ಧರ್ಮಸ್ಥಳ ಕೇಸ್: ತಿಮರೋಡಿ ಜತೆಗಿನ ನಂಟಿನ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಕೊಟ್ಟ ಚಿನ್ನಯ್ಯ
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣದಲ್ಲಿ ಚಿನ್ನಯ್ಯನ ಬಂಧನದೊಂದಿಗೆ ಹೊಸ ತಿರುವು ಪಡೆದಿದೆ. ಎಸ್ಐಟಿ ವಿಚಾರಣೆಯಲ್ಲಿ ಚಿನ್ನಯ್ಯ ಮಹೇಶ್ ತಿಮರೋಡಿ ಜೊತೆಗಿನ ಸಂಬಂಧ, ಪುಣೆಯ ವಕೀಲರ ಭೇಟಿ, ಪ್ರಖ್ಯಾತ ಸ್ವಾಮೀಜಿಯರ ಭೇಟಿ ಹಾಗೂ ವಿಡಿಯೋ ರೆಕಾರ್ಡ್ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ತಿಮರೋಡಿ ಮನೆಯಲ್ಲಿ ನಡೆದ ವಾದವಿವಾದ, ಶೋಧ ಕಾರ್ಯಾಚರಣೆ ಮತ್ತು ವಶಪಡಿಸಿಕೊಂಡ ವಸ್ತುಗಳ ಬಗ್ಗೆಯೂ ಮಾಹಿತಿ ಇದೆ.

ಮಂಗಳೂರು, ಆಗಸ್ಟ್ 26: ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ಹೇಳಿದ್ದ ಪ್ರಕರಣ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ಹೇಳಿದ್ದ ಚಿನ್ನಯ್ಯನನ್ನು ಎಸ್ಐಟಿ (SIT) ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಮಹೇಶ್ ತಿಮರೋಡಿ ಗ್ಯಾಂಗ್ ಪುಣೆಯಲ್ಲಿನ ಓರ್ವ ವಕೀಲರನ್ನು ಭೇಟಿ ಮಾಡಲು ಕರೆದುಕೊಂಡು ಹೋಗಿದ್ದರು. ಅಲ್ಲದೇ, ರಾಜ್ಯದ ಪ್ರಖ್ಯಾತ ಸ್ವಾಮೀಜಿಯನ್ನ ಭೇಟಿ ಮಾಡಿಸಿದ್ದಾರೆ. ಭೇಟಿ ಮಾಡುವುದು ಮತ್ತು ಮಾತನಾಡಿರುವುದು ವಿಡಿಯೋ ರೆಕಾರ್ಡ್ ಇದೆ. ಆ ವಿಡಿಯೋ ಮಹೇಶ್ ತಿಮರೋಡಿ ಮನೆಯಲ್ಲಿ ಇದೆ ಎಂದು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ.
ತಿಮರೋಡಿ ಮನೆಯಲ್ಲಿ ವಾಸವಿದ್ದ ಚಿನ್ನಯ್ಯ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಚಿನ್ನಯ್ಯ ಅಶ್ರಯ ಪಡೆದಿದ್ದರು. ತಿಮರೋಡಿ ಮನೆಯಲ್ಲೇ 20 ರಿಂದ 25 ಸಂದರ್ಶನಗಳನ್ನು ನೀಡಿದ್ದಾರೆ. ಅಲ್ಲದೆ, ಧರ್ಮಸ್ಥಳ ಸುತ್ತಮುತ್ತ ಶೋಧ ನಡೆಸುತ್ತಿದ್ದ ವೇಳೆ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಇರುತ್ತಿದ್ದರು. ಎಸ್ಐಟಿ ವಿಚಾರಣೆ ನಂತರ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ತೆರಳುತ್ತಿದ್ದನು. ವಕೀಲರ ಜೊತೆ ಕಾರಿನಲ್ಲಿ ತಿಮರೋಡಿ ಮನೆಗೆ ಚಿನ್ನಯ್ಯ ತೆರಳುತ್ತಿದ್ದರು. ಚಿನ್ನಯ್ಯ ಸುಮಾರು ಎರಡು ತಿಂಗಳಿಂದ ತಿಮರೋಡಿ ಮನೆಯಲ್ಲಿ ನೆಲೆಸಿದ್ದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ‘ಬುರುಡೆ’ ಚಿನ್ನಯ್ಯನ ಮೂಲ ಕೆದಕಿದ ಎಸ್ಐಟಿ, ತಮಿಳುನಾಡಿಗೂ ಲಿಂಕ್!
ಮಹೇಶ್ ತಿಮರೋಡಿ ಮನೆಯಲ್ಲಿ ಶೋಧ
ಹೀಗಾಗಿ, ಎಸ್ಐಟಿ ಅಧಿಕಾರಿಗಳು ಮನೆ ಶೋಧಕ್ಕೆ ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಮಹಜರು ನಡೆಸಿದರು. ಅಲ್ಲದೆ, ಮಹೇಶ್ ಶೆಟ್ಟಿ ತಿಮರೋಡಿಯ ಸೋದರ ಮೋಹನ್ ಕುಮಾರ್ ಮನೆಯಲ್ಲೂ ಶೋಧ ಕಾರ್ಯ ನಡೆಸಿದರು. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿದ್ದ ಚಿನ್ನಯ್ಯನ ಮೊಬೈಲ್ ಅನ್ನು ಎಸ್ಐಟಿ ಅಧಿಕಾರಿಗಳು ವಶಪಡಿಸಿಕೊಂಡರು. ಚಿನ್ನಯ್ಯ ಬಳಸುತ್ತಿದ್ದ ವಸ್ತುಗಳು, ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ಎಸ್ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದಿದ್ದಾರೆ.
ತಿಮರೋಡಿ ಮನೆಯಲ್ಲಿ ನಡೆದಿತ್ತಾ ಗಲಾಟೆ?
ಚಿನ್ನಯ್ಯ ಹಾಗೂ ಹೋರಾಟಗಾರ ಗುಂಪು ನಡುವೆ ಮಹೇಶ್ ಶೆಟ್ಟಿ ತಿಮರೋಡಿ ನಡೆದಿತ್ತು ವಾದ ವಿವಾದ ನಡೆದದಿತ್ತಂತೆ. ಉತ್ಖನನ ಕಾರ್ಯಾಚರಣೆ ವೈಫಲ್ಯ ಬೆನ್ನಲ್ಲೇ ಮಾತಿನ ಚಕಮಕಿ ನಡೆದಿತ್ತಂತೆ. ಗುರುತಿಸಿದ್ದ ಸ್ಥಳದಲ್ಲಿ ಕಳೇಬರ ಸಿಗದೆ ಇದ್ದಾಗ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತಂತೆ. ಈ ವಿಚಾರವನ್ನು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳ ತನಿಖೆ ವೇಳೆ ಬಾಯಿ ಬಿಟ್ಟಿದ್ದನು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Tue, 26 August 25



