ಕಟೀಲು ದೇವಾಲಯದಲ್ಲಿ ಮತ್ತೆ ಭುಗಿಲೆದ್ದ ವಿವಾದ: ಅರ್ಚಕರ ನಡುವಿನ ಜಟಾಪಟಿಯಿಂದ ವಿಳಂಬವಾದ ಪೂಜೆ

ಕಟೀಲು ದೇವಾಲಯದಲ್ಲಿ ಮತ್ತೆ ಭುಗಿಲೆದ್ದ ವಿವಾದ: ಅರ್ಚಕರ ನಡುವಿನ ಜಟಾಪಟಿಯಿಂದ ವಿಳಂಬವಾದ ಪೂಜೆ
ಅರ್ಚಕರ ನಡುವಿನ ಜಟಾಪಟಿಯಿಂದ ವಿಳಂಬವಾದ ಪೂಜೆ ಕಾದು ಕುಳಿತ ಭಕ್ತರು

ಇದೀಗ ಗುರುರಾಜ್​​ ಭಟ್ ಪರ ಕೋರ್ಟ್ ತೀರ್ಪು ಬಂದಿತ್ತು. ಕೋರ್ಟ್ ತೀರ್ಪು ಒಪ್ಪದ ಅಸ್ರಣ್ಣರಿಂದ ಗುರುರಾಜ್​ಗೆ ತಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕಟೀಲು ದೇಗುಲದಲ್ಲಿ ಪೂಜೆ ವಿಳಂಬ ಆರೋಪ ಮಾಡಲಾಗಿದೆ. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 12, 2022 | 2:34 PM

ಮಂಗಳೂರು: ಕಟೀಲು ದೇವಾಲಯದಲ್ಲಿ ಮತ್ತೆ ವಿವಾದ ಭುಗಿಲೆದಿದ್ದು, ಕಟೀಲು ಅಸ್ರಣ್ಣ ಕುಟುಂಬಸ್ಥರ ಹಾಗೂ ಅರ್ಚಕರ ನಡುವೆ ಜಟಾಪಟಿ ಉಂಟಾಗಿದೆ. ನಿನ್ನೆ ಮಧ್ಯಾಹ್ನ ನಡೆದ ಜಟಾಪಟಿಯಿಂದ ದೇವಿಯ ಪೂಜೆ ವಿಳಂಬವಾಗಿದ್ದು, ಆಡಳಿತ ಮಂಡಳಿ, ಅರ್ಚಕರ ಜಟಾಪಟಿಯಿಂದ ಭಕ್ತರು ಕಂಗಾಲಾಗಿದ್ದಾರೆ. ನಿನ್ನೆ ಮಧ್ಯಾಹ್ನ 12.30ಕ್ಕೆ ನಡೆಯಬೇಕಿದ್ದ ಪೂಜೆ 1:30ಕ್ಕೆ ನಡೆಯಿತು. ಜಿಲ್ಲಾಡಳಿತ ಮಧ್ಯಪ್ರವೇಶದಿಂದ ಪೂಜೆ ನೆರವೇರಿದೆ. ಅರ್ಚಕರು, ಅಸ್ರಣ್ಣ ಕುಟುಂಬಸ್ಥರ ನಡುವೆ ಕೀಳು ಶಾಂತಿ ಹುದ್ದೆಯ ವಿಚಾರದಲ್ಲಿ ವಿವಾದ ನಡೆದಿದೆ. ಅನುವಂಶಿಕವಾಗಿ ಬಂದ ಕೀಳು ಶಾಂತಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುರಾಜ್ ಭಟ್, ನಿನ್ನೆ ಪೂಜೆಗೆಂದು ದೇಗುಲಕ್ಕೆ ಬಂದಿದ್ದಾರೆ. ಕೀಳುಶಾಂತಿ ಹುದ್ದೆಯ ವಿಚಾರವಾಗಿ ಕೋರ್ಟ್​ನಲ್ಲಿ ವ್ಯಾಜ್ಯ ಹೂಡಿದ್ದು, 22 ವರ್ಷಗಳಿಂದ ಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿತ್ತು. ಇದೀಗ ಗುರುರಾಜ್​​ ಭಟ್ ಪರ ಕೋರ್ಟ್ ತೀರ್ಪು ಬಂದಿತ್ತು. ಕೋರ್ಟ್ ತೀರ್ಪು ಒಪ್ಪದ ಅಸ್ರಣ್ಣರಿಂದ ಗುರುರಾಜ್​ಗೆ ತಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕಟೀಲು ದೇಗುಲದಲ್ಲಿ ಪೂಜೆ ವಿಳಂಬ ಆರೋಪ ಮಾಡಲಾಗಿದೆ.

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಲ್ಲಿ ನಡೀತಾ ಇದ್ಯಾ ಲಾಡ್ಜ್ ಲಾಭಿ

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಾಡ್ಜ್ ಲಾಭಿ ನಡೀತಾ ಇದ್ಯಾ ಎನ್ನುವ ಪ್ರಶ್ನೆ ಉಂಟಾಗಿದ್ದು, ವಿಶೇಷ ದಿನಗಳಲ್ಲಿ ಲಾಡ್ಜ್​ ಸಿಗದೇ ಭಕ್ತರು ಪರದಾಡುವಂತ್ತಾಗಿದೆ. ಭಕ್ತರ ಸಂಖ್ಯೆ ಸಾವಿರ ಮೀರಿದ್ರೆ ದೇವಸ್ಥಾನದ ವಸತಿ ಗೃಹ ಸಿಗಲ್ಲ. ಎರಡು ಅತೀ ದೊಡ್ಡ ವಸತಿ ಗೃಹ ನಿರ್ಮಾಣ ಆಗಿದ್ರು ಉದ್ಘಾಟನೆ ಆಗಿಲ್ಲ. ಮಾಸ್ಟರ್ ಪ್ಲಾನ್ ಹೆಸರಿನಲ್ಲಿ ಇದ್ದ ಛತ್ರಗಳನ್ನು ಬೇರೆ ಕಡೆ ವಸತಿ ಗೃಹ ನಿರ್ಮಾಣ ಮಾಡುವುದಾಗಿ ಹೇಳಿ ಆಡಳಿತ ಮಂಡಳಿ ಕೆಡವಿದ್ದರು. ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯದಿಂದಾಗಿ ದೇವಸ್ಥಾನದ ರಾಜಾಂಗಣದಲ್ಲಿ ಭಕ್ತರು ಮಲಗುವಂತ್ತಾಗಿದ್ದು, ಮಳೆ ಬಂದು ರಾತ್ರಿ ಇಡೀ ನೆನೆಯುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ಲಾಡ್ಜ್​​ನಲ್ಲಿ ದುಪ್ಪಟ್ಟು ಹಣವಿದ್ದು, ಇದನ್ನು ಪಾವತಿಸಲಾಗದೇ ಭಕ್ತರು ಅತಂತ್ರರಾಗಿದ್ದಾರೆ. ಖಾಸಗಿ ಲಾಡ್ಜ್​ನವರ ಲಾಭಿಗೆ ಆಡಳಿತ ಮಂಡಳಿ ಮಣಿದಿದೆ. ಅದರಿಂದ ವಸತಿಗೃಹ ಅಭಾವ ಸೃಷ್ಟಿ ಅಂತಾ ಸ್ಥಳೀಯರು ಟಿವಿ9 ಗೆ ಆರೋಪಿಸಿದ್ದಾರೆ.

ಈಗಾಗಲೇ ಆಡಳಿತ ಮಂಡಳಿಯಲ್ಲಿ ಅವ್ಯವಹಾರ ಕಂಡು ಬಂದಿದ್ದು, ಬಗೆದಷ್ಟೂ ಅಕ್ರಮ‌ ಹೊರಬರುತ್ತಿದೆ. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅನುಧಾನಿತ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಉಪನ್ಯಾಸಕಿಯೊಬ್ಬರ ನಿಯೋಜನೆಯಲ್ಲಿ ಅಕ್ರಮ ಕೇಳಿ ಬಂದಿದೆ. ಕರ್ನಾಟಕದ ನಂಬರ್ 1 ದೇವಸ್ಥಾನ, ಪ್ರಸಿದ್ಧ ನಾಗಕ್ಷೇತ್ರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಇಲ್ಲಿನ ಆಡಳಿತ ಮಂಡಳಿಯ ಅಕ್ರಮಗಳು ಒಂದಾದ ನಂತರ ಒಂದು ಹೊರ ಬರುತ್ತಲೇ ಇದೆ. ಸದ್ಯ ಇಲ್ಲಿನ ಆಡಳಿತ ಮಂಡಳಿ ನಡೆಸಲ್ಪಡುವ ಕಾಲೇಜಿನಲ್ಲಿ ಅಕ್ರಮ ನೇಮಕಾತಿ ಮತ್ತು ತಾರತಮ್ಯ ವೇತನ ಹಗರಣ ಬಯಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada