AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿ ನೆಲದಲ್ಲಿ ಸ್ಟೂಡೆಂಟ್ಸ್ ಹಂಗಾಮ, ಡಿಜೆ ಸದ್ದಿಗೆ ಕಿಕ್ಕೇರಿಸೋ ಡ್ಯಾನ್ಸ್

ಮಂಗಳೂರು: ಕಾಲೇಜು ಪ್ರೋಗ್ರಾಂ ಅಂದ್ರೆ ಕೇಳ್ಬೇಕಾ. ಅಲ್ಲಿ ಖುಷಿ ಹಾಗೂ ಮಸ್ತಿಗೆ ಏನ್ ಕಮ್ಮಿನೇ ಇರಲ್ಲ. ಅದ್ರಂತೆ ಇಲ್ಲೂ ವಿದ್ಯಾರ್ಥಿಗಳ ಪ್ರತಿಭೆಯನ್ನ ಗುರುತಿಸೋಕೆ ಕಾರ್ಯಕ್ರಮ ಆಯೋಜಿಸಿದ್ರು. ಈ ವೇಳೆ ವಿದ್ಯಾರ್ಥಿಗಳು ನೀಡಿದ ಪ್ರದರ್ಶನಕ್ಕೆ ನೆರೆದವ್ರು ಫಿದಾ ಆಗೋದ್ರು. ವಾವ್.. ಡಿಜೆ ಸಾಂಗ್ಸ್.. ಭರ್ಜರಿ ಸ್ಟೆಪ್ಸ್.. ವೆಸ್ಟರ್ನ್​ ಡ್ಯಾನ್ಸ್​ಗೂ ಸೈ.. ತುಳುನಾಡಿನ ನೃತ್ಯಕ್ಕೂ ಜೈ.. ಕಿಕ್ಕೇರಿಸೋ ಕಾಮಿಡಿ ಶೋ.. ಕಣ್ಮನಸೆಳೆಯೋ ಡ್ರಾಮಾ.. ಜಾನಪದ ಕಲೆಗಳಂತೂ ಒಂದಕ್ಕಿಂತ ಒಂದು ಸೂಪರೋ ಸೂಪರ್. ಮಂಗಳೂರಿನ ರಥಬೀದಿಯಲ್ಲಿರೋ ದಯಾನಂದ ಪೈ & ಸತೀಶ್ […]

ಕರಾವಳಿ ನೆಲದಲ್ಲಿ ಸ್ಟೂಡೆಂಟ್ಸ್ ಹಂಗಾಮ, ಡಿಜೆ ಸದ್ದಿಗೆ ಕಿಕ್ಕೇರಿಸೋ ಡ್ಯಾನ್ಸ್
Follow us
ಸಾಧು ಶ್ರೀನಾಥ್​
|

Updated on:Feb 12, 2020 | 4:29 PM

ಮಂಗಳೂರು: ಕಾಲೇಜು ಪ್ರೋಗ್ರಾಂ ಅಂದ್ರೆ ಕೇಳ್ಬೇಕಾ. ಅಲ್ಲಿ ಖುಷಿ ಹಾಗೂ ಮಸ್ತಿಗೆ ಏನ್ ಕಮ್ಮಿನೇ ಇರಲ್ಲ. ಅದ್ರಂತೆ ಇಲ್ಲೂ ವಿದ್ಯಾರ್ಥಿಗಳ ಪ್ರತಿಭೆಯನ್ನ ಗುರುತಿಸೋಕೆ ಕಾರ್ಯಕ್ರಮ ಆಯೋಜಿಸಿದ್ರು. ಈ ವೇಳೆ ವಿದ್ಯಾರ್ಥಿಗಳು ನೀಡಿದ ಪ್ರದರ್ಶನಕ್ಕೆ ನೆರೆದವ್ರು ಫಿದಾ ಆಗೋದ್ರು.

ವಾವ್.. ಡಿಜೆ ಸಾಂಗ್ಸ್.. ಭರ್ಜರಿ ಸ್ಟೆಪ್ಸ್.. ವೆಸ್ಟರ್ನ್​ ಡ್ಯಾನ್ಸ್​ಗೂ ಸೈ.. ತುಳುನಾಡಿನ ನೃತ್ಯಕ್ಕೂ ಜೈ.. ಕಿಕ್ಕೇರಿಸೋ ಕಾಮಿಡಿ ಶೋ.. ಕಣ್ಮನಸೆಳೆಯೋ ಡ್ರಾಮಾ.. ಜಾನಪದ ಕಲೆಗಳಂತೂ ಒಂದಕ್ಕಿಂತ ಒಂದು ಸೂಪರೋ ಸೂಪರ್.

ಮಂಗಳೂರಿನ ರಥಬೀದಿಯಲ್ಲಿರೋ ದಯಾನಂದ ಪೈ & ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಟೂಡೆಂಟ್ಸ್ ಹಂಗಾಮಾ ಜೋರಾಗಿತ್ತು. ವಿದ್ಯಾರ್ಥಿಗಳೆಲ್ಲಾ ಪ್ರತಿಭಾ ದಿನಾಚರಣೆಯ ಖುಷಿಯಲ್ಲಿ ಮಿಂದೆದ್ರು. ಇಂಟರ್ ಡಿಪಾರ್ಟ್​ಮೆಂಟ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಂತಾ ಬಗೆಬಗೆಯ ಶೋ ಏರ್ಪಡಿಸಲಾಗಿತ್ತು. ಆಟೋಟ, ಸಾಂಸ್ಕೃತಿಕ ಸ್ಪರ್ಧೆ, ಕಾಮಿಡಿ ಶೋ, ಜಾನಪದ ಕಲೆಗಳ ಮೂಲಕ ವಿದ್ಯಾರ್ಥಿಗಳು ಎಲ್ಲರನ್ನ ರಂಜಿಸಿದ್ರು.

ಜೊತೆಗೆ ಗೆದ್ದವರಿಗೆ ಬಹುಮಾನ ಕೊಡಲಾಯ್ತು. ಇನ್ನು ಸದಾ ಕ್ಲಾಸ್, ಲ್ಯಾನ್ ಅನ್ಕೊಂಡ್ ಬ್ಯುಸಿ ಇರ್ತಿದ್ದ ಸ್ಟೂಡೆಂಟ್ಸ್ ಎಲ್ಲಾ ಟ್ಯಾಲೆಂಟ್ ಪ್ರದರ್ಶಿಸಿ ಖುಷಿಪಟ್ರು. ಒಟ್ನಲ್ಲಿ ವಿದ್ಯಾರ್ಥಿಗಳಲ್ಲಿರೋ ಪ್ರತಿಭೆಯನ್ನ ಹೊರತೆಗೆಯಲು ಹಾಗೂ ಆತ್ಮಸ್ಥೈರ್ಯ ಹೆಚ್ಚಿಸೋಕೆ ಆಯೋಜಿಸಿದ್ದ ಕಾರ್ಯಕ್ರಮ ಎಲ್ಲರಿಗೂ ಸಂತಸವನ್ನುಂಟು ಮಾಡಿದ್ದಂತೂ ಸುಳ್ಳಲ್ಲ.

Published On - 4:27 pm, Wed, 12 February 20