ಶಿವಮೊಗ್ಗದಲ್ಲಿ ನಿಷೇದಾಜ್ಞೆ ಮತ್ತೆ ಮುಂದುವರಿಕೆ; ಎಸ್ಡಿಪಿಐ ಸಮಾವೇಶದಲ್ಲಿ ಚಾಕು ಇರಿತ ಪ್ರಕರಣದ ಆರೋಪಿಗಳು
ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆ ತಾಲೂಕಿನಾದ್ಯಂತ ನಾಳೆ ಬೆಳಗ್ಗೆ 6ರವರೆಗೂ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಡಾ. ಸೇಲ್ವಮಣಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ: ವೀರ ಸಾವರ್ಕರ್ ಫ್ಲೆಕ್ಸ್ ಗಲಾಟೆ ಮತ್ತು ಪ್ರೇಮ್ಸಿಂಗ್ಗೆ ಚಾಕು ಇರಿತ ಪ್ರಕರಣ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಾರಿ ಮಾಡಲಾದ ನಿಷೇಧಾಜ್ಞೆಯನ್ನು ಶನಿವಾರ ಬೆಳಗ್ಗೆವರೆಗೆ ಮುಂದುವರಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆ ತಾಲೂಕಿನಾದ್ಯಂತ ನಾಳೆ ಬೆಳಗ್ಗೆ 6ರವರೆಗೂ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಡಾ. ಸೇಲ್ವಮಣಿ ಆದೇಶ ಹೊರಡಿಸಿದ್ದಾರೆ. ಅದಾಗ್ಯೂ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಚಾಕು ಇರಿತ ಪ್ರಕರಣದ ಆರೋಪಿಗಳಿಗೆ ಎಸ್ಡಿಪಿಐ ನಂಟು
ನಿನ್ನೆಯಷ್ಟೇ ಎಸ್ಡಿಪಿಐ ಪತ್ರಿಕಾಗೋಷ್ಠಿ ಕರೆದು ಚಾಕು ಪ್ರಕರಣದ ಆರೋಪಿಗಳಿಗೆ ಎಸ್ಡಿಪಿಐ ನಂಟು ಇಲ್ಲ ಎಂದಿದ್ದರು. ಇದರ ಬೆನ್ನಲ್ಲೆ ಆರೋಪಿಗಳಾದ ಜಬೀವುಲ್ಲಾ ಮತ್ತು ನದೀಮ್ ಎಂಬವರು ಎಸ್ಡಿಪಿಐ, ಪಿಎಫ್ಐ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈಗ ನದೀಮ್ ಮತ್ತು ಮತ್ತೋರ್ವ ಆರೋಪಿ ತನ್ವೀರ್ ಎಸ್ಡಿಪಿಐ ಸಮಾವೇಶದಲ್ಲಿ ಭಾಗಿಯಾಗಿರುವ ವಿಡಿಯೋ ಟಿವಿ9ಗೆ ಲಭ್ಯವಾಗಿದೆ.
ವೀರ ಸಾವರ್ಕರ್ ಫೋಟೋ ವಿಚಾರಕ್ಕೆ ಗಾಂಧಿ ಬಜಾರ್ನಲ್ಲಿ ಗಲಾಟೆಗೆ ಉಂಟಾಗಿತ್ತು. ಈ ಘಟನೆ ವೇಳೆ ಪ್ರೇಮ್ ಸಿಂಗ್ ಎಂಬವರಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಜಬೀವುಲ್ಲಾ, 2ನೇ ಆರೋಪಿಯಾಗಿರುವ ತನ್ವೀರ್ ಹಾಗೂ ಮೂರನೇ ಆರೋಪಿ ನದೀಮ್ ಎಂಬವರನ್ನು ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದು, ಗಲಾಟೆ ಹಾಗೂ ಚಾಕು ಇರಿತದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 am, Fri, 19 August 22