ಉಗ್ರರಿಗೆ ಬಿರಿಯಾನಿ ಕೊಡೋ ಕಾಲ ಹೋಯ್ತು.. ಈಗೇನಿದ್ರೂ ಮಸಣಕ್ಕೆ ಕಳಿಸೋದಷ್ಟೇ -ಸಿ.ಟಿ.ರವಿ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ತಲೆ-ಬಾಲ ಕತ್ತರಿಸಿದ್ದು, ಇಲ್ಲಿ ಬಾಲ ಬಿಚ್ಚಿದ್ರೂ ಅದೇ ಗತಿ ಅನ್ನೋದು ನೆನಪಿರಲಿ. ಈಗ ಉಗ್ರರನ್ನು ಸ್ಮಶಾನಕ್ಕೆ ಕಳಿಸೋ ಕೆಲಸವನ್ನ ಪೊಲೀಸ್, ಸೇನೆ ಮಾಡ್ತಾ ಇದೆ

ಉಗ್ರರಿಗೆ ಬಿರಿಯಾನಿ ಕೊಡೋ ಕಾಲ ಹೋಯ್ತು.. ಈಗೇನಿದ್ರೂ ಮಸಣಕ್ಕೆ ಕಳಿಸೋದಷ್ಟೇ -ಸಿ.ಟಿ.ರವಿ
ಸಿ.ಟಿ.ರವಿ

Updated on: Nov 29, 2020 | 4:37 PM

ಚಿಕ್ಕಮಗಳೂರು: ಮಂಗಳೂರಿನ ವಿವಾದಾತ್ಮಕ ಗೋಡೆ ಬರಹ ಪ್ರಕರಣದ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ. ನಗರದಲ್ಲಿ ಈ ಕುರಿತು ಮಾತನಾಡಿದ ಸಿ.ಟಿ.ರವಿ ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಗಿದೆ. ಇದೀಗ, ಉಗ್ರರಿಗೆ ಮಣೆಹಾಕಿ ಅವರ ಪರ ನಿಲ್ಲುವ ವ್ಯವಸ್ಥೆ ಈಗ ಇಲ್ಲ ಎಂದು ಹೇಳಿದ್ದಾರೆ.

ಭಯೋತ್ಪಾದಕರು ಹೋಗಬೇಕಿರುವುದು ಮಸಣಕ್ಕೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ತಲೆ-ಬಾಲ ಕತ್ತರಿಸಿದ್ದು, ಇಲ್ಲಿ ಬಾಲ ಬಿಚ್ಚಿದ್ರೂ ಅದೇ ಗತಿ ಅನ್ನೋದು ನೆನಪಿರಲಿ. ಈಗ ಉಗ್ರರನ್ನು ಸ್ಮಶಾನಕ್ಕೆ ಕಳಿಸೋ ಕೆಲಸವನ್ನ ಪೊಲೀಸ್, ಸೇನೆ ಮಾಡ್ತಾ ಇದೆ ಎಂದು ಎಚ್ಚರಿಸಿದ್ದಾರೆ.

ಇತ್ತ ಇದೇ ವಿಷಯದ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಕ್ಷೇಪಾರ್ಹ ಬರಹ ಬರೆದವರನ್ನು ತಕ್ಷಣವೇ ಬಂಧಿಸಬೇಕು, ರಾಷ್ಟ್ರದ್ರೋಹಿ ಕೃತ್ಯವೆಸಗುವವರ ಹೆಡೆಮುರಿ ಕಟ್ಟಬೇಕು ಎಂದಿದ್ದಾರೆ. ಸಮಾಜಘಾತುಕ ಶಕ್ತಿಗಳು, ಮತವಿಭಜನೆ ಮಾಡುವ ಶಕ್ತಿಗಳು, ಜಾತಿವೈಷಮ್ಯ ಬಿತ್ತುವಂತಹ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕಾಂಗ್ರೆಸ್ ಸರ್ಕಾರ ಇದ್ದಾಗ ಇಂಥದ್ದು ಆಗಿರಲಿಲ್ಲ; BJP ಬಂದ್ಮೇಲೇ ಸಮಾಜದ್ರೋಹಿ ಶಕ್ತಿಗಳಿಗೆ ಧೈರ್ಯ’

Published On - 2:33 pm, Sun, 29 November 20