ಹೋಮ್ ಐಸೋಲೇಷನ್​ನಲ್ಲಿ ಇರುವ ಮನೆಗಳಿಗೆ ರೆಡ್ ಟೇಪ್: ಅರವಿಂದ ಲಿಂಬಾವಳಿ ಮಾಹಿತಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ 9 ಲಕ್ಷ ಜನ ಗುಣಮುಖರಾಗಿದ್ದಾರೆ. ಸೋಂಕಿತರ ಸಂಪೂರ್ಣ ವೆಚ್ಚವನ್ನ ರಾಜ್ಯ ಸರ್ಕಾರ ಭರಿಸುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಲಾಗುತ್ತಿದೆ.

ಹೋಮ್ ಐಸೋಲೇಷನ್​ನಲ್ಲಿ ಇರುವ ಮನೆಗಳಿಗೆ ರೆಡ್ ಟೇಪ್: ಅರವಿಂದ ಲಿಂಬಾವಳಿ ಮಾಹಿತಿ
ಅರವಿಂದ ಲಿಂಬಾವಳಿ (ಸಂಗ್ರಹ ಚಿತ್ರ)
Edited By:

Updated on: Aug 21, 2021 | 10:03 AM

ಬೆಂಗಳೂರು: ಹೋಂ ಐಸೋಲೇಷನ್‌ನಲ್ಲಿರುವವರು ಹೊರಗೆ ಓಡಾಡುತ್ತಿದ್ದಾರೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಹಳ್ಳಿಗಳಿಗೂ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ ಎಂದು ಬೆಂಗಳೂರಿನಲ್ಲಿ ಕೊವಿಡ್ ವಾರ್ ರೂಂ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ತಾಲೂಕುಗಳಲ್ಲಿ 289 ಕೊವಿಡ್ ಕೇರ್ ಸೆಂಟರ್ ತೆರೆದಿದ್ದೇವೆ. ಇನ್ನೂ 19 ಸಾವಿರ ಬೆಡ್‌ಗಳು ಖಾಲಿ ಇವೆ ಎಂದು ಲಿಂಬಾವಳಿ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ 9 ಲಕ್ಷ ಜನ ಗುಣಮುಖರಾಗಿದ್ದಾರೆ. ಸೋಂಕಿತರ ಸಂಪೂರ್ಣ ವೆಚ್ಚವನ್ನ ರಾಜ್ಯ ಸರ್ಕಾರ ಭರಿಸುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಲಾಗುತ್ತಿದೆ. 18-44 ವರ್ಷ ವಯಸ್ಸಿನವರಿಗೆ ಸರ್ಕಾರ ಲಸಿಕೆ ಖರೀದಿಸಿ ಕೊಡ್ತಿದೆ ಎಂದು ಲಿಂಬಾವಳಿ ಮಾಹಿತಿ ನೀಡಿದ್ದಾರೆ.

ಹೋಮ್ ಐಸೋಲೇಷನ್‌ನಲ್ಲಿರುವವರ ನಿರ್ವಹಣೆಯಲ್ಲಿ ಲೋಪವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ನಿರ್ವಹಣೆಯಲ್ಲಿ ಲೋಪವಾಗಿದೆ. ಹಾಗಾಗಿ, ಹೋಮ್ ಐಸೋಲೇಷನ್‌ನಲ್ಲಿರುವವರ ಮನೆಗಳಿಗೆ ರೆಡ್ ಟೇಪ್ ಹಾಕುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

45 ವರ್ಷ ಮೇಲ್ಪಟ್ಟವರಿಗೆ ಕೊವ್ಯಾಕ್ಸಿನ್‌ ರಿಸರ್ವ್‌ ಮಾಡಿದ್ದೇವೆ. ಕೊವಿಶೀಲ್ಡ್‌ 2ನೇ ಡೋಸ್ ನೀಡಿಕೆ ಮುಂದೂಡಲಾಗಿತ್ತು. ಕೊವಿಶೀಲ್ಡ್‌ 2ನೇ ಡೋಸ್ ನೀಡಲು ಈಗ ಸಮಸ್ಯೆ ಇಲ್ಲ. ಜನಸಂಖ್ಯೆ ಆಧರಿಸಿ ಕೊರೊನಾ ಲಸಿಕೆ ಕೇಂದ್ರ ತೆರೆದಿದ್ದೇವೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಇದೆ ಎಂದು ಲಿಂಬಾವಳಿ ಮಾಹಿತಿ ನೀಡಿದ್ದಾರೆ.

20 ಸಾವಿರ ಕೊವ್ಯಾಕ್ಸಿನ್ ಡೋಸ್‌ಗಳ ಕೊರತೆ ಇದೆ. 2ನೇ ಡೋಸ್ ನೀಡಲು ಕೊವ್ಯಾಕ್ಸಿನ್ ಲಸಿಕೆ ಕೊರತೆ ಇದೆ. ರಾಜ್ಯಕ್ಕೆ ಕೊವ್ಯಾಕ್ಸಿನ್ ಲಸಿಕೆ ತರಿಸಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಕೊವಿಶೀಲ್ಡ್‌ ಲಸಿಕೆ ಕೊರತೆ ಇಲ್ಲ. ಆದರೆ, ಕೊವಿಶೀಲ್ಡ್‌ ಲಸಿಕೆ ಪೂರೈಕೆಯಲ್ಲಿ ಕೆಲವೊಮ್ಮೆ ವಿಳಂಬ ಆಗ್ತಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆ ನಿರ್ವಹಣೆಯಲ್ಲಿ ಲೋಪ ಇದೆ. ಜನರು ಮೆಸೇಜ್ ಬಂದ ಮೇಲೆ ಲಸಿಕೆ ಹಾಕಿಸಿಕೊಳ್ಳಲು ಬರಬೇಕು. ಹಲವರು ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿದ ತಕ್ಷಣ ಬರ್ತಿದ್ದಾರೆ. ಹೀಗಾಗಿ ಸಮಸ್ಯೆ ಆಗ್ತಿದೆ. ಇದನ್ನು ಕೂಡ ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಸಚಿವ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ

ದೆಹಲಿಯಲ್ಲಿ 18ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಇಲ್ಲ ಕೊವಿಡ್​ 19 ಲಸಿಕೆ; 24ಗಂಟೆಯಲ್ಲಿ ವಿದೇಶದಿಂದ ತರಿಸಿಕೊಡಿ ಎಂದ ಸಿಎಂ

Published On - 8:09 pm, Sat, 22 May 21