Viral News :ಬಸ್ಸಿನಲ್ಲಿ ಪಟಾಕಿ ಸಿಡಿಸಿ ಸಹ ಪ್ರಯಾಣಿಕರ ಎದೆಯಲ್ಲಿ ನಡುಕ ಹುಟ್ಟಿಸಿದ ಯುವತಿ, ನೆಟ್ಟಿಗರು ಫುಲ್ ಗರಂ
ಸೋಶಿಯಲ್ ಮೀಡಿಯಾಗಳೇ ಹಾಗೆ, ಬಹುದೊಡ್ಡ ಮಾಧ್ಯಮವಾಗಿ ಬೆಳೆದಿದ್ದು, ಮನೋರಂಜನೆಗೆ ಎಳ್ಳಷ್ಟೂ ಕೊರತೆಯಿಲ್ಲ. ಈ ಜಾಲತಾಣಗಳಲ್ಲಿ ನಗುತರಿಸುವ, ಭಯ ಹುಟ್ಟಿಸುವ ಹಾಗೂ ಎಡವಟ್ಟು ವಿಡಿಯೋಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಚಲಿಸುತ್ತಿರುವ ಬಸ್ಸಿನಲ್ಲಿ ಪಟಾಕಿ ಸಿಡಿಸಿ ಸಹ ಪ್ರಯಾಣಿಕರಿಗೆ ಭಯ ಹುಟ್ಟಿಸಿದ್ದಾಳೆ. ಈ ಯುವತಿಯ ಈ ವರ್ತನೆಗೆ ಪ್ರಯಾಣಿಕರು ದಿಕ್ಕ ಪಾಲಾಗಿ ಓಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಯುವತಿಯರ ವಿರುದ್ಧ ಗರಂ ಆಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಮ್ಮೆ ಪುಂಡ ಪೋಕರಿಗಳು ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡುವುದು ಸರ್ವೇ ಸಾಮಾನ್ಯ. ಅದಲ್ಲದೇ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ತಮಾಷೆ ಮಾಡಲು ಹೋಗಿ ಅಲ್ಲಿದ್ದವರಿಗೆ ಭಯ ಹುಟ್ಟಿದ ಬೇಡದ ಅನಾಹುತಕ್ಕೂ ಕಾರಣವಾಗುತ್ತಾರೆ. ಯುವತಿಯೊಬ್ಬಳು ಪಟಾಕಿಯನ್ನು ಹಿಡಿದು ಎಡವಟ್ಟು ಮಾಡಿಕೊಂಡಿದ್ದಾಳೆ. ನಾವೆಲ್ಲರೂ ಪಟಾಕಿಯನ್ನು ನೆಲದ ಮೇಲೆ ಇಟ್ಟು ಬೆಂಕಿ ಹಚ್ಚಿ ಹೋಗುತ್ತೇವೆ. ಆದರೆ ಹದಿಹರೆಯದ ಯುವತಿಯೊಬ್ಬಳು ಸಾರ್ವಜನಿಕ ಬಸ್ಸಿನಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾಳೆ.
ಕಳೆದ ವರ್ಷ ನಡೆದ ಘಟನೆಯ ಈ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಈ ಹಿಂದೆ 14 ವರ್ಷದ ಹುಡುಗಿಯೊಬ್ಬಳು ಟೊರೊಂಟೊದಲ್ಲಿ ಸಾರ್ವಜನಿಕ ಬಸ್‌ನಲ್ಲಿ ಪಟಾಕಿ ಹಚ್ಚಿದ್ದಳು. ಈ ಘಟನೆಯ ಬಳಿಕ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈ ಘಟನೆಯ ಬಳಿಕ ಟ್ವೀಟ್ ಮಾಡಿದ್ದ ಸಾರಿಗೆ ಸಂಸ್ಥೆಯು, “ಸಾರ್ವಜನಿಕ ಸಾರಿಗೆಯಲ್ಲಿ ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸುವುದು ಬೇಜವಾಬ್ದಾರಿ ವರ್ತನೆಯ ಪರಮಾವಧಿ ಎಂದು ಹೇಳಬೇಕಾಗಿಲ್ಲ. ಅದೃಷ್ಟವಶಾತ್, ಯಾವುದೇ ಗಂಭೀರ ಗಾಯಗಳಾಗಿಲ್ಲ. ಇವು ಕಾನೂನುಬಾಹಿರ ಕೃತ್ಯಗಳು ಮತ್ತು ನಮ್ಮ ಬಳಿ ವೀಡಿಯೊ ಇದೆ. ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುತ್ತದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.” ಎಂದಿದ್ದರು.
ಇದನ್ನೂ ಓದಿ: ಮೊದ್ಲು ಮದುವೆ ಆಮೇಲೆ ಓದು, 13 ವರ್ಷಕ್ಕೆ ಮದುವೆಗೆ ರೆಡಿಯಾದ ಬಾಲಕ;ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
This girl set off a firework on a public bus… pic.twitter.com/DOPydJLArE
— non aesthetic things (@PicturesFoIder) February 23, 2024
ಇದೀಗ ಮತ್ತೆ ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯೊಬ್ಬಳು ಕೈಯಲ್ಲಿ ಪಟಾಕಿಯನ್ನು ಹಿಡಿದು ನಗುತ್ತಾ ಇರುವುದನ್ನು ನೋಡಬಹುದು. ಕಿಕ್ಕಿರಿದು ತುಂಬಿದ್ದ ಬಸ್ಸಿನೊಳಗೆ ಕೋಲಾಹಲ ಭುಗಿಲೇಳುವ ಮುನ್ನ ಆಕೆಯ ಜೊತೆಗಿದ್ದ ಕೆಲವರು ಆಕೆಯನ್ನು ಹುರಿದುಂಬಿಸುತ್ತಿರುವುದು ಕಾಣಬಹುದು. ಆದರೆ ಇತ್ತ ಸಹ ಪ್ರಯಾಣಿಕರು ಜೋರಾಗಿ ಕಿರುಚುತ್ತ ಬಸ್ಸಿನಿಂದ ಹೊರಗೆ ಇಳಿದಿದ್ದಾರೆ.
ಕೆಲವರು ತಲೆಯ ಮೇಲೆ ಕೈ ಹಿಡಿದು ಓಡುತ್ತಿದ್ದಾರೆ. ಈ ಯುವತಿಯು ಕೈಯನ್ನು ಮೇಲಕ್ಕೆತ್ತಿ ಪಟಾಕಿಯನ್ನು ಬಸ್‌ನ ಹಿಂಭಾಗಕ್ಕೆ ಹಿಡಿದಿದ್ದಾಳೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಯುವತಿಯ ಈ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದಾರೆ. ಬಳಕೆದಾರರೊಬ್ಬರು ‘ಆಕೆಯನ್ನು ಜೈಲಿಗೆ ಕಳುಹಿಸಬೇಕು’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಅವಳು ಬಸ್ಸಿನಲ್ಲಿ ಪಟಾಕಿ ಏಕೆ ಸಿಡಿಸಿದಳು’ ಎಂದು ಪ್ರಶ್ನಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ