ಪುಣೆಯ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ: ಡ್ಯಾಂನಲ್ಲಿ ನಿಪ್ಪಾಣಿ ಯುವಕರಿಬ್ಬರು ನೀರುಪಾಲು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 01, 2024 | 8:58 PM

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯದಲ್ಲಿ ನಿಪ್ಪಾಣಿ ಯುವಕರಿಬ್ಬರು ನೀರುಪಾಲಾಗಿರುವಂತಹ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ 13 ಯುವಕರು ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ನೀರುಪಾಲಾದ ಯುವಕರಿಗಾಗಿ ಅಗ್ನಿಶಾಮಕ ದಳದಿಂದ ಹುಡುಕಾಟ ನಡೆದಿದೆ. ನಿನ್ನೆಯಷ್ಟೇ ಪುಣೆಯ ಲೋನಾವಾಲಾ ಬಳಿಯ ಭುಶಿ ಡ್ಯಾಂ ಹಿನ್ನೀರಿನಲ್ಲಿ ಐವರು ನೀರುಪಾಲಾಗಿದ್ದರು.

ಪುಣೆಯ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ: ಡ್ಯಾಂನಲ್ಲಿ ನಿಪ್ಪಾಣಿ ಯುವಕರಿಬ್ಬರು ನೀರುಪಾಲು
ಪುಣೆಯ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ: ಡ್ಯಾಂನಲ್ಲಿ ನಿಪ್ಪಾಣಿ ಯುವಕರಿಬ್ಬರು ನೀರುಪಾಲು
Follow us on

ಬೆಳಗಾವಿ, ಜುಲೈ 01: ನಿನ್ನೆಯಷ್ಟೇ ಪುಣೆಯ ಲೋನಾವಾಲಾ ಬಳಿಯ ಭುಶಿ ಡ್ಯಾಂ ಹಿನ್ನೀರಿನಲ್ಲಿ ಐವರು ನೀರುಪಾಲಾಗಿದ್ದರು. ಆ ದುರಂತ ಮಾಸುವ ಮುನ್ನವೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ಪ್ರವಾಸಕ್ಕೆಂದು ತೆರಳಿದ್ದ ನಿಪ್ಪಾಣಿ (Nipani) ಯುವಕರಿಬ್ಬರು ನೀರುಪಾಲಾಗಿರುವಂತಹ (dead) ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯದಲ್ಲಿ ನಡೆದಿದೆ. ಜಿಲ್ಲೆಯ ನಿಪ್ಪಾಣಿಯಿಂದ 13 ಯುವಕರು ಪ್ರವಾಸಕ್ಕೆ ತೆರಳಿದ್ದರು. ಗಣೇಶ್ ಕದಮ ಮತ್ತು ಪ್ರತೀಕ್ ಪಾಟೀಲ್ ನೀರುಪಾಲಾದವರು. ನೀರುಪಾಲಾದ ಯುವಕರಿಗಾಗಿ ಅಗ್ನಿಶಾಮಕ ದಳದಿಂದ ಹುಡುಕಾಟ ನಡೆಸಲಾಗುತ್ತಿದೆ.

ವೈದ್ಯರ ನಿರ್ಲಕ್ಷ್ಯದಿಂದ 6 ವರ್ಷದ ಬಾಲಕಿ ಸಾವು ಆರೋಪ

ಮೈಸೂರು: ವೈದ್ಯರ ನಿರ್ಲಕ್ಷ್ಯದಿಂದ 6 ವರ್ಷದ ಬಾಲಕಿ ಸಾವನ್ನಪ್ಪಿರುವುದಾಗಿ ಆರೋಪ ಕೇಳಿಬಂದಿದೆ. ಜಿಲ್ಲೆಯ ಹೆಚ್​ಡಿ ಕೋಟೆಯ ಸೇಂಟ್​ ಮೆರಿಸ್​​ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಆರೋಪ ಮಾಡಲಾಗಿದೆ. ಬೆಳಗನಹಳ್ಳಿಯ ಶಿವರಾಜ್ ಎಂಬುವರ ಪುತ್ರಿ ತನುಷಾ(6) ಮೃತ ಬಾಲಕಿ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಲ್ಲದ ಬೀದಿ ಪುಂಡರ ಹಾವಳಿ: ಯುವತಿ ಎದೆ ಮುಟ್ಟಿ ವಿಕೃತಿ ಮರೆದ ಕಾಮುಕ

ನಿನ್ನೆ ರಾತ್ರಿ ಬಾಲಕಿಗೆ ವಾಂತಿ ಹಿನ್ನೆಲೆ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಪಾಳಿಯ ವೈದ್ಯರು ಬಾಲಕಿ ತನುಷಾಗೆ ಚಿಕಿತ್ಸೆ ನೀಡಿದ್ದರು. ಇಂದು ಬೆಳಗ್ಗೆ ಚೆನ್ನಾಗಿಯೇ ಇದ್ದ ಬಾಲಕಿ ತನುಷಾ ದಿಢೀರ್​ ಮೃತಪಟ್ಟಿದ್ದಾರೆ. ತನುಷಾ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಟಿಹೆಚ್​​ಒ ಡಾ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಟಿಹೆಚ್​ಓ ಡಾ.ರವಿಕುಮಾರ್ ಭರವಸೆ ನೀಡಿದ್ದಾರೆ.

ರಾತ್ರೋರಾತ್ರಿ ಅಂಗಡಿ ಕಳ್ಳತನ: 4 ಲಕ್ಷ ರೂ. ಮೌಲ್ಯದ ಮಿಷಿನ್ ಕದ್ದ ಕಳ್ಳರು

ಮಂಡ್ಯ: ಟೈರ್ ರೀ ಟ್ರೇಡಿಂಗ್ ಅಂಗಡಿಯಲ್ಲಿ ಕಳ್ಳತನವಾಗಿದ್ದು, ಕಳ್ಳರು ಮಿಷನ್ ಕದೊಯ್ದಿದ್ದಾರೆ.  ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಮಾಚಹೊಳಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ್​ ಎಂಬುವವರ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್​ಟೇಬಲ್ ಶವವಾಗಿ ಪತ್ತೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ

ತಡರಾತ್ರಿ ಅಂಗಡಿಯ ಬೀಗ ಹೊಡೆದು 4.ಲಕ್ಷ ರೂ. ಬೆಲೆ ಬಾಳುವ ಮಿಷಿನ್ ಸೇರಿದಂತೆ ವಿವಿಧ ಸಾಮಗ್ರಿ, ಇಪ್ಪತ್ತುಕ್ಕೂ ಹೆಚ್ಚು ಹೊಸ ಟೈರ್ ಕಳುವು ಮಾಡಿದ್ದಾರೆ. ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:53 pm, Mon, 1 July 24