ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ​ಗಿರಿ : ಅನ್ಯಕೋಮಿನ ಯುವಕ, ಯುವತಿ ಮೇಲೆ ಹಲ್ಲೆ?

| Updated By: ಗಂಗಾಧರ​ ಬ. ಸಾಬೋಜಿ

Updated on: Jan 19, 2024 | 8:20 PM

ಅನ್ಯಕೋಮಿನ ಯುವಕ, ಯುವತಿ ಮೇಲೆ ಯುವಕರಿಂದ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಮಂಗಳೂರಿನ ಕದ್ರಿ ಉದ್ಯಾನವನದ ಬಳಿ ನಡೆದಿದೆ. ಆ ಮೂಲಕ ನಗರದಲ್ಲಿ ಮತ್ತೊಂದು ನೈತಿಕ ಪೊಲೀಸ್ ​ಗಿರಿ ನಡೆದಿದೆ. ಘಟನೆ ಹಿನ್ನೆಲೆ ಕೆಲ ಯುವಕರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ​ಗಿರಿ : ಅನ್ಯಕೋಮಿನ ಯುವಕ, ಯುವತಿ ಮೇಲೆ ಹಲ್ಲೆ?
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು, ಜನವರಿ 19: ಅನ್ಯಕೋಮಿನ ಯುವಕ, ಯುವತಿ ಮೇಲೆ ಯುವಕರಿಂದ ಹಲ್ಲೆಗೆ ಯತ್ನಿಸಿರುವಂತಹ ಘಟನೆ ಮಂಗಳೂರಿನ ಕದ್ರಿ ಉದ್ಯಾನವನದ ಬಳಿ ನಡೆದಿದೆ. ಆ ಮೂಲಕ ನಗರದಲ್ಲಿ ಮತ್ತೊಂದು ನೈತಿಕ ಪೊಲೀಸ್ ​ಗಿರಿ (moral police) ನಡೆದಿದೆ. ಘಟನೆ ಹಿನ್ನೆಲೆ ಕೆಲ ಯುವಕರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೇರಳಕಟ್ಟೆಯಿಂದ ಬಸ್​ನಲ್ಲಿ ಬಂದಿದ್ದು, ಅಂಬೇಡ್ಕರ್ ವೃತ್ತಕ್ಕೆ ಜತೆಯಾಗಿ ಬಂದಿದ್ದಾರೆ. ಈ ವೇಳೆ ಯುವಕ, ಯುವತಿಯನ್ನ ಯುವಕರ ತಂಡ ಫಾಲೋ ಮಾಡಿದೆ. ಕದ್ರಿ ಪಾರ್ಕ್ ಬಳಿ ತಡೆದು ಜೋಡಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ.

ಎರಡನೇ ಬಾರಿ ನಡೆದ ನೈತಿಕ ಪೊಲೀಸ್ ಗಿರಿ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ವಿವೇಕನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಚಿಂತಾಮಣಿ ನಗರದ ಮೆಹಬೂಬ್ ನಗರದಲ್ಲಿ ತಿರುಗಾಡುತಿದ್ದ ವೇಳೆ ಅನ್ಯಕೋಮಿನ ಯುವಕರು, ಅವರಿಬ್ಬರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ಪ್ರದರ್ಶನ ತೋರಿ ದೌರ್ಜನ್ಯ ಎಸಗಿರುವ ಘಟನೆ ಇತ್ತೀಚೆಗೆ ಚಿಂತಾಮಣಿ ನಗರದ ಮೆಹಬೂಬ್ ನಗರದಲ್ಲಿ ನಡೆದಿತ್ತು.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಟ; ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ನಾವಿಬ್ಬರು ಸ್ನೇಹಿತರು ಎಂದು ಅಂಗಲಾಚಿ ಬೇಡಿಕೊಂಡರೂ ಬಿಡದೆ ಅನ್ಯ ಕೋಮಿನ ಯುವಕರ ಗುಂಪು, ಯುವಕ -ಯುವತಿ ಮೇಲೆ ದಾಂದಲೆ ನಡೆಸಿ ಹಲ್ಲೆಗೆ ಯತ್ನಿಸಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ: ಅನ್ಯಕೋಮಿನ ಜೋಡಿ ಮೇಲೆ ದಾಳಿ

ಹಿಂದೂ ಯುವಕ ಹಾಗೂ ಅನ್ಯ ಕೋಮಿನ ಯುವತಿ ಹೋಟಲ್​ಗೆ ತಿಂಡಿ ತಿನ್ನಲು ಹೋಗಿದ್ದಕ್ಕೆ ಅನ್ಯ ಕೋಮಿನ ಪುಂಡರ ಗ್ಯಾಂಗ್ ಇದೆ ರೀತಿ ನೈತಿಕ ಪೊಲೀಸ್ ಗಿರಿ ನಡೆಸಿ ದೌರ್ಜನ್ಯ ಎಸಗಿದ್ದರು. ಆ ಘಟನೆ ಮರೆಯುವುದಕ್ಕೂ ಮುನ್ನ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿರುವುದು ವಿಪರ್ಯಾಸ.

ಅನ್ಯಕೋಮಿನ ಜೋಡಿ ಮೇಲೆ ದಾಳಿ

ದಕ್ಷಿಣ ಕನ್ನಡ ಜಿಲ್ಲೆ ಹೇಳಿ ಕೇಳಿ ಕೋಮ ಸೂಕ್ಷ್ಮ ಪ್ರದೇಶ. ಯಾವುದೇ ಘಟನೆ ನಡೆದರೂ ಅದಕ್ಕೆ ಕೋಮು ಅನ್ನೋದು ತಳುಕು ಹಾಕಿಕೊಂಡಿರುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲೂ ಕೂಡ ಇದು ಒಂದು ಭಾಗವಾಗಿತ್ತು. ಸರ್ಕಾರ ಬಂದ ಕೂಡಲೇ ಗೃಹ ಸಚಿವ ಡಾ. ಜಿ ಪರಮೇಶ್ವರ್, ಮಂಗಳೂರಿಗೆ ಭೇಟಿ ಕೊಟ್ಟು ನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕಲು ಪೊಲೀಸರಿಗೆ ಸೂಚಿಸಿದ್ದರು. ಆದರೆ ನೈತಿಕ ಪೊಲೀಸ್ ಗಿರಿ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.