ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಪುನಾರಂಭಗೊಳಿಸುವಂತೆ ಸರ್ಕಾರಕ್ಕೆ ಸುನೀಲ್ ಜೋಶಿ ಮನವಿ

| Updated By: ಆಯೇಷಾ ಬಾನು

Updated on: Aug 20, 2024 | 12:13 PM

ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಅವರು ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಪುನಾರಂಭಗೊಳಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ತಮ್ಮ ಎಕ್ಸ್​ ಖಾತೆ ಮೂಲಕ ಸಿಎಂ, ಸಾರಿಗೆ ಸಚಿವರನ್ನು ಟ್ಯಾಗ್ ಮಾಡಿ ಗದಗಕ್ಕೆ ವೋಲ್ವೋ ಬಸ್ ಸೇವೆ ಪುನರಾರಂಭಿಸಿ ಎಂದು ಮನವಿ ಮಾಡಿದ್ದಾರೆ.

ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಪುನಾರಂಭಗೊಳಿಸುವಂತೆ ಸರ್ಕಾರಕ್ಕೆ ಸುನೀಲ್ ಜೋಶಿ ಮನವಿ
ಗದಗ ವೋಲ್ವೋ ಬಸ್ ಸೇವೆ ಪುನಾರಂಭಗೊಳಿಸುವಂತೆ ಸರ್ಕಾರಕ್ಕೆ ಸುನೀಲ್ ಜೋಶಿ ಮನವಿ
Follow us on

ಗದಗ, ಆಗಸ್ಟ್.20: ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಪುನಾರಂಭಗೊಳಿಸಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ (Sunil Joshi) ಅವರು ಎಕ್ಸ್ ಖಾತೆಯ (ಟ್ವಿಟರ್) ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ಅವರಿಗೆ ಮನವಿ ಮಾಡಿದ್ದಾರೆ. ಈ ಹಿಂದೆ ಸುನೀಲ್ ಜೋಶಿ ಅವರ ಮನವಿ ಮೇರೆಗೆ ಸಾರಿಗೆ ಇಲಾಖೆ ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಆರಂಭಿಸಿತ್ತು. ಆದರೆ ಈಗ ಸೇವೆ ಸ್ಥಗಿತಗೊಂಡಿದ್ದು ಪುನರಾರಂಭಗೊಳಿಸುವಂತೆ ಜೋಶಿ ಮನವಿ ಮಾಡಿದ್ದಾರೆ.

2023ರಲ್ಲೂ ಸುನೀಲ್ ಜೋಶಿಯವರು ಟ್ವೀಟ್ ಮೂಲಕ ವೋಲ್ವೋ ಬಸ್​ ಸೇವೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಕ್ರಿಕೆಟಿಗ ಸುನಿಲ್ ಮನವಿಗೆ ಸ್ಪಂದಿಸಿದ್ದ ಆಗಿನ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಬಸ್ ಸೇವೆ ಕಲ್ಪಿಸಿದ್ದರು. ಆದ್ರೆ ಕೆಲ ತಿಂಗಳ ನಂತರ ಸಾರಿಗೆ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಈಗ ಮತ್ತೆ ಟ್ವೀಟ್ ಮಾಡಿ ಬಸ್ ಸೇವೆ ಪುನರಾರಂಭಗೊಳಿಸಲು ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉಸ್ತುವಾರಿ ಸಚಿವ ಹೆಚ್​ಕೆ ಪಾಟೀಲರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.

ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಅವರ ಟ್ವೀಟ್ ಹೀಗಿದೆ

ಇದನ್ನೂ ಓದಿ: ರಾಜ್ಯಪಾಲರ ಪ್ರಾಸಿಕ್ಯೂಷನ್​ಗೆ ತಿರುಗೇಟು ನೀಡಲು ಸಿಎಂ ಸಿದ್ದರಾಮಯ್ಯ ಮಾಸ್ಟರ್​ ಪ್ಲಾನ್

ಬೆಂಗಳೂರು-ಗದಗ ನಡುವಿನ ವೊಲ್ವೋ ಬಸ್ ಚಿತ್ರದುರ್ಗ, ಹರಿಹರ, ಮುಂಡರಗಿ ಮಾರ್ಗವಾಗಿ ಸಂಚಾರ ಮಾಡುತ್ತಿತ್ತು.ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1 ರಿಂದ ಮಧ್ಯಾಹ್ನ 2 ಗಂಟೆಗೆ ಹೊರಡಿ ಸಂಜೆ 6.15ಕ್ಕೆ ಗದಗ ತಲುಪುತ್ತಿತ್ತು. 2023ರ ಜನವರಿ 9ರಂದು ಆಗಿನ ಸಾರಿಗೆ ಸಚಿವರಾಗಿದ್ದ ಶ್ರೀರಾಮುಲು ಅವರು ಗದಗ ಟು ಬೆಂಗಳೂರು ವೋಲ್ವೋ ಬಸ್ ಲೋಕಾರ್ಪಣೆಗೊಳಿಸಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:12 pm, Tue, 20 August 24