ಚಾರ್ಮಾಡಿ ಅರಣ್ಯದಲ್ಲಿ ಟ್ರಕ್ಕಿಂಗ್ಗೆ ಹೋದ DYSP ಸಂಬಂಧಿಕರು ನಾಪತ್ತೆ
ಚಿಕ್ಕಮಗಳೂರು(Chikkamagalauru) ಜಿಲ್ಲೆಯ ಕಳಸ ಅರಣ್ಯ ವ್ಯಾಪ್ತಿಯ ದುರ್ಗದಹಳ್ಳಿಯಿಂದ ಬೆಂಗಳೂರು ಮೂಲದ ಮೂವರು ಯುವಕರು ಚಾರಣಕ್ಕೆ ತೆರಳಿದ್ದರು. ಈ ವೇಳೆ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಓರ್ವ ಯುವಕ ನೀಡಿದ ಮಾಹಿತಿ ಮೇರೆಗೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು, ಅರಣ್ಯಾಧಿಕಾರಿಗಳ ಹುಡುಕಾಟ ನಡೆಸಿದ್ದು, ಈ ವೇಳೆ ನಾಪತ್ತೆಯಾದ ಯುವಕರ ಮೊಬೈಲ್ ನೆಟ್ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿದೆ.
ದಕ್ಷಿಣ ಕನ್ನಡ, ಫೆ.25: ಚಾರ್ಮಾಡಿ ಅರಣ್ಯಕ್ಕೆ ಟ್ರಕ್ಕಿಂಗ್ಗೆ ಹೋದ ಡಿವೈಎಸ್ಪಿ(DYSP) ಸಂಬಂಧಿಕರು ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಬೆಂಗಳೂರು ಮೂಲದ ಮೂವರು ಯುವಕರು, ಇಂದು ಸಂಜೆ ಚಿಕ್ಕಮಗಳೂರು(Chikkamagalauru) ಜಿಲ್ಲೆಯ ಕಳಸ ಅರಣ್ಯ ವ್ಯಾಪ್ತಿಯ ದುರ್ಗದಹಳ್ಳಿಯಿಂದ ಚಾರಣಕ್ಕೆ ತೆರಳಿದ್ದರು. ರಾತ್ರಿ ವೇಳೆಗೆ ಇಬ್ಬರು ಯುವಕರು ಮಿಸ್ಸಿಂಗ್ ಆಗಿದ್ದಾರೆ. ಓರ್ವ ಯುವಕ ನೀಡಿದ ಮಾಹಿತಿ ಮೇರೆಗೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು, ಅರಣ್ಯಾಧಿಕಾರಿಗಳ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಾಪತ್ತೆಯಾದ ಯುವಕರ ಮೊಬೈಲ್ ನೆಟ್ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಆ ಪ್ರದೇಶದಲ್ಲಿ ಆನೆ ಸಂಚಾರ ಹೆಚ್ಚಿದೆ ಎನ್ನಲಾಗುತ್ತಿದೆ.
ಮನೆಯ ಬೀಗ ಮುರಿದು ಐದು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ಕಳ್ಳತನ
ದಾವಣಗೆರೆ: ಶಾಮನೂರಿನ ಶ್ರೀಸಾಮಾನ್ಯ ಬಡಾವಣೆಯಲ್ಲಿ ನಿವೃತ್ತ ಎಲ್‌ಐಸಿ ಅಧಿಕಾರಿಯೊಬ್ಬರ ಮನೆ ಬೀಗ ಮುರಿದ ಕಳ್ಳರು 5 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಹಾಗೂ 10 ಸಾವಿರ ನಗದು ಹಣ ಕಳ್ಳತನ ಮಾಡಿದ್ದಾರೆ. ಬಡಾವಣೆಯ ಮೋಹನ್ ಶಿವಪುತ್ರಪ್ಪ ಹೊನ್ನಜ್ಜನವರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಫೆ.20ರಂದು ಸಂಬಂಧಿಕರ ಊರಾದ ಹಿರೇಕೆರೂರು ಜಾತ್ರೆಗೆ ಹೋಗಿದ್ದು, ಫೆ.23ರಂದು ವಾಪಸ್ ಬಂದು ನೋಡಿದಾಗ ಮನೆಯ ಬೀರುವಿನಲ್ಲಿ ಇಟ್ಟಿದ್ದ ಜುಮುಕಿ, ಬೆಂಡೋಲೆ, ಉಂಗುರ, ಲಾಕೆಟ್, ಬೆಳ್ಳಿ ದೀಪ, ಚೈನು ಸೇರಿ 87 ಗ್ರಾಂ ಚಿನ್ನ ಹಾಗೂ 720 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮಂಗಳೂರು: ನಾಪತ್ತೆಯಾದ ಯುವತಿಯ ದ್ವಿಚಕ್ರ ವಾಹನ ಪತ್ತೆ; ಚುರುಕುಗೊಂಡ ತನಿಖೆ
ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು
ದಾವಣಗೆರೆ: ಮನೆಯ ಹೊರಗಡೆ ನೀರಿನ ಮೋಟರ್ ಪೈಪ್ ಅಳವಡಿಸಲು ಹೋದಾಗ ವಿದ್ಯುತ್ ತಗುಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಬಾಷಾ ನಗರದಲ್ಲಿ ಶನಿವಾರ ನಡೆದಿದೆ. ಮೊಹಮದ್ ರಫೀಕ್ (38) ಮೃತ ವ್ಯಕ್ತಿ. ಹೊಸಬಟ್ಟೆ ತರಲು ಮನೆಯ ಹೊರಗಡೆ ನಿಂತಿದ್ದಾಗ ಅದೇ ಸಮಯಕ್ಕೆ ಕುಡಿಯುವ ನೀರು ಬಿಟ್ಟಿದ್ದಾರೆ. ನೀರಿನ ಮೋಟರ್ ಅನ್ನು ಇಟ್ಟು ಸ್ವಿಚ್ ಹಾಕಿ ಮೋಟರ್‌ಗೆ ನೀರಿನ ಪೈಪ್ ಅಳವಡಿಸಲು ಹೋದಾಗ ಏಕಾಏಕಿ ವಿದ್ಯುತ್ ತಗುಲಿದೆ. ಕೂಡಲೇ ಕೆಳಗೆ ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಪತ್ನಿ ನೀಡಿದ ದೂರಿನಂತೆ ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ