ಮೇ 1ರಿಂದಲೇ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಸಿಗದು; ಸಿಎಸ್ ರವಿಕುಮಾರ್

ತಿಂಗಳಿಗೆ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡಬೇಕು. ಇಂತಹ ಸಮಯದಲ್ಲಿ ತೆರಿಗೆ ಹಣ ಜನರಿಗಾಗಿ ಬಳಸಬೇಕು. ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಹಣ ನೀಡಬೇಕು. ಜೇಬಿನಲ್ಲಿ ಹಣ ಇದ್ದರೆ ಅಗತ್ಯವಸ್ತುಗಳ ಖರೀದಿ ಮಾಡಬಹುದು. ಇಲ್ಲದಿದ್ದರೆ ಜನರು ಹೇಗೆ ಅಗತ್ಯವಸ್ತುಗಳನ್ನು ಖರೀದಿ ಮಾಡುತ್ತಾರೆ?; ಸಿದ್ದರಾಮಯ್ಯ

ಮೇ 1ರಿಂದಲೇ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಸಿಗದು; ಸಿಎಸ್ ರವಿಕುಮಾರ್
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)
Follow us
guruganesh bhat
|

Updated on: Apr 29, 2021 | 3:50 PM

ಬೆಂಗಳೂರು: ಮೇ 3ನೇ ವಾರದ ನಂತರವಷ್ಟೇ 18 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ಸಿಗಲಿದೆ. ಮೇ 1ರಿಂದ ಲಸಿಕೆ ಸಿಗುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದ್ದಾರೆ.

ಸರ್ಕಾರಗಳು ಜನರ ರಕ್ಷಣೆಗಾಗಿ ಇರುವುದು. ತಿಂಗಳಿಗೆ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡಬೇಕು. ಇಂತಹ ಸಮಯದಲ್ಲಿ ತೆರಿಗೆ ಹಣ ಜನರಿಗಾಗಿ ಬಳಸಬೇಕು. ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಹಣ ನೀಡಬೇಕು. ಜೇಬಿನಲ್ಲಿ ಹಣ ಇದ್ದರೆ ಅಗತ್ಯವಸ್ತುಗಳ ಖರೀದಿ ಮಾಡಬಹುದು. ಇಲ್ಲದಿದ್ದರೆ ಜನರು ಹೇಗೆ ಅಗತ್ಯವಸ್ತುಗಳನ್ನು ಖರೀದಿ ಮಾಡುತ್ತಾರೆ? ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ನಿಲ್ಲಿಸಲಿ. ಅನಗತ್ಯ ಖರ್ಚಿಗೆ ಬ್ರೇಕ್ ಹಾಕಲಿ. ನಾನು 5 ವರ್ಷ ಸಿಎಂ ಆಗಿದ್ದಾಗ ಒಬ್ಬನೆ ಒಬ್ಬ ರಾಜಕೀಯ ಕಾರ್ಯದರ್ಶಿ ಇರಲಿಲ್ಲ. ಆದರೆ ಈಗ ಅನಗತ್ಯ ಹುದ್ದೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅವುಗಳನ್ನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:  Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು

Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

(CS P Ravikumar informs Opposition Leader Siddaramaiah to Covid vaccine will available after may third week for above 18 years)