ಮಂಚದಲ್ಲಿ ಮಂಚದ ಕೆಲಸ ಮಾಡುವುದು ಬಿಟ್ಟು ರಾಜಕೀಯ ಬೇಕಿತ್ತಾ?; ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರಶ್ನೆ
ಯಡಿಯೂರಪ್ಪ ಅತಿ ಭ್ರಷ್ಟ. ಸಿದ್ದರಾಮಯ್ಯ ಒಳ್ಳೆಯವ್ರು ಹೀಗೆಲ್ಲಾ ಮಾತನಾಡಿದ್ದಾರೆ. ಕನ್ನಡಿಗರ ಬಗ್ಗೆ ಕೆಟ್ಟದಾಗಿ ಅವಾಚ್ಯ ಪದಬಳಸಿ ಮಾತಾಡಿದ್ದಾರೆ. ಮರಾಠಿಗರನ್ನು ಹೊಗಳಿದ್ದಾರೆ. ಇದೆಲ್ಲಾ ಬೇಕಿತ್ತಾ ಎಂದು ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಶ್ನೆ ಮಾಡಿದರು.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಇಂದು (ಮಾರ್ಚ್ 22) ಚರ್ಚೆ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಯಲ್ಲಾಪುರ-ಮುಂಡಗೋಡ ಶಾಸಕ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಿಡಿ ಕುರಿತು ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಸಿಡಿ ಪ್ರಕರಣ ಸಮಗ್ರವಾಗಿ ತನಿಖೆ ಆಗಬೇಕು ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಸ್ವತಃ ರಮೇಶ್ ಜಾರಕಿಹೊಳಿ ಒಮ್ಮೆ ಸಿಡಿ ನಂದು ಅಲ್ವೇ ಅಲ್ಲ ಅಂತಾರೆ. ಮತ್ತೊಮ್ಮೆ ಸಿಡಿ ವಿಚಾರವಾಗಿ ನಾಲ್ಕು ತಿಂಗಳಿನಿಂದ ಬ್ಲಾಕ್ಮೇಲ್ ಮಾಡಿದ್ದಾರೆ. ಮೊದಲೇ ಗೊತ್ತಿತ್ತು ಅಂತಾರೆ. ನೂರು ಕೋಟಿಯ ಪ್ರಕರಣ ಅಂತಾರೆ. ಅಷ್ಟೇ ಅಲ್ಲ, ಫ್ಲಾಟ್ ಕೊಡಿಸಿದ್ದಾರೆ ಅಂತಲೂ ಹೇಳಿದ್ದಾರೆ.ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಂಚದಲ್ಲಿ ಅದನ್ನೆಲ್ಲಾ ಮಾತಾಡಬೇಕಿತ್ತಾ? ಈ ಬಗ್ಗೆ ರಾಜ್ಯ ಸರ್ಕಾರದಿಂದ ಸಮಗ್ರ ತನಿಖೆ ಆಗಬೇಕು. ಬೇಕಾದರೆ, ಎಲ್ಲಾ ಮಂತ್ರಿಗಳ ಫೋನ್ ಟ್ಯಾಪ್ ಆಗಲಿ ಎಂದೂ ಶಿವಕುಮಾರ್ ಹೇಳಿದರು. ವೈಯಕ್ತಿಕ ಜೀವನ ಎಲ್ಲರಿಗೂ ಇರುತ್ತದೆ. ಹಾಗಂತ ಮಂಚದಲ್ಲಿ ರಾಜಕೀಯ ಯಾಕೆ ಮಾತನಾಡಬೇಕಿತ್ತು ಎಂದು ಡಿಕೆಶಿ ಪ್ರಶ್ನಿಸಿದರು. ಯಡಿಯೂರಪ್ಪ ಅತಿ ಭ್ರಷ್ಟ. ಸಿದ್ದರಾಮಯ್ಯ ಒಳ್ಳೆಯವ್ರು ಹೀಗೆಲ್ಲಾ ಮಾತನಾಡಿದ್ದಾರೆ. ಕನ್ನಡಿಗರ ಬಗ್ಗೆ ಕೆಟ್ಟದಾಗಿ ಅವಾಚ್ಯ ಪದಬಳಸಿ ಮಾತಾಡಿದ್ದಾರೆ. ಮರಾಠಿಗರನ್ನು ಹೊಗಳಿದ್ದಾರೆ. ಜಾರಕಿಹೊಳಿ ಮಂಚದಲ್ಲಿ ಮಾಧ್ಯಮದವರ ಬಗ್ಗೆ, ಪ್ರಲ್ಹಾದ್ ಜೋಶಿ ಬಗ್ಗೆಯೂ ಮಾತನಾಡಿದ್ದಾರೆ. ಇದೆಲ್ಲಾ ಬೇಕಿತ್ತಾ ಎಂದು ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ನಾವು ವಿರೋಧಪಕ್ಷದವರಾಗಿ ಈ ಘಟನೆಯನ್ನು ಹಿಂಬಾಲಿಸುತ್ತಿದ್ದೇವೆ. ನಮಗೂ ಬೇಕಾದಷ್ಟು ಮಾಹಿತಿ ಬರುತ್ತೆ. ಹಾಗಾಗಿ, ಗೃಹ ಸಚಿವರಿಗೆ ಒಂದು ಮನವಿ ಮಾಡುತ್ತೇವೆ. ಈ ವೀಡಿಯೋ ನಿಜಾನಾ ಸುಳ್ಳಾ? ಎಡಿಟ್ ಆಗಿದ್ಯಾ ಇಲ್ವಾ? ಎಡಿಟಿಂಗ್ ಟೂಲ್, ಟ್ಯಾಂಪರ್ಡ್ ಮಾಡಲಾಗಿದ್ಯಾ ಇಲ್ವಾ? ಇಷ್ಟು ಮಾಹಿತಿ ತೆಗೆದುಕೊಂಡರೆ ಸಾಕು. ಗೃಹ ಸಚಿವರೇ ಸೈಬರ್ ಕ್ರೈಂ ವಿಭಾಗದಿಂದ ಈ ಕೆಲಸ ಮಾಡಿಸಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿ ಏಕಪಕ್ಷೀಯ ತನಿಖೆ ಆಗಬಾರದು. ಹೆಣ್ಣು ಮಗಳಿಗೆ ಏನು ಅನ್ಯಾಯ ಆಗಿದೆಯಾ ಎಂಬ ವಿವರ ಬೇಕು. ಘಟನೆ ನಡೆಯಿತಾ ಇಲ್ವಾ? ವೀಡಿಯೋದಲ್ಲಿ ಇದ್ದದ್ದು ಜಾರಕಿಹೊಳಿ ಧ್ವನಿಯಾ? ಅದು ಅವರದೇ ಮನೆಯಾ? ಈ ವಿವರಗಳು ಮೊದಲು ಗೊತ್ತಾಗಬೇಕು. ಹುಡುಗಿಗೆ ಜಾರಕಿಹೊಳಿ ಅವರಿಗೆ ಸಂಬಂಧ ಇತ್ತಾ? ಇಲ್ವಾ? ಈ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರಿ ಆದೇಶ ಆಗಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.
ಇದನ್ನೂ ಓದಿ: ಸಿಡಿ ಬಗ್ಗೆ ಕುಮಾರಸ್ವಾಮಿ ಬಳಿ ಮಾಹಿತಿ ಸಂಗ್ರಹಿಸಿ: ರಮೇಶ್ ಜಾರಕಿಹೊಳಿ ಪ್ರಕರಣದ ಸಮಗ್ರ ತನಿಖೆಗೆ ಡಿ.ಕೆ.ಶಿವಕುಮಾರ್ ಒತ್ತಾಯ
1 ಸಿಡಿ ಅಲ್ಲ, ಎಲ್ಲಾ 19 ಸಿಡಿಗಳ ಬಗ್ಗೆಯೂ ತನಿಖೆ ಮಾಡುತ್ತೇವೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ
Published On - 6:33 pm, Mon, 22 March 21