ಕರ್ನಾಟಕಕ್ಕೂ ಕೊರೊನಾ ರೂಪಾಂತರಿ JN.1 ವೈರಸ್ ಎಂಟ್ರಿ, 35 ಕೇಸ್ ಪತ್ತೆ
COVID Subvariant JN1: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಜೆಎನ್ 1 ಪ್ರಕರಣಗಳು ಪತ್ತೆಯಾಗಿರುವುದು ಕಂಡುಬಂದಿದೆ. ಹಾಗಾದ್ರೆ, ರಾಜ್ಯದ ಯಾವೆಲ್ಲಾ ಜಿಲ್ಲೆಗಳಿಗೆ ಎಂಟ್ರಿಕೊಟ್ಟಿದೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಡಿಸೆಂಬರ್ 25): ಕೊರೊನಾ ರೂಪಾಂತರಿ JN.1 ವೈರಸ್ (COVID Subvariant JN1) ಕರ್ನಾಟಕಕ್ಕೂ ಎಂಟ್ರಿ ಕೊಟ್ಟಿದ್ದು, ಬರೋಬ್ಬರಿ 35 ಪ್ರಕರಣಗಳು ಪತ್ತೆಯಾಗಿವೆ. ಕೇವಲ ಕೇರಳದಲ್ಲಿ ಒಮಿಕ್ರಾನ್ ಉಪತಳಿ ಜೆಎನ್.1 ವೈರಸ್ ಇದೀಗ ರಾಜ್ಯಕ್ಕೂ ಪ್ರವೇಶ ಮಾಡಿದ್ದು ಆತಂಕಕ್ಕೆಕಾರಣವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೊಸ ಕೋವಿಡ್ ಉಪ ತಳಿ ಜೆ.ಎನ್.1 ಪತ್ತೆಯಾಗಿದ್ದು, 15ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಯಾವ ಜಿಲ್ಲೆಯಲ್ಲಿಎಷ್ಟು?
ಬೆಂಗಳೂರಿನಲ್ಲಿ 20 ಒಮಿಕ್ರಾನ್ ಜೆಎನ್.1 ಕೇಸ್ ಪತ್ತೆಯಾಗಿದ್ದರೆ, ಮೈಸೂರು ಜಿಲ್ಲೆಯಲ್ಲಿ 4, ಮಂಡ್ಯ- 3, ಬೆಂಗಳೂರು ಗ್ರಾಮಾಂತರ- 1, ರಾಮನಗರ, ಚಾಮರಾಜನಗರ , ಕೊಡಗು ಜಿಲ್ಲೆಯಲ್ಲಿ ತಲಾ ಒಂದೊಂದು ಒಮಿಕ್ರಾನ್ JN.1 ಕೇಸ್ ಪತ್ತೆಯಾಗಿದೆ.
ಖಚಿತಪಡಿಸಿದ ಆರೋಗ್ಯ ಸಚಿವ
ರಾಜ್ಯದಲ್ಲಿ 35 ಒಮಿಕ್ರಾನ್ ಉಪತಳಿ JN.1 ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಜೆಎನ್ 1 ಕೇಸ್ ಇದೆ ಅನ್ನೋದು ಮೊದಲೇ ಗೊತ್ತಿತ್ತು. JN.1 ಇದೆ ಎಂದು ಗೊತ್ತಾಗಿ ಜಿನೋಮಿಕ್ ಸೀಕ್ವೆನ್ಸ್ಗೆ ಕಳಿಸಿದ್ದೆವು. ಬಹುತೇಕ JN.1 ಕೇಸ್ಗಳು ಬೆಂಗಳೂರಿನಲ್ಲೇ ಇರುವ ಸಾಧ್ಯತೆಯಿದೆ. JN.1ನಿಂದ ಮೃತಪಟ್ಟವರ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅವರಿಗೆ ಬೇರೆ ಬೇರೆ ಕಾಯಿಲೆ ಜತೆ ಕೊರೊನಾ ಸೋಂಕು ತಗುಲಿತ್ತು. JN.1 ಸೋಂಕಿನ ಬಗ್ಗೆ ಆಶ್ಚರ್ಯ ಅಥವಾ ಭಯ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ