Drone Prathap​: ಬಿಗ್​ಬಾಸ್​ | ಡ್ರೋನ್ ಪ್ರತಾಪ್ ಸೋತ ಹಿನ್ನೆಲೆ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಅಭಿಮಾನಿ

ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರಂಥ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿದ ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಡ್ರೋನ್ ಪ್ರತಾಪ್ ವಿನ್ ಆಗುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಭಾಗಿಸಿದ್ದರು. ಆದರೆ, ರನ್ನರ್ ಅಪ್ ಆಗಿದ್ದು, ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನಿಯೊಬ್ಬ, ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ತನ್ನ ಅರ್ಧ ಮೀಸೆ ಹಾಗೂ ಗಡ್ಡವನ್ನು ಬೋಳಿಸಿದ್ದಾನೆ.

Drone Prathap​: ಬಿಗ್​ಬಾಸ್​ | ಡ್ರೋನ್ ಪ್ರತಾಪ್ ಸೋತ ಹಿನ್ನೆಲೆ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಅಭಿಮಾನಿ
ಡ್ರೋನ್ ಪ್ರತಾಪ್ ಸೋತ ಹಿನ್ನೆಲೆ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಅಭಿಮಾನಿ
Edited By:

Updated on: Jan 30, 2024 | 11:14 AM

ಮಂಗಳೂರು, ಜ.30: ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರಂಥ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿದ ಡ್ರೋನ್ ಪ್ರತಾಪ್ (Drone Prathap) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಡ್ರೋನ್ ಪ್ರತಾಪ್ ವಿನ್ ಆಗುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಭಾಗಿಸಿದ್ದರು. ಆದರೆ, ರನ್ನರ್ ಅಪ್ ಆಗಿದ್ದು, ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಅದರಂತೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಅಭಿಮಾನಿಯೊಬ್ಬ, ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ತನ್ನ ಅರ್ಧ ಮೀಸೆ ಹಾಗೂ ಗಡ್ಡವನ್ನು ಬೋಳಿಸಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಝೈನುಲ್ ಆಬಿದ್ ಡ್ರೋನ್ ಪ್ರತಾಪ್ ಅಭಿಮಾನಿಯಾಗಿದ್ದಾನೆ. ಬಿಗ್ ಬಾಸ್ ಸೀಸನ್ 10 ರಲ್ಲಿ ಪ್ರತಾಪ್ ವಿನ್ನರ್ ಆಗುತ್ತಾರೆ ಎಂದು ಹೇಳಿಕೊಂಡಿದ್ದ. ಒಂದು ವೇಳೆ ಸೋತರೆ ಅರ್ಧ ಮೀಸೆ, ಗಡ್ಡ ತೆಗೆಯುವುದಾಗಿ ಹಾಗೂ ಜೊತೆಗೆ ಹಸಿಮೆಣಸಿನಕಾಯಿ ತಿನ್ನುವುದಾಗಿ ಚಾಲೆಂಜ್ ಹಾಕಿದ್ದ. ಇದರ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.

ಇದನ್ನೂ ಓದಿ: ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್​ಗೆ ಬಿದ್ದ ವೋಟ್​ಗಳೆಷ್ಟು? ಎಲ್ಲವೂ ಕೋಟಿಯಲ್ಲಿದೆ

ಇದೀಗ ಪ್ರತಾಪ್ ರನ್ನರ್ ಅಪ್ ಆಗಿದ್ದರಿಂದ ಅಭಿಮಾನಿ ಝೈನುಲ್ ಆಬಿದ್ ನುಡಿದಂತೆ ನಡೆದುಕೊಂಡಿದ್ದು, ಅರ್ಧ ಮೀಸೆ, ಗಡ್ಡವನ್ನು ಬೋಳಿಸಿ ಹಸಿಮೆಣಸಿನಕಾಯಿ ತಿಂದಿದ್ದಾನೆ. ಇದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ