ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಜೈಲಿನ ಕರ್ಮಕಾಂಡ ಬಯಲು.. ಜೈಲಿನಲ್ಲಿದ್ದುಕೊಂಡೇ ಫೋನ್ ಮಾಡಿ ಹಣಕ್ಕೆ ಧಮ್ಕಿ ಹಾಕಿದ ಆರೋಪಿ

ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಜೈಲಿನ ಕರ್ಮಕಾಂಡ ಬಯಲು.. ಜೈಲಿನಲ್ಲಿದ್ದುಕೊಂಡೇ ಫೋನ್ ಮಾಡಿ ಹಣಕ್ಕೆ ಧಮ್ಕಿ ಹಾಕಿದ ಆರೋಪಿ

Hindalga Central Jail | ಬೆಳಗಾವಿ ಹಿಂಡಲಗಾ ಜೈಲಿನ ಕರ್ಮಕಾಂಡವಿದು. ರೌಡಿ ಶೀಟರ್ ಫ್ರೂಟ್ ಇರ್ಫಾನ್ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ಆರೋಪಿ ತೌಸಿಫ್‌ ಜೈಲಿನಲ್ಲಿದ್ದುಕೊಂಡೇ ಮಹಿಳೆಗೆ ಫೋನ್ ಮಾಡಿ ಹಣ ನೀಡುವಂತೆ ಧಮ್ಕಿ ಹಾಕಿದ್ದಾನೆ.

Ayesha Banu

| Edited By: Apurva Kumar Balegere

Feb 18, 2021 | 9:14 AM

ಬೆಳಗಾವಿ: ಕೆಲ ದಿನಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು Tv9 ಕನ್ನಡ ಸುದ್ದಿ ವಾಹಿನಿ ವಿಸ್ತೃತ ವರದಿ ಮಾಡಿತ್ತು. ಇದೇ ಬೆನ್ನಲ್ಲೆ ರಾಜ್ಯದಲ್ಲಿ ಮತ್ತೊಂದು ಜೈಲಿನ ಕರ್ಮಕಾಂಡ ಬಟಾಬಯಲಾಗಿದೆ. ಜೈಲಿನಲ್ಲಿದ್ದುಕೊಂಡೇ ಫೋನ್ ಮಾಡಿ ಹಣಕ್ಕೆ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಹಾಗಾದ್ರೆ ಜೈಲಿನ ಕೈದಿಗಳಿಗೆ ಮೊಬೈಲ್‌ ಫೋನ್‌ ಸಿಗೋದು ಹೇಗೆ? ಕೈದಿಗಳ ಆಟಕ್ಕೆ ಜೈಲಿನ ಸಿಬ್ಬಂದಿಯೇ ಸಾಥ್‌ ನಿಡ್ತಾರಾ? ಜೈಲಿನಲ್ಲಿ ನಡೆಯೋ ಅಕ್ರಮವನ್ನ ಕೇಳೋರೇ ಇಲ್ವಾ? ಎಂಬ ಪ್ರಶ್ನೆ ಎದ್ದಿದೆ.

ಬೆಳಗಾವಿ ಹಿಂಡಲಗಾ ಜೈಲಿನ ಕರ್ಮಕಾಂಡವಿದು. ರೌಡಿ ಶೀಟರ್ ಫ್ರೂಟ್ ಇರ್ಫಾನ್ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ಆರೋಪಿ ತೌಸಿಫ್‌ ಜೈಲಿನಲ್ಲಿದ್ದುಕೊಂಡೇ ಮಹಿಳೆಗೆ ಫೋನ್ ಮಾಡಿ ಹಣ ನೀಡುವಂತೆ ಧಮ್ಕಿ ಹಾಕಿದ್ದಾನೆ. ತನಗೆ ಬೇಲ್ ಕೊಡಿಸಲು ಹಣ ರೆಡಿ ಮಾಡು ಅಂತ ತೌಸಿಫ್‌, 8792641107 ಮೊಬೈಲ್ ಸಂಖ್ಯೆಯಿಂದ ಫೋನ್ ಕಾಲ್ ಮಾಡಿ ಧಾರವಾಡದ ಶೆಟ್ಟರ್ ಕಾಲೋನಿ ನಿವಾಸಿ ಸ್ನೇಹಾ ದೇಸಾಯಿಗೆ ಧಮ್ಕಿ ಹಾಕಿ ತನ್ನ ಸಂಬಂಧಿಕರ ಮೂಲಕ 3 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ.

ಧಾರವಾಡದ ಯುವ ಉದ್ಯಮಿಯಾಗಿರೋ ಸ್ನೇಹಾ ದೇಸಾಯಿ ಮತ್ತು ಆರೋಪಿ ತೌಸಿಫ್ SSLC ಸ್ನೇಹಿತರು. ಸ್ನೇಹಾ ಮತ್ತು ತೌಸಿಫ್ ನಡುವೆ ಹಣಕಾಸಿನ ವ್ಯವಹಾರವಿತ್ತು. ಸ್ನೇಹಾ ತನ್ನ ಉದ್ಯಮಕ್ಕೆ ತೌಸಿಫ್ ಹತ್ತಿರ ಬಡ್ಡಿಗೆ ಹಣ ಪಡೆದಿದ್ದರು. ಬಳಿಕ ಬಡ್ಡಿ ಸಮೇತ ತೌಸಿಫ್‌ಗೆ ಹಣವನ್ನು ಹಿಂದಿರುಗಿಸಿದ್ದರು. ಆದ್ರೀಗ ಈಗ ಇದನ್ನೇ ಬಂಡವಾಳ ಮಾಡಿಕೊಂಡು ತೌಸಿಫ್ ಧಮ್ಕಿ ಹಾಕುತ್ತಿದ್ದಾನೆ. ಪದೇಪದೆ ಹಣಕ್ಕಾಗಿ ಜೀವ ಬೆದರಿಕೆಯೊಡ್ಡುತ್ತಿದ್ದಾನೆ. ಈಗ ಆರೋಪಿ ತೌಸಿಫ್‌ 65 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ ಸ್ನೇಹಾ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ತೌಸಿಫ್ ನಿಪ್ಪಾಣಿ ಮತ್ತು ತೌಸಿಫ್ ಸಹೋದರಿ ಹೀನಾ, ತೌಸಿಫ್ ಸಂಬಂಧಿ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: Tv9 Digital Live | ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

Follow us on

Related Stories

Most Read Stories

Click on your DTH Provider to Add TV9 Kannada