ಅಯ್ಯಪ್ಪ ಯಾತ್ರೆಗೆ ತೆರಳುವ ಕರ್ನಾಟಕದ ಭಕ್ತರಿಗೆ ವಿಶೇಷ ಸೂಚನೆ

ಬೆಂಗಳೂರು: ನವೆಂಬರ್ 16ರಿಂದ ಅಯ್ಯಪ್ಪ ಸ್ವಾಮಿ ಯಾತ್ರೆ ಆರಂಭವಾಗುತ್ತೆ. ಆದರೆ ಕೊರೊನಾ ಹಿನ್ನೆಲೆ ಅದು ಪ್ರತಿ ಬಾರಿ ಇದ್ದಂತೆ ಈ ಬಾರಿ ಇರುವುದಿಲ್ಲ. ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಸುತ್ತೊಲೆ ಬಿಡುಗಡೆ ಮಾಡಿದೆ. ಕೇರಳ ಸರ್ಕಾರದ ಆದೇಶದನ್ವಯ, ಕರ್ನಾಟಕ ರಾಜ್ಯದ ಭಕ್ತರಿಗೆ ಕೆಲವು ಸೂಚನೆಗಳನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದ ಹಿನ್ನೆಲೆಯಲ್ಲಿ ಈ ಬಾರಿ ಶಬರಿಮಲೈಗೆ ಹೋಗುವ ಭಕ್ತರಿಗೆ ಕೆಲವು ನಿಯಮಗಳನ್ನು ಹಾಕಲಾಗಿದೆ. -ಶಬರಿಮಲೈ ವೆಬ್ ಸೈಟ್​ನಲ್ಲಿ ನೋಂದಣಿ ಮಾಡಿಕೊಂಡವರಿಗಷ್ಟೇ […]

ಅಯ್ಯಪ್ಪ ಯಾತ್ರೆಗೆ ತೆರಳುವ ಕರ್ನಾಟಕದ ಭಕ್ತರಿಗೆ ವಿಶೇಷ ಸೂಚನೆ
ಆಯೇಷಾ ಬಾನು

Updated on: Nov 06, 2020 | 2:49 PM

ಬೆಂಗಳೂರು: ನವೆಂಬರ್ 16ರಿಂದ ಅಯ್ಯಪ್ಪ ಸ್ವಾಮಿ ಯಾತ್ರೆ ಆರಂಭವಾಗುತ್ತೆ. ಆದರೆ ಕೊರೊನಾ ಹಿನ್ನೆಲೆ ಅದು ಪ್ರತಿ ಬಾರಿ ಇದ್ದಂತೆ ಈ ಬಾರಿ ಇರುವುದಿಲ್ಲ. ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಸುತ್ತೊಲೆ ಬಿಡುಗಡೆ ಮಾಡಿದೆ. ಕೇರಳ ಸರ್ಕಾರದ ಆದೇಶದನ್ವಯ, ಕರ್ನಾಟಕ ರಾಜ್ಯದ ಭಕ್ತರಿಗೆ ಕೆಲವು ಸೂಚನೆಗಳನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ.

ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದ ಹಿನ್ನೆಲೆಯಲ್ಲಿ ಈ ಬಾರಿ ಶಬರಿಮಲೈಗೆ ಹೋಗುವ ಭಕ್ತರಿಗೆ ಕೆಲವು ನಿಯಮಗಳನ್ನು ಹಾಕಲಾಗಿದೆ.
-ಶಬರಿಮಲೈ ವೆಬ್ ಸೈಟ್​ನಲ್ಲಿ ನೋಂದಣಿ ಮಾಡಿಕೊಂಡವರಿಗಷ್ಟೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತೆ. ಹೀಗಾಗಿ ಯಾತ್ರೆಗೆ ತೆರಳುವ ಮುನ್ನ ನೋಂದಣಿ ಮಾಡುವುದು ಕಡ್ಡಾಯ.
-ಒಂದು ದಿನಕ್ಕೆ 1 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ವಾರಾಂತ್ಯಕ್ಕೆ ಅದನ್ನು ಎರಡು ಸಾವಿರಕ್ಕೆ ಹೆಚ್ಚಿಸಲಾಗುತ್ತೆ.
-ದೇವರ ದರ್ಶನಕ್ಕೂ 48 ಗಂಟೆಯ ಮುನ್ನ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ.
-10 ವರ್ಷದೊಳಗಿನ ಹಾಗೂ 60 ವರ್ಷ ಮೇಲ್ಪಟ್ಟ ಭಕ್ತರಿಗೆ ಅವಕಾಶ ಇರುವುದಿಲ್ಲ.
-ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಹೊಂದಿರುವವರು ಯಾತ್ರೆಗೆ ಹೋಗುವಾಗ ತೆಗೆದುಕೊಂಡು ಹೋಗಬೇಕು
-ಪಂಪಾನದಿ ಸ್ನಾನ ಇರೋದಿಲ್ಲ

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us