ಮಂಗಳೂರಿನಲ್ಲಿ ಬೃಹತ್ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳವು; ಆರೋಪಿ ಪರಾರಿ

20 ಅಡಿ ಆಳದಲ್ಲಿ ಹಾದು ಹೋಗಿದ್ದ ಪೆಟ್ರೋಲ್ ಪೈಪ್ ಲೈನ್ ಅಗೆದು ಇನ್ನೊಂದು ಪೈಪ್ ಅಳವಡಿಸಿ ಪೆಟ್ರೋಲ್ ಕದ್ದಿದ್ದಾರೆ. ಅರ್ಧ ಕಿ.ಮೀ ದೂರದಲ್ಲಿ ಗೇಟ್ ವಾಲ್ ಸಿಕ್ಕಿಸಿ ಟ್ಯಾಪ್ ಮೂಲಕ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಮಾರಾಟ ಮಾಡಿದ್ದಾರೆ.

ಮಂಗಳೂರಿನಲ್ಲಿ ಬೃಹತ್ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳವು; ಆರೋಪಿ ಪರಾರಿ
ಕಂಪೆನಿಯವರು ಹುಡುಕಾಟ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ
TV9kannada Web Team

| Edited By: sandhya thejappa

Jul 31, 2021 | 10:36 AM

ಮಂಗಳೂರು: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್ ಕೊರೆದು ಪೆಟ್ರೋಲ್ (petrol) ಕದ್ದಿರುವ (Theft) ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಬಳಿ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಪೂರೈಕೆ ಮಾಡುವ ಬೃಹತ್ ಪೈಪ್ ಲೈನ್ ಅನ್ನು ಕೊರೆದು ಕಳ್ಳತನ ಮಾಡಿದ್ದಾರೆ. ಐವನ್ ಎಂಬಾತನಿಗೆ ಸೇರಿದ ಖಾಸಗಿ ಜಮೀನಿನ ರಸ್ತೆಯಲ್ಲಿ ಪೈಪ್ ಲೈನ್ ಹಾದು ಹೋಗಿತ್ತು. ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದು ಕಂಪೆನಿಯವರು ಹುಡುಕಾಟ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

20 ಅಡಿ ಆಳದಲ್ಲಿ ಹಾದು ಹೋಗಿದ್ದ ಪೆಟ್ರೋಲ್ ಪೈಪ್ ಲೈನ್ ಅಗೆದು ಇನ್ನೊಂದು ಪೈಪ್ ಅಳವಡಿಸಿ ಪೆಟ್ರೋಲ್ ಕದ್ದಿದ್ದಾರೆ. ಅರ್ಧ ಕಿ.ಮೀ ದೂರದಲ್ಲಿ ಗೇಟ್ ವಾಲ್ ಸಿಕ್ಕಿಸಿ ಟ್ಯಾಪ್ ಮೂಲಕ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಮಾರಾಟ ಮಾಡಿದ್ದಾರೆ. ಕಂಪೆನಿಯವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿ, ಪೊಲೀಸರ ಸಮಕ್ಷಮ ಜೆಸಿಬಿ ಮೂಲಕ ಅಗೆದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಐವನ್ ಪರಾರಿಯಾಗಿದ್ದು, ಬಂಟ್ವಾಳ ಪೊಲೀಸರು ಹುಡುಕಾಟ ನಡೆಸುತಿದ್ದಾರೆ.

23 ಲಕ್ಷ ಬೆಲೆಬಾಳುವ ಕಾರಿಗೆ 10 ಸಾವಿರ ಹಣ ನೀಡಿ ಪರಾರಿ ನೆಲಮಂಗಲ: ಜಕ್ಕಸಂದ್ರದ ಮಂಜ ಅಲಿಯಾಸ್ ಅಪಲ್ ಮಂಜ ಎಂಬುವವನು ಕಾರು ತೆಗೆದುಕೊಳ್ಳುವ ಸೋಗಿನಲ್ಲಿ ಬಂದು 10 ಸಾವಿರ ಮುಂಗಡ ಹಣ ಕೊಟ್ಟು ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ನಡೆದಿದೆ. ಜೆಪಿ ನಗರದ ವಾಣಿ ಅವರಿಗೆ ಸೇರಿದ ಎಕ್ಸ್.ಯು.ವಿ. 500, ಕೆಎ05-ಎಂಎಕ್ಸ್-2407 ನಂಬರಿನ ಕಪ್ಪು ಬಣ್ಣದ ಮಹೀಂದ್ರ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

23 ಲಕ್ಷ ಬೆಲೆಬಾಳುವ ಕಾರಿಗೆ ಕೇವಲ 10ಸಾವಿರ ಹಣ ನೀಡಿ ಪರಾರಿಯಾಗಿದ್ದಾನೆ. ಅಲ್ಲದೇ ಮುಂಗಡ ಹಣ ಕೊಡುವ ವೇಳೆ ನಕಲಿ ಪೋನ್ ನಂಬರ್ ಕೊಟ್ಟು ಯಾಮಾರಿಸಿದ್ದಾನೆ. ವಾಪಸ್ ಬರದಿದ್ದಕ್ಕೆ ಮಾಲೀಕರು ಕರೆ ಮಾಡಿದರೆ ಮೊಬೈಲ್ ಸ್ವಿಚ್ ಅಫ್ ಅಂತ ಬರುತ್ತಿದೆ. ಪರಾರಿಯಾಗಿರುವ ಮಂಜನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Car

ಕಳ್ಳತನವಾಗಿರುವ ಕಾರು

ಇದನ್ನೂ ಓದಿ

ಆಲೂರು ಗ್ರಾಮದ ಬಳಿ ಕಲ್ಲಿನ ಕ್ವಾರೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಸ್ಪೋಟಕಗಳ ವಶ

ಜಿಮ್ನಾಸ್ಟಿಕ್ ಸ್ಪರ್ಧಿಗಳನ್ನು ತನ್ನ ಬೇಟೆ ಎಂದು ಭಾವಿಸಿದ ಮುದ್ದಾದ ಬೆಕ್ಕು; ವಿಡಿಯೊ ವೈರಲ್

(A huge pipeline in Mangalore has been drilled and petrol stolen)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada