ಪ್ರತ್ಯೇಕ ಘಟನೆ: ಸಮುದ್ರ ವಿಹಾರಕ್ಕೆ ಬಂದಿದ್ದ ವೈದ್ಯ ಸಮುದ್ರಪಾಲು, ಹಾಸನದಲ್ಲಿ ಕೋಟೆ ನೋಡಲು ಬಂದು ಕಾಲು ಜಾರಿ ಬಿದ್ದಿದ್ದ ಯುವಕ ಪಾರು

ಸಮುದ್ರ ವಿಹಾರಕ್ಕೆಂದು ಬಂದಿದ್ದ ಐವರು ವೈದ್ಯರಲ್ಲಿ ಓರ್ವ ವೈದ್ಯ ಸಮುದ್ರಪಾಲಾದ ಘಟನೆ ಸೋಮೇಶ್ವರ ರುದ್ರಪಾದೆ ಸಮೀಪ ನಡೆದಿದೆ. ಹಾಗೂ ಮತ್ತೊಂದೆಡೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಂಜ್ರಾಬಾದ್ ಕೋಟೆ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದ ಪ್ರವಾಸಿಗನನ್ನು ರಕ್ಷಿಸಲಾಗಿದೆ.

ಪ್ರತ್ಯೇಕ ಘಟನೆ: ಸಮುದ್ರ ವಿಹಾರಕ್ಕೆ ಬಂದಿದ್ದ ವೈದ್ಯ ಸಮುದ್ರಪಾಲು, ಹಾಸನದಲ್ಲಿ ಕೋಟೆ ನೋಡಲು ಬಂದು ಕಾಲು ಜಾರಿ ಬಿದ್ದಿದ್ದ ಯುವಕ ಪಾರು
ಡಾ. ಆಶೀಕ್ ಗೌಡ
Follow us
TV9 Web
| Updated By: ಆಯೇಷಾ ಬಾನು

Updated on: Sep 04, 2023 | 11:47 AM

ಮಂಗಳೂರು, ಸೆ.04: ತಡರಾತ್ರಿ ಸಮುದ್ರ ವಿಹಾರಕ್ಕೆಂದು ಬಂದಿದ್ದ ಐವರು ವೈದ್ಯರಲ್ಲಿ(Doctor) ಓರ್ವ ವೈದ್ಯ ಸಮುದ್ರಪಾಲಾದ ಘಟನೆ ಸೋಮೇಶ್ವರ ರುದ್ರಪಾದೆ ಸಮೀಪ ನಿನ್ನೆ ತಡರಾತ್ರಿ 11 ಗಂಟೆ ವೇಳೆ ನಡೆದಿದೆ. ಡಾ. ಆಶೀಕ್ ಗೌಡ (30) ಸಮುದ್ರ ಪಾಲಾದ ವೈದ್ಯ. ಇವರು ಬೆಂಗಳೂರಿನ ನಿವಾಸಿಯಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ತಡರಾತ್ರಿ ಸಮುದ್ರ ವಿಹಾರಕ್ಕೆ ಬಂದಾಗ ಸ್ನೇಹಿತನನ್ನು ರಕ್ಷಿಸಲು ಹೋಗಿ ಸಮುದ್ರಪಾಲಾಗಿದ್ದಾರೆ.

ನಿನ್ನೆ(ಸೆ.03) ತಡರಾತ್ರಿ ನಗರದಿಂದ ಮೃತ ವೈದ್ಯ ಸೇರಿದಂತೆ ಇನ್ನೋರ್ವ ಸರ್ಜನ್ ಕುಂದಾಪುರ ಮೂಲದ ಡಾ.ಪ್ರದೀಶ್ ಹಾಗೂ ಇಂಟನ್೯ಶಿಪ್ ನಡೆಸುತ್ತಿರುವ ಮೂವರು ವೈದ್ಯೆಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದಾರೆ. ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಕಲ್ಲಿನ ಮೇಲೆ ನಿಂತ ಡಾ.ಪ್ರದೀಶ್ ಕಲ್ಲಿನಿಂದ ಸಮುದ್ರಕ್ಕೆ ಜಾರಿ ಬಿದ್ದರು. ಕೆಳಗೆ ಬಂಡೆಯನ್ನ ಹಿಡಿದು ಸಹಾಯಕ್ಕೆ ಯಾಚಿಸಿದ್ರು. ಈ ವೇಳೆ ಪ್ರದೀಪ್ ರಕ್ಷಣೆಗೆ ಡಾ.ಆಶೀಕ್ ಗೌಡ ಪ್ರಯತ್ನಿಸಿದ್ದು ಕಾಲು ಜಾರಿ ಆಶೀಕ್ ಕೂಡ ಸಮುದ್ರಕ್ಕೆ ಬಿದ್ದಿದ್ದಾರೆ. ಸದ್ಯ ಕಲ್ಲುಗಳ ಆಸರೆ ಪಡೆದು ಡಾ. ಪ್ರದೀಪ್ ಮೇಲೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ ಡಾ.ಆಶೀಕ್ ಗೌಡ ಸ್ನೇಹಿತನ ಉಳಿಸಿಕೊಳ್ಳಲು ಹೋಗಿ ಸಮುದ್ರಪಾಲಾಗಿದ್ದಾರೆ. ಪ್ರದೀಪ್ ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದು ತಡರಾತ್ರಿವರೆಗೂ ಅಗ್ಮಿಶಾಮಕ ದಳ, ಉಳ್ಳಾಲ ಪೊಲೀಸ್ ಠಾಣೆಯವರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಇಂದು ಬೆಳಗ್ಗೆ ರುದ್ರಪಾದೆಯ ಸಮೀಪದಲ್ಲೇ ಆಶೀಕ್ ಮೃತ ದೇಹ ಪತ್ತೆಯಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಮದುವೆಯ ಪೋಟೋಶೂಟ್​ಗಾಗಿ ಶಿವಗಂಗಾ ಗಿರಿ ಹೋದವರಿಗೆ ಕಾಣಿಸಿದ್ದು ಚಿರತೆಗಳು!

ಹಾಸನದ ಮಂಜ್ರಾಬಾದ್ ಕೋಟೆ ನೋಡಲು ಬಂದು ಕಾಲು ಜಾರಿ ಬಿದ್ದಿದ್ದ ಯುವಕನ ರಕ್ಷಣೆ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಂಜ್ರಾಬಾದ್ ಕೋಟೆ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದ ಪ್ರವಾಸಿಗನನ್ನು ರಕ್ಷಿಸಲಾಗಿದೆ. ಬೆಂಗಳೂರು ಮೂಲದ ವಿನಯ್ ಎಂಬಾತ ಮಂಜ್ರಾಬಾದ್ ಕೋಟೆ ನೋಡಲು ಬಂದಿದ್ದ. ಈ ವೇಳೆ ಕಾಲು ಜಾರಿ ಬಿದ್ದಿದ್ದು ಕೋಟೆಯ ಗೋಡೆ ಮೇಲ್ಬಾಗದಿಂದ ಕೆಳ ಭಾಗದ ಕಾಡಿಗೆ ಬಿದ್ದಿದ್ದಾರೆ. ಪ್ರವಾಸಿ ಮಿತ್ರ ಪೊಲೀಸ್ ಲೋಹಿತ್ ಮತ್ತು ಪ್ರವಾಸಿಗರು ಅಪಾಯದಲ್ಲಿದ್ದ ಯುವಕನನ್ನು ರಕ್ಷಿಸಿದ್ದಾರೆ.

ಕಾಪಾಡಿ.. ಕಾಪಾಡಿ.. ಎಂದು ಕಿರುಚುತ್ತಿದ್ದ ಯುವಕನ ನೆರವಿಗೆ ಬಂದು ಏಣಿ ಮೂಲಕ ಮೇಲಕ್ಕೆ ಹತ್ತಿಸಿ ರಕ್ಷಣೆ ಮಾಡಿದ್ದಾರೆ. ಪ್ರವಾಸಿ ಮಿತ್ರ ಪೊಲೀಸರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಪ್ರವಾಸಿಗ ವಿನಯ್ ಜೀವ ರಕ್ಷಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ