ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆದ ಸರ್ಕಾರಿ ಉದ್ಯೋಗಿಗಳಿಗೆ ವೆಚ್ಚ ಮರುಪಾವತಿ; ಕರ್ನಾಟಕ ಸರ್ಕಾರ ಆದೇಶ

ಪಿಪಿಇ ಕಿಟ್, ಇತರೆ ಕನ್ಸೂಮೇಬಲ್​ ಐಟಂ ಒಳಗೊಂಡಂತೆ ಮರುಪಾವತಿ ಕ್ಲೇಮ್​ಗಳಿಗೆ ಸರ್ಕಾರದಿಂದ ಪ್ಯಾಕೇಜ್​ ದರ ನಿಗದಿ ಮಾಡಲಾಗಿದೆ. ಆಸ್ಪತ್ರೆಯ ಚಿಕಿತ್ಸೆ ದರ ಪ್ಯಾಕೇಜ್​ ದರಕ್ಕಿಂತ ಕಡಿಮೆ ಇದ್ದರೆ ರಾಜ್ಯ ಸರ್ಕಾರ ಕಡಿಮೆ ಮೊತ್ತ ಮರುಪಾವತಿಸಲಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆದ ಸರ್ಕಾರಿ ಉದ್ಯೋಗಿಗಳಿಗೆ ವೆಚ್ಚ ಮರುಪಾವತಿ; ಕರ್ನಾಟಕ ಸರ್ಕಾರ ಆದೇಶ
ಸಾಂದರ್ಭಿಕ ಚಿತ್ರ

Updated on: Apr 01, 2021 | 7:33 PM

ಬೆಂಗಳೂರು: ಸರ್ಕಾರಿ ನೌಕರರಿಗೆ ಕೊರೊನಾ ಸೋಂಕು ತಗುಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ವೆಚ್ಚ ಮರುಪಾವತಿ ಮಾಡಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ಕೊರೊನಾ ಸೋಂಕು ಚಿಕಿತ್ಸೆಯ ಮರುಪಾವತಿ ಕ್ಲೇಮ್​ಗಳಿಗೆ ಸರ್ಕಾರದಿಂದ ಪ್ಯಾಕೇಜ್​ ನಿಗದಿ ಮಾಡಲಾಗಿದೆ. ಜನರಲ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆದರೆ ದಿನಕ್ಕೆ ₹10,000, HDU ವಾರ್ಡ್​ನಲ್ಲಿ ಚಿಕಿತ್ಸೆ ಪಡೆದರೆ ದಿನಕ್ಕೆ ₹ 12,000, ವೆಂಟಿಲೇಟರ್​ ರಹಿತ ಐಸೋಲೇಷನ್​ ICUನಲ್ಲಿ ಚಿಕಿತ್ಸೆ ಪಡೆದರೆ ₹ 15,00ಪಾವತಿ ಮಾಡಲಾಗುತ್ತದೆ. ಒಂದುವೇಳೆ ವೆಂಟಿಲೇಟರ್​ ಸಹಿತ ಐಸೋಲೇಷನ್​ ICUನಲ್ಲಿ ಚಿಕಿತ್ಸೆ ಪಡೆದರೆ​ ₹ 25,000 ಮರು ಪಾವತಿ ಮಾಡಲಾಗುವುದಾಗಿ ಸರ್ಕಾರ ಘೋಷಿಸಿದೆ.

ಪಿಪಿಇ ಕಿಟ್, ಇತರೆ ಕನ್ಸೂಮೇಬಲ್​ ಐಟಂ ಒಳಗೊಂಡಂತೆ ಮರುಪಾವತಿ ಕ್ಲೇಮ್​ಗಳಿಗೆ ಸರ್ಕಾರದಿಂದ ಪ್ಯಾಕೇಜ್​ ದರ ನಿಗದಿ ಮಾಡಲಾಗಿದೆ. ಆಸ್ಪತ್ರೆಯ ಚಿಕಿತ್ಸೆ ದರ ಪ್ಯಾಕೇಜ್​ ದರಕ್ಕಿಂತ ಕಡಿಮೆ ಇದ್ದರೆ ರಾಜ್ಯ ಸರ್ಕಾರ ಕಡಿಮೆ ಮೊತ್ತ ಮರುಪಾವತಿಸಲಿದೆ. ಆದರೆ ಕೊರೊನಾ ಸೋಂಕಿನಿಂದ ಗುಣಮುಖರಾಗಲು ಪಡೆಯುವ ಚಿಕಿತ್ಸೆಗೆ ವೈದ್ಯಕೀಯ ಮುಂಗಡ ಪಾವತಿಸಲು ಅವಕಾಶವಿಲ್ಲ ಎಂದು ಸರ್ಕಾರದ ಈ ಆದೇಶ ತಿಳಿಸಿದೆ.

ಕೊರೊನಾ ತಡೆಗೆ ಬಿಡುಗಡೆಯಾಗಿದೆ ಹೊಸ ಮಾರ್ಗಸೂಚಿ 

ಈಗಾಗಲೇ ಗಣನೀಯವಾಗಿ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಸೂಚಿಸಿದೆ. ರಾಜ್ಯ ಸರ್ಕಾರದ ಹೊಸ ನಿಯಮಾವಳಿಗಳು ನಾಳೆಯಿಂದ (ಏಪ್ರಿಲ್ 1) ಜಾರಿಗೆ ಬರಲಿವೆ. ಏಪ್ರಿಲ್ 1ರಿಂದ ಏಪ್ರಿಲ್ 30ರ ವರೆಗೆ ಅನ್ವಯವಾಗುವಂತೆ ಹೊಸ ನಿಯಮಾವಳಿಗಳನ್ನು ಸೂಚಿಸಲಾಗಿದೆ. ಸಂತೆ, ವಾಹನಗಳಲ್ಲಿ ದೈಹಿಕ ಅಂತರ ಪಾಲಿಸುವುದು ಕಡ್ಡಾಯ ಮಾಡಲಾಗಿದೆ. ವಿಮಾನ, ರೈಲು ಸೇವೆ, ಮೆಟ್ರೋ ರೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಕಂಟೇನ್ಮೆಂಟ್​ ಜೋನ್​​ನಲ್ಲಿ ಅನಗತ್ಯ ಚಟುವಟಿಕೆಗೆ ಬ್ರೇಕ್ ಹಾಕುವ ಬಗ್ಗೆ ಚಿಂತಿಸಲಾಗಿದೆ. ಅಗತ್ಯ ಸರಕು ಪೂರೈಕೆ ಹಾಗೂ ತುರ್ತು ಆರೋಗ್ಯ ಸೇವೆ ಹೊರತುಪಡಿಸಿ ಜನರ ಓಡಾಟ ನಿಯಂತ್ರಿಸಲು ಕ್ರಮ ಕೈಗೊಳ್ಳಲು ಹೇಳಲಾಗಿದೆ.

ಜಾರಿಯಾಗಿರುವ ಮಾರ್ಗಸೂಚಿಗಳು:
> ಕಂಟೈನ್​ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ
> ಕಂಟೈನ್​ಮೆಂಟ್ ವಲಯದಲ್ಲಿ ಹೊರಗಡೆ ಹೋಗುವ ಹಾಗೂ ಒಳ ಬರುವ (ವಾಹನ) ಜನರ ಚಲನವಲನಗಳನ್ನು ನಿಯಂತ್ರಿಸಲು ಕಟ್ಟು ನಿಟ್ಟಾದ ಕ್ರಮ
> ಈ ಉದ್ದೇಶಕ್ಕಾಗಿ ರಚಿಸಲಾಗಿರುವ ಕಣ್ಗಾವಲು ನಿರಂತರವಾಗಿ ಮನೆ-ಮನೆ ಪರಿಶೀಲನೆ
> ನಿಗದಿ ಪಡಿಸಿರುವ ಶಿಷ್ಟಾಚಾರದೊಂದಿಗೆ ಪರೀಕ್ಷೆಗಳನ್ನು ನಡೆಸುವುದು
> ಕೊವಿಡ್ ವ್ಯಕ್ತಿಯ ಸಂಪರ್ಕ ಹೊಂದಿರುವವರನ್ನ ಪಟ್ಟಿ ಮಾಡೋದು, ಪತ್ತೆ, ಗುರುತು, ಮತ್ತು 14 ದಿನಗಳವರೆಗೆ ನಿಗಾ ಇಡುವುದು
> ILI /SARI ಪ್ರಕರಣಗಳನ್ನು ಆರೋಗ್ಯ ಸೌಲಭ್ಯ, ಮೊಬೈಲ್ ಕ್ಲಿನಿಕ್, ಬಫರ್ ವಲಯಗಳ ಫೀವರ್ ಕ್ಲಿನಿಕ್ ಮೂಲಕ ಕಣ್ಗಾವಲಿರಿಸುವುದು
> ಬಿಬಿಎಂಪಿ, ಜಿಲ್ಲಾಡಳಿತ, ತಾಲ್ಲೂಕು ಪ್ರಾಧಿಕಾರಗಳು, ಪೊಲೀಸ್, ಮತ್ತು ಸ್ಥಳೀಯ ಪ್ರಾಧಿಕಾರಗಳು ಕಂಟೈನಮೆಂಟ್ ವಲಯಗಳ‌ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸತಕ್ಕದ್ದು. ಇದಕ್ಕೆ, ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ
> ಮಾಸ್ಕ್ ಧರಿಸದಿದ್ದರೆ ದಂಡ ನಗರಪಾಲಿಕೆ ವ್ಯಾಪ್ತಿ ₹ 250, ಇನ್ನಿತರ ಪ್ರದೇಶದಲ್ಲಿ ₹ 100
> ವಾರದ ಸಂತೆ, ಸಾರಿಗೆ, ಜನಸಂದಣಿ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತ ಕಾಯ್ದು ಕೊಳ್ಳುವುದು
> ಇವುಗಳ ಮೇಲೆ ಬಿಬಿಎಂಪಿ, ಜಿಲ್ಲಾಪ್ರಾಧಿಕಾರಗಳು, ಸ್ಥಳೀಯ ಪ್ರಾದಿಕಾರಗಳು ಜಾರಿಗೊಳಿಸತಕ್ಕದ್ದು
> ವಿಮಾನಯಾನ, ರೈಲು, ಸೇವೆ, ಮತ್ತು ಮೆಟ್ರೋ, ಸಂಚಾರಕ್ಕೆ ಈಗಾಗಲೇ ಪ್ರಮಾಣಿತ ಕಾರ್ಯ ವಿಧಾನಗಳು ಜಾರಿ
ಈ ನೂತನ ಮಾರ್ಗಸೂಚಿ ಸದ್ಯದ ಆದೇಶದಂತೆ ಒಂದು ತಿಂಗಳ ಅವಧಿಗೆ (ಏಪ್ರಿಲ್ 30ರವರೆಗೆ) ಅನ್ವಯವಾಗಲಿದೆ.

ಇದನ್ನೂ ಓದಿ: ಸರ್ಕಾರಿ ರಜಾ ದಿನಗಳಲ್ಲೂ ಕೊರೊನಾ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರ

ಕೊರೊನಾ ನಿಯಂತ್ರಿಸಲು ಹೋಗಿ ಹೊಸ ವೈರಸ್​ಗೆ ಆಹ್ವಾನ ನೀಡುತ್ತಿದ್ದೇವಾ? ಅತಿಯಾದ ಸ್ಯಾನಿಟೈಸರ್​ ಬಳಕೆಯೇ ತಿರುಗುಬಾಣವಾಗಬಹುದು ಎಚ್ಚರ!