ಯುಗಾದಿಗೆ ಮತ್ತೆ ಮುನ್ನಲೆಗೆ ಬಂದ ಹಲಾಲ್​ ಕಟ್ ಅಭಿಯಾನ: ಮುತಾಲಿಕ್​ ಹೇಳಿದ್ದಿಷ್ಟು

ಕಳೆದ ವರ್ಷ ಯುಗಾದಿ ಸಂದರ್ಭದಲ್ಲಿ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡಿದ್ದೇವು. ಈ ವರ್ಷವೂ ಅಭಿಯಾನವನ್ನು ಮುಂದುವರೆಸಲಿದ್ದೇವೆ. ಜಟ್ಕಾ ಕಟ್ ಮುಂದುವರಿಸಿ-ಹಲಾಲ್ ಕಟ್ ಬಹಿಷ್ಕಾರ ಅಭಿಯಾನ ಮಾಡುತ್ತಿದ್ದೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಯುಗಾದಿಗೆ ಮತ್ತೆ ಮುನ್ನಲೆಗೆ ಬಂದ ಹಲಾಲ್​ ಕಟ್ ಅಭಿಯಾನ: ಮುತಾಲಿಕ್​ ಹೇಳಿದ್ದಿಷ್ಟು
ಪ್ರಮೋದ ಮುತಾಲಿಕ್ (ಎಡಚಿತ್ರ) ಹಲಾಲ ಮಾಂಸ (ಬಲಚಿತ್ರ)
Follow us
|

Updated on:Mar 20, 2023 | 1:14 PM

ಮಂಗಳೂರು: ಕಳೆದ ವರ್ಷ ಹಿಜಾಬ್​ದಿಂದ (Hijab) ಪ್ರಾರಂಭವಾಗಿದ್ದ ಧರ್ಮ ಯುದ್ಧ ಮಾಂಸ ಮಾರಾಟದ ಹಲಾಲ್ ​ಕಟ್​ವರೆಗು (Halal Cut) ಸಾಗಿ ಬಂದಿತ್ತು. ಕಳೆದ ವರ್ಷ ಯುಗಾದಿ (Ugadi) ಸಂದರ್ಭದಲ್ಲಿ ಹಲಾಲ್ ವಿರುದ್ಧ ಜಟ್ಕಾ ಕಟ್ (Jhatka Cut) ಅಭಿಯಾನ ಮಾಡಿದ್ದೇವು. ಈ ವರ್ಷವೂ ಅಭಿಯಾನವನ್ನು ಮುಂದುವರೆಸಲಿದ್ದೇವೆ. ಜಟ್ಕಾ ಕಟ್ ಮುಂದುವರಿಸಿ-ಹಲಾಲ್ ಕಟ್ ಬಹಿಷ್ಕಾರ ಅಭಿಯಾನ ಮಾಡಲಿದ್ದೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದ್ದಾರೆ.

ಮಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಲಾಲ್ ಇಸ್ಲಾಂನದ್ದು, ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದೂಗಳು ಕಟ್ ಮಾಡಿದ ಮಾಂಸ ತಿನ್ನುವುದಿಲ್ಲ. ನಾವು ಯಾಕೆ ಅವರ ಹಲಾಲ್ ಮಾಂಸವನ್ನು ತಿನ್ನಬೇಕು? ಹಾಲಾಲ್​ನಿಂದ ಜಲಾಮ್-ಉಲೇಮಾ ಟ್ರಸ್ಟ್​ಗೆ ಎರಡು ಲಕ್ಷ ಕೋಟಿ ಆದಾಯವಿದೆ. ಈ ದುಡ್ಡು ಎಲ್ಲಿ ಖರ್ಚು ಆಗುತ್ತಿದೆ? ಹಲಾಲ್​ನ ದುಡ್ಡು ಉಗ್ರಗಾಮಿಗಳಿಗೆ ಸಂದಾಯವಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷ ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿಗೆ ಈ ಟ್ರಸ್ಟ್ 5 ಲಕ್ಷ ರೂಪಾಯಿ ನೀಡಿದೆ. ರಾಜ್ಯದಲ್ಲಿ ನಡೆದ ಗಲಭೆಯ ಹಿಂದೆ ಹಲಾಲ್​ನ ಹಣವಿದೆ. ಹಲಾಲ್ ಸೇವಿಸಿ ಹಿಂದೂಗಳು, ಹಿಂದೂಗಳ ವಿರುದ್ಧ ಷಡ್ಯಂತ್ರಕ್ಕೆ ನಾವೇ ಕಾರಣವಾಗುತ್ತಿದ್ದೇವೆ ಎಂದರು.

ಇದನ್ನೂ ಓದಿ: ಹಲಾಟ್ ಕಟ್, ಜಟ್ಕಾ ಕಟ್ ಎಂದರೇನು? ಇವುಗಳ ನಡುವಿನ ವ್ಯತ್ಯಾಸ ಇಲ್ಲಿದೆ

ಮತ್ತೆ ಸಚಿವ ವಿ ಸುನಿಲ್​ ಕುಮಾರ್​ ವಿರುದ್ಧ ವಾಗ್ದಾಳಿ

ಸಚಿವ ವಿ ಸುನೀಲ್ ಕುಮಾರ್ ಅವರ​ ಸದ್ಯದ ಸ್ಥಾನಕ್ಕೆ ಕೇಸರಿ ಶಾಲು, ಹಿಂದುತ್ವ ಕಾರಣ. ರಾಮಮಂದಿರ ಹಿಂದುತ್ವದ ಪ್ರತೀಕ, ವಿಜಯದ ಸಂಕೇತ. ಸುನೀಲ್ ಕುಮಾರ್​ಗೆ ನಾಚಿಕೆ ಮಾನ ಮರ್ಯಾದೆ ಇದ್ಯಾ. ಹಿಂದುತ್ವ ಅಂದ್ರೆ ದುಡ್ಡು ಮಾಡೋದು ಸೊಕ್ಕು ತೊರಿಸೋದು ಅಲ್ಲ. ಕೇಸರಿ ಶಾಲು ಹಾಕಿ ದತ್ತಪೀಠ ಹೋರಾಟ ಮಾಡಿರೋದು ಮರೆತು ಹೋಯ್ತಾ? ಸುನೀಲ್ ಕುಮಾರ್ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕಡೆಗಣಿಸಿದ್ದೀರಿ ಎಂದು ವಾಗ್ದಾಳಿ ಮಾಡಿದರು.

ಕಳೆದ ವರ್ಷ 2022ರ ಯುಗಾದಿ ಸಮಯದಲ್ಲಿ ಹಿಂದೂ ಜಾಗೃತಿ ಸಮಿತಿ, ಭಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಇನ್ನು ಅನೇಕ ಹಿಂದೂಪರ ಸಂಘಟನೆಗಳು ಹಲಾಲ್​ ಕಟ್​ ವಿರುದ್ಧ ಅಭಿಯಾನ ಪ್ರಾರಂಭವಿಸಿದವು. ಈ ಅಭಿಯಾನ ಯಾವುದೇ ಕಾರಣಕ್ಕೂ ಹಿಂದೂಗಳು ಮುಸ್ಲಿಂರು ಕತ್ತರಿಸಿದ ಅಥವಾ ಮಾರಾಟ ಮಾಡುವ ಮಾಂಸವನ್ನು ತೆಗೆದುಕೊಳ್ಳಬಾರದು. ಹಿಂದೂಗಳ ಮಾಂಸದ ಅಂಗಡಿಗಳಿಂದ ಮಾಂಸವನ್ನು ಖರೀದಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಮತ್ತು ಬ್ಯಾನರ್​ ಹಾಕುವ ಮೂಲಕ ಕರೆ ನೀಡಿದ್ದವು. ಅಲ್ಲದೇ ರಾಜ್ಯ ಸರ್ಕಾರ ಹಲಾಲ್​ ಕಟ್​ ಮಾಂಸವನ್ನು ಬ್ಯಾನ್​ ಮಾಡಬೇಕೆಂದು ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದ್ದಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:13 pm, Mon, 20 March 23