ಧರ್ಮಸ್ಥಳ ಪ್ರಕರಣ: ಅಂತಿಮ ಹಂತ ತಲುಪಿದ ಬುರುಡೆ ಚಿನ್ನಯ್ಯ ಕೇಸ್, ಎಸ್ಐಟಿ ಚಾರ್ಜ್ಶೀಟ್ ಬಹುತೇಕ ಸಿದ್ಧ
ಧರ್ಮಸ್ಥಳ ಪ್ರಕರಣ ಸಂಬಂಧ ಬುರುಡೆ ಚಿನ್ನಯ್ಯನ ವಿರುದ್ಧ ತನಿಖೆ ಹಾಗೂ ವಿಚಾರಣೆಯನ್ನು ಬಹುತೇಕ ಮುಕ್ತಾಯಗೊಳಿಸಿರುವ ಎಸ್ಐಟಿ ಚಾರ್ಜ್ಶೀಟ್ ಸಿದ್ಧಪಡಿಸುತ್ತಿದೆ. ಈ ತಿಂಗಳ ಕೊನೆಯಲ್ಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆ ಇದೆ. ಇದರೊಂದಿಗೆ, ಪ್ರಕರಣದ ಒಂದು ಆಯಾಮದ ತನಿಖೆ ಮಹತ್ವದ ಘಟ್ಟಕ್ಕೆ ಬಂದಂತಾಗಿದೆ.

ಮಂಗಳೂರು, ಅಕ್ಟೋಬರ್ 8: ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಮಾಸ್ಕ್ಮ್ಯಾನ್ ಚಿನ್ನಯ್ಯ ಬುರುಡೆ ಹೊತ್ತುತಂಬಿದ್ದ. ಆದರೆ, ಚಿನ್ನಯ್ಯನ ಈ ಕಥೆಗಳೆಲ್ಲ ಸುಳ್ಳು ಎಂದು ಪೊಲೀಸರಿಗೆ ಗೊತ್ತಾದ ಬೆನ್ನಲ್ಲೇ ಜೈಲುಪಾಲಾಗಿದ್ದಾನೆ. ಇದೀಗ, ಚಿನ್ನಯ್ಯನ ಬುರುಡೆ ಕೇಸ್ ತನಿಖೆ ಅಂತಿಮ ಘಟ್ಟಕ್ಕೆ ತಲುಪಿದೆ. ಜುಲೈ 25 ರಿಂದ ಈವರೆಗಿನ ಅಂತಿಮ ವರದಿ ತಯಾರಿಸುವ ಪ್ರಕ್ರಿಯೆಯಲ್ಲಿರುವ ಎಸ್ಐಟಿ ಎಲ್ಲಾ ದಾಖಲೆ, ಹಲವು ಸಾಕ್ಷ್ಯ ಹಾಗೂ ಹೇಳಿಕೆ ದಾಖಲು ಪ್ರಕ್ರಿಯೆ ಪೂರ್ಣಗೊಳಿಸಿದೆ.
ಬುರುಡೆ ಚಿನ್ನಯ್ಯನ ಕೇಸ್ನಲ್ಲಿ ಅಕ್ಟೊಬರ್ 30ರ ಒಳಗಡೆ ಚಾರ್ಜ್ಶೀಟ್ ತಯಾರಿಗೆ ಸಿದ್ಧತೆ ನಡೆದಿದೆ. ನವೆಂಬರ್ 23 ರ ಒಳಗೆ ಬೆಳ್ತಂಗಡಿ ಕೋರ್ಟ್ಗೆಚಾರ್ಜ್ಶೀಟ್ ಸಲ್ಲಿಕೆ ಅಗಲಿದೆ.
ವಾಸಂತಿ ಪ್ರಕರಣದ ಬಗ್ಗೆ ಸುಜಾತಾ ಭಟ್ ಸ್ಫೋಟಕ ಹೇಳಿಕೆ
ಧರ್ಮಸ್ಥಳದಲ್ಲಿ ನನ್ನ ಪುತ್ರಿ ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಸಾಲು ಸಾಲು ಬುರುಡೆ ಬಿಟ್ಟಿದ್ದ ಸುಜಾತ ಭಟ್ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಬುರುಡೆ ಗ್ಯಾಂಗ್ ಜೊತೆ ಸೇರಿ ಕೆಟ್ಟೆ. ನನ್ನಿಂದ ತಪ್ಪಾಗಿದೆ ಎಂದು ‘ಟಿವಿ9’ ಎದುರು ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ಧರ್ಮಸ್ಥಳ ದೇವರಿಗೆ, ವೀರೇಂದ್ರ ಹೆಗ್ಗಡೆಯವರಿಗೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಅಲ್ಲದೆ, ವಾಸಂತಿ ಫೋಟೋ ಹಿಡಿದು ಮಗಳು ಅನನ್ಯಾ ಭಟ್ ಎಂದಿದ್ದ ಸುಜಾತ ಭಟ್, ಇದೀಗ ವಾಸಂತಿ ಸತ್ತಿಲ್ಲ ಬದುಕಿದ್ದಾಳೆ ಎಂದಿದ್ದಾರೆ. ವಾಸಂತಿ ಗಂಡ ಶ್ರೀವತ್ಸ ಮತ್ತು ನಟನ ಸೋದರ ಸ್ನೇಹಿತರು. ಆತನ ಜತೆ ವಾಸಂತಿ ಹೋಗಿರುವ ಅನುಮಾನವಿದೆ ಎಂದಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಸುಜಾತ ಭಟ್ ಕೇಸ್ನಲ್ಲಿ ದಕ್ಷಿಣ ಭಾರತದ ಹೆಸರಾಂತ ನಟನ ಸಹೋದರನಿಗೆ ಸಂಕಷ್ಟ? ಎಸ್ಐಟಿ ನೋಟಿಸ್ ಸಾಧ್ಯತೆ
ಬೆಂಗಳೂರಿನಲ್ಲಿ ಪತಿ ಶ್ರೀವತ್ಸ ಜತೆ ವಾಸವಿದ್ದ ವಾಸಂತಿ ಮನೆಗೆ ಖ್ಯಾತ ನಟನ ತಮ್ಮ ಬರುತ್ತಿದ್ದ. ಮದುವೆ ಆದ ಕೆಲ ತಿಂಗಳಲ್ಲೇ ವಾಸಂತಿ ನಾಪತ್ತೆಯಾಗಿ ಕೊಡಗಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಶವ ಸಿಗುತ್ತಿದ್ದಂತೆಯೇ ಖ್ಯಾತ ನಟನ ಸೋದರ ಬೆಂಗಳೂರಿಂದ ಕಾಲ್ಕಿತ್ತಿದ್ದ. ತಮಿಳುನಾಡಿಗೆ ಹೋಗಿ ಸೆಟಲ್ ಆಗಿದ್ದ. ಆತನ ವಿಚಾರಣೆ ಕೂಡ ಆಗಬೇಕಿದ್ದು ವಿಳಾಸ ಸಿಗದೆ ಆತನಿಗೆ ಎಸ್ಐಟಿ ನೋಟಿಸ್ ಕೊಡಲು ಸಾಧ್ಯವಾಗಿಲ್ಲ. ಈಗ ಈ ಸ್ಟಾರ್ ನಟನ ಸಹೋದರನಿಗೆ ಎಸ್ಐಟಿ ನೋಟಿಸ್ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.



