ಮಂಗಳೂರು, ಜು.21: ಶಾಲೆ(School)ಯಲ್ಲಿ ಮದ್ಯಾಹ್ನ ಊಟಕ್ಕೆ ಬಿಟ್ಟ ವೇಳೆ ಸಹ ವಿದ್ಯಾರ್ಥಿ(Student)ಕುಳಿತಕೊಳ್ಳುವ ಜಾಗದಲ್ಲಿ ಸಾಂಬಾರ್ ಚೆಲ್ಲಿದೆ. ಇದೇ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ಜಗಳ ಶುರುವಾಗಿದ್ದು, ಈ ವೇಳೆ 9ನೇ ತರಗತಿ ಸಹಪಾಠಿಗೆ ಚಾಕು ಇರಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರಲ್ಲಿ ಬುಧವಾರ (ಜು.19) ನಡೆದಿದೆ. ಗಾಯಗೊಂಡಿರುವ ವಿದ್ಯಾರ್ಥಿಯನ್ನ ಕೂಡಲೇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಕುರಿತು ‘ಊಟದ ಸಮಯದಲ್ಲಿ, ಒಬ್ಬ ಹುಡುಗ ತನ್ನ ಸಹಪಾಠಿ ಕುಳಿತುಕೊಳ್ಳಬೇಕಾದ ಸ್ಥಳದಲ್ಲಿ ಸಾಂಬಾರ್ ಚೆಲ್ಲಿದ್ದಾನೆ. ಇದರಿಂದ ಉದ್ರೇಕಗೊಂಡ ವಿದ್ಯಾರ್ಥಿ ಸ್ಥಳವನ್ನು ಸ್ವಚ್ಛಗೊಳಿಸಲು ತನ್ನ ಸಹಪಾಠಿಗೆ ಕೇಳಿದ್ದಾನೆ. ಈ ವೇಳೆ ಇಬ್ಬರು ಹುಡುಗರ ನಡುವೆ ಜಗಳವಾಗಿದೆ. ನಂತರ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿ ಓರ್ವ ವಿದ್ಯಾರ್ಥಿ ಸಹಪಾಠಿ ಎದೆಗೆ ಚಾಕು ಇರಿದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ನಿಷೇದಾಜ್ಞೆ ಮತ್ತೆ ಮುಂದುವರಿಕೆ; ಎಸ್ಡಿಪಿಐ ಸಮಾವೇಶದಲ್ಲಿ ಚಾಕು ಇರಿತ ಪ್ರಕರಣದ ಆರೋಪಿಗಳು
ಇನ್ನು ಘಟನೆಯ ದೃಶ್ಯಾವಳಿಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದ್ದು, ಇನ್ನು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ನಾಯಕ್, ಘಟನೆ ಕುರಿತು ಮಾಹಿತಿ ಪಡೆದಿದ್ದು, ಕೊಣಾಜೆ ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಅಧಿಕಾರಿಗಳು ಮತ್ತು ಶಾಲೆಯ ಅಭಿವೃದ್ದಿ ಸಮಿತಿಯ ಸದಸ್ಯರು ಶಾಲೆಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿ ಮಕ್ಕಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಇನ್ನು ಶಾಲೆಗೆ ಹೋಗುವ ವಿದ್ಯಾರ್ಥಿ ಬ್ಯಾಗ್ಲ್ಲಿ ಚಾಕು ಹೇಗೆ ಬಂತು? ಎಲ್ಲದರ ಮಾಹಿತಿ ತನಿಖೆಯಿಂದಲೇ ಹೊರಬರಬೇಕಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ