Viral Video: ಹೊತ್ತಿ ಉರಿದ 14 ಅಂತಸ್ತಿನ ಕಟ್ಟಡ; 10 ಸಾವು, 20ಕ್ಕೂ ಹೆಚ್ಚು ಮಂದಿ ನಾಪತ್ತೆ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜನರು ಬೆಂಕಿಯಿಂದ ಪ್ರಾಣವನ್ನು ಉಳಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಜಿಗ್ಗಿಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನಿಮ್ಮ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ಬೆಂಕಿಯಲ್ಲಿ ಇನ್ನೂ ಎಷ್ಟು ಮಂದಿ ಸಿಲುಕಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಸ್ಪೇನ್‌ನ ವೆಲೆನ್ಸಿಯಾದಲ್ಲಿ 14 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಗುರುವಾರ ಸಂಜೆ 5.30 ಈ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. 10 ಜನ ಸಾವು, 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದು ವರದಿಯಾಗಿದೆ. ಕಟ್ಟಡದಲ್ಲಿ ಸುಮಾರು 350 ಮಂದಿ ಸಿಲುಕಿಕೊಂಡಿದ್ದರು. ಬೆಂಕಿಯಿಂದ ಪಾರಾಗಲು ಹಲವರು ಹಲವು ಮಹಡಿಗಳಿಂದ ಜಿಗಿದಿದ್ದಾರೆ. ಕಟ್ಟಡದ ಕೆಳಗೆ ಬಲೆಗಳನ್ನು ಜೋಡಿಸಲಾಗಿತ್ತು. ಅಪಘಾತವಾದ ಕೆಲವೇ ಕ್ಷಣಗಳಲ್ಲಿ ಟವರ್‌ಗೆ ಬೆಂಕಿ ಆವರಿಸಿದ್ದು, ಆ ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೂ ಬೆಂಕಿ ವ್ಯಾಪಿಸಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜನರು ಬೆಂಕಿಯಿಂದ ಪ್ರಾಣವನ್ನು ಉಳಿಸಿಕೊಳ್ಳಲು ಕಟ್ಟಡಗಳಿಂದ ಕೆಳಗೆ ಹಾಕಲಾದ ಬಲೆಯ ಮೇಲೆ ಜಿಗ್ಗಿಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನಿಮ್ಮ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.
ಇದನ್ನೂ ಓದಿ: ಮೊದ್ಲು ಮದುವೆ ಆಮೇಲೆ ಓದು, 13 ವರ್ಷಕ್ಕೆ ಮದುವೆಗೆ ರೆಡಿಯಾದ ಬಾಲಕ;ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Heavy fire in a residential tower in Valencia, Spain pic.twitter.com/kno59GiLRE
— S p r i n t e r (@Sprinter99800) February 23, 2024
ಬೆಂಕಿಯ ತೀವ್ರ ಶಾಖ ಮತ್ತು 14 ಅಂತಸ್ತಿನ ಕಟ್ಟಡ ಕುಸಿಯುವ ಅಪಾಯವು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿತ್ತು. ಬೆಂಕಿಯಲ್ಲಿ ಇನ್ನೂ ಎಷ್ಟು ಮಂದಿ ಸಿಲುಕಿದ್ದಾರೆ ಎಂಬುದು ತಿಳಿದುಬಂದಿಲ್ಲ. ಅಧಿಕಾರಿಗಳ ಪ್ರಕಾರ, ಕಟ್ಟಡದ ನಿವಾಸಿಗಳಿಗೆ ಹೋಟೆಲ್‌ಗಳಲ್ಲಿ ಅಥವಾ ಸಂಬಂಧಿಕರು ಅಥವಾ ನೆರೆಹೊರೆಯವರ ಮನೆಗಳಲ್ಲಿ ವಸತಿ ನೀಡಲಾಯಿತು. ಕಟ್ಟಡದ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಪಕ್ಕದ ಕಟ್ಟಡಕ್ಕೂ ವ್ಯಾಪಿಸಿದೆ. ಸ್ಪೇನ್‌ನ ಮಿಲಿಟರಿ ತುರ್ತು ಘಟಕದ ಸುಮಾರು 90 ಸೈನಿಕರು ಮತ್ತು 40 ಅಗ್ನಿಶಾಮಕ ಟ್ರಕ್‌ಗಳನ್ನು ಸಹ ನಿಯೋಜಿಸಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:31 am, Sun, 25 February 24