ಕೊವಿಡ್ ಕೇರ್ ಸೆಂಟರ್‌ ಮುಚ್ಚಿ 3-4 ತಿಂಗಳು ಕಳೆದ್ರೂ ಅಲ್ಲಿ ಕೆಲಸ ಮಾಡಿದವರಿಗಿಲ್ಲ ಸಂಬಳ.. 8 ಕೋಟಿ ಬಿಲ್ ಉಳಿಸಿಕೊಂಡ BBMP

| Updated By: ಸಾಧು ಶ್ರೀನಾಥ್​

Updated on: Feb 18, 2021 | 9:51 AM

ಕೊವಿಡ್ ಸೆಂಟರ್​ಗಳಲ್ಲಿ ಸ್ವಚ್ಛತೆ ಸೇರಿ ಇತರ ಕೆಲಸ ಮಾಡಲು ಗುತ್ತಿಗೆದಾರರ ಮೂಲಕ ಕೆಲಸಗಾರರನ್ನ BBMP ನೇಮಿಸಿತ್ತು. ಸುಮಾರು 300 ಜನ 12 ಕೊವಿಡ್ ಕೇರ್ ಸೆಂಟರ್​​ಗಳಲ್ಲಿ ಕೆಲಸ ಮಾಡಿದ್ದರು. ಆದ್ರೆ BBMP ಕೆಲಸಗಾರರ ಸಂಬಳ ನೀಡಿಲ್ಲ. ಇದರಿಂದ ಕೆಲಸಗಾರರು ಗುತ್ತಿಗೆದಾರರ ಹಿಂದೆ ಬಿದ್ದಿದ್ದಾರೆ. ಆದ್ರೆ BBMP ಹಣ ನೀಡುತ್ತಿಲ್ಲ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ.

ಕೊವಿಡ್ ಕೇರ್ ಸೆಂಟರ್‌ ಮುಚ್ಚಿ 3-4 ತಿಂಗಳು ಕಳೆದ್ರೂ ಅಲ್ಲಿ ಕೆಲಸ ಮಾಡಿದವರಿಗಿಲ್ಲ ಸಂಬಳ.. 8 ಕೋಟಿ ಬಿಲ್ ಉಳಿಸಿಕೊಂಡ BBMP
ಬಿಬಿಎಂಪಿ ಮುಖ್ಯ ಕಚೇರಿ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಸಮಯದಲ್ಲಿ ಅದೆಷ್ಟೋ ಮಂದಿ ತಮ್ಮ ಕೆಲಸ ಕಳೆದುಕೊಂಡ್ರು. ಆದ್ರೆ ಮತ್ತೆ ಕೆಲವರು ಕೆಲಸಕ್ಕೆ ಹೋಗುತ್ತಿದ್ದರೂ ಸರಿಯಾಗಿ ಸಂಬಳ ಸಿಗದೆ ಪರದಾಡುತಿದ್ರು. ಅಲ್ಲದೆ ಸರ್ಕಾರಿ ನೌಕರರಿಗೂ ಈ ಸಮಸ್ಯೆ ತಪ್ಪಿಲ್ಲ. ಸಾರಿಗೆ ನೌಕರರು ಸೇರಿದಂತೆ ಅನೇಕ ವಲಯದವರು ಸರಿಯಾದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡಿದ್ದ 300 ಜನರಿಗೆ ಹಣ ನೀಡಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ.

ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದಂತೆ ಸೋಂಕಿತರ ಚಿಕಿತ್ಸೆಗಾಗಿ BBMP ಕೊವಿಡ್ ಕೇರ್ ಸೆಂಟರ್​​ಗಳನ್ನು ತೆರೆದಿತ್ತು. ಆ ಕೊವಿಡ್ ಸೆಂಟರ್​ಗಳಲ್ಲಿ ಸ್ವಚ್ಛತೆ ಸೇರಿ ಇತರ ಕೆಲಸ ಮಾಡಲು ಗುತ್ತಿಗೆದಾರರ ಮೂಲಕ ಕೆಲಸಗಾರರನ್ನ BBMP ನೇಮಿಸಿತ್ತು. ಸುಮಾರು 300 ಜನ 12 ಕೊವಿಡ್ ಕೇರ್ ಸೆಂಟರ್​​ಗಳಲ್ಲಿ ಕೆಲಸ ಮಾಡಿದ್ದರು. ಆದ್ರೆ BBMP ಕೆಲಸಗಾರರ ಸಂಬಳ ನೀಡಿಲ್ಲ. ಇದರಿಂದ ಕೆಲಸಗಾರರು ಗುತ್ತಿಗೆದಾರರ ಹಿಂದೆ ಬಿದ್ದಿದ್ದಾರೆ. ಆದ್ರೆ BBMP ಹಣ ನೀಡುತ್ತಿಲ್ಲ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ.

ಕೊವಿಡ್ ಕೇರ್ ಸೆಂಟರ್​​ಗಳಲ್ಲಿ ಕೊವಿಡ್ ಸೋಂಕಿತರ ಬಟ್ಟೆ ವಾಶ್, ಸೋಂಕಿತರಿಗೆ ಊಟ-ಉಪಚಾರ ಮಾಡಿದವರಿಗೆ BBMP ಇನ್ನೂ ವೇತನ ನೀಡಿಲ್ಲ. 12 ಕೊವಿಡ್ ಕೇರ್ ಸೆಂಟರ್‌ಗಳಲ್ಲಿ 1ತಿಂಗಳು ಸೋಂಕಿತರ ಮಧ್ಯೆ 300 ಕೆಲಸಗಾರರು ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಕೇರ್‌ ಸೆಂಟರ್​ಗಳನ್ನು ಮುಚ್ಚಿ 3-4 ತಿಂಗಳಾದರೂ ಹಣ ನೀಡಿಲ್ಲ. ಹೀಗಾಗಿ ಕೆಲಸ ಮಾಡಿದ್ದವರಿಗೆ ಹಣ ನೀಡಲು ಗುತ್ತಿಗೆದಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು 8 ಕೋಟಿಯಷ್ಟು ಬಿಲ್ ಆಗಿದ್ದು ಹಣಕ್ಕಾಗಿ ಗುತ್ತಿಗೆದಾರರು ನಿತ್ಯ BBMP ಕಚೇರಿಗೆ ಅಲೆದಾಡುತ್ತಿದ್ದಾರಂತೆ. BBMP ಹಣ ನೀಡದಿದಕ್ಕೆ ಅಂದು ಕೆಲಸ ಮಾಡಿದ್ದ ಕೆಲಸಗಾರರಿಗೆ ಹಣ ನೀಡಲು ಆಗುತ್ತಿಲ್ಲ. BBMP ಹಣ ನೀಡುತ್ತಿದ್ದಂತೆ ಅವರವರ ಸಂಬಳ ನೀಡಲಾಗುತ್ತೆ ಎಂದು ಗುತ್ತಿಗೆದಾರರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕೊವಿಡ್‌ ಕೇರ್‌ ಸೆಂಟರ್ ಆಗಿ ಬದಲಾಯ್ತು ಲಕ್ಸುರಿ ಹೋಟೆಲ್! ಎಲ್ಲಿ?