆ ಬಿಡಬೇಕು. ಹೊರಾಂಗಣ ಕಾರ್ಯಕ್ರಮದಲ್ಲಿ 60 ವರ್ಷ ದಾಟಿದವರು ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.