ಬೆಂಗಳೂರು ತಲುಪಿದ ಕೊವಿಶೀಲ್ಡ್ ಲಸಿಕೆ..

ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ ಕೊವಿಶೀಲ್ಡ್ ಲಸಿಕೆ ಹೊತ್ತ ವಿಶೇಷ ವಿಮಾನ ಸ್ಪೈಸ್ ಜೆಟ್ ದೇವನಹಳ್ಳಿ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗಿದೆ.

ಬೆಂಗಳೂರು ತಲುಪಿದ ಕೊವಿಶೀಲ್ಡ್ ಲಸಿಕೆ..
ಬೆಂಗಳೂರು ತಲುಪಿದ ಕೊವಿಶೀಲ್ಡ್ ಲಸಿಕೆ.

ಬೆಂಗಳೂರು: ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ ಕೊವಿಶೀಲ್ಡ್ ಲಸಿಕೆ ಹೊತ್ತ ವಿಶೇಷ ವಿಮಾನ ಸ್ಪೈಸ್ ಜೆಟ್ ದೇವನಹಳ್ಳಿ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗಿದೆ. ಕೆಲ ಹೊತ್ತಿನಲ್ಲೇ ಏರ್​ಪೋರ್ಟ್​ನಿಂದ ವ್ಯಾಕ್ಸಿನ್ ಸೆಂಟರ್​ಗಳಿಗೆ ಲಸಿಕೆಯನ್ನು ರವಾನೆ ಮಾಡಲಾಗುತ್ತೆ.

6 ಲಕ್ಷ 48 ಸಾವಿರದ 500 ಡೋಸ್ ವ್ಯಾಕ್ಸಿನ್​ನನ್ನು 54 ಬಾಕ್ಸ್​ಗಳಲ್ಲಿ ತರಲಾಗಿದೆ. ಇದು 1,728 ಕೆಜಿ ತೂಕವಿದ್ದು ಆರೋಗ್ಯ ಇಲಾಖೆಯ ಉಪ ನಿರ್ದೇಶಕಿ ನೇತೃತ್ವದಲ್ಲಿ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿಯ ಆರೋಗ್ಯ ಇಲಾಖೆಯಲ್ಲಿ ಲಸಿಕೆ ಸ್ಟೋರ್ ಮಾಡಲಾಗುತ್ತೆ. ಬಳಿಕ ಇಂದು ಅಥವಾ ನಾಳೆ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ವ್ಯಾಕ್ಸಿನ್ ರವಾನಿಸಲಾಗುತ್ತೆ.

ರಾಜ್ಯಕ್ಕೆ ಮೊದಲ ಹಂತದಲ್ಲಿ 6 ಲಕ್ಷ 48 ಸಾವಿರ ಲಸಿಕೆ ನೀಡಲಾಗುತ್ತಿದ್ದು ಬಿಬಿಎಂಪಿಗೆ 1.90 ಲಕ್ಷ ಕೊವಿಶೀಲ್ಡ್ ಲಸಿಕೆ ಹಸ್ತಾಂತರ ಮಾಡಲಾಗಿದೆ. ಹಾಗೂ ದಾಸಪ್ಪ ಆಸ್ಪತ್ರೆಯಲ್ಲಿ 1.90 ಲಕ್ಷ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಕೋಲ್ಡ್ ಸ್ಟೋರ್ ಇರುವ ಬೆಂಗಳೂರಿನ 144 ಬಿಬಿಎಂಪಿ ಆಸ್ಪತ್ರೆಗಳಿಗೆ ಲಸಿಕೆ ರವಾನೆ ಮಾಡಲಾಗುತ್ತೆ. ಜನವರಿ 16ರಂದು ಕೊರೊನಾ ವ್ಯಾಕ್ಸಿನೇಷನ್ ಹಮ್ಮಿಕೊಂಡಿದ್ದು ಅಂದು 144 ಆಸ್ಪತ್ರೆಗಳಿಂದ 1,500 ಲಸಿಕಾ ಕೇಂದ್ರಗಳಿಗೆ ಲಸಿಕೆ ಸರಬರಾಜಾಗುತ್ತೆ.

ಕೊರೊನಾ ಲಸಿಕೆ ಬರ ಮಾಡಿಕೊಳ್ಳಲು ರಾಜ್ಯದಲ್ಲಿ ಸಕಲ ಸಿದ್ಧತೆ: ಯಾವ ಜಿಲ್ಲೆಗೆ, ಎಷ್ಟು ಲಸಿಕೆ?

Click on your DTH Provider to Add TV9 Kannada