ಹಂಪಿ ಉತ್ಸವದ ವೇದಿಕೆ ಹಿಂಭಾಗದಲ್ಲಿ ಬೆಂಕಿ, ಅಗ್ನಿ ಶಾಮಕದಳ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅಪಾಯ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಉತ್ಸವ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಇದೀಗ ಏಕಾಎಕಿ ಕಾರ್ಯಕ್ರಮದ ಮುಖ್ಯ ವೇದಿಕೆ ಗಾಯತ್ರಿ ಪೀಠದ ಪಕ್ಕದ ಬಿದರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಿಗರೇಟ್ ಸೇದಿ ಎಸೆದಿರುವ ಹಿನ್ನೆಲೆ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಹಂಪಿ ಉತ್ಸವದ ವೇದಿಕೆ ಹಿಂಭಾಗದಲ್ಲಿ ಬೆಂಕಿ, ಅಗ್ನಿ ಶಾಮಕದಳ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅಪಾಯ
ಹಂಪಿ ಉತ್ಸವದಲ್ಲಿ ಬೆಂಕಿ ಅವಘಡ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 04, 2024 | 4:48 PM

ವಿಜಯನಗರ, ಫೆ.04: ಹಂಪಿ ಉತ್ಸವದ ವೇದಿಕೆ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿ ಶಾಮಕದಳ ಸಿಬ್ಬಂದಿಯು ಸಮಯ ಪ್ರಜ್ಞೆ ಮೆರೆದು ಬೆಂಕಿ ನಂದಿಸಿದ್ದಾರೆ. ಈ ಹಿನ್ನಲೆ ಭಾರಿ ಅನಾಹುತ ತಪ್ಪಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಉತ್ಸವ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಇಂದು  ಕಾರ್ಯಕ್ರಮದ ಮುಖ್ಯ ವೇದಿಕೆ ಗಾಯತ್ರಿ ಪೀಠದ ಪಕ್ಕದ ಬಿದರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಿಗರೇಟ್ ಸೇದಿ ಎಸೆದಿರುವ ಹಿನ್ನೆಲೆ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆಟಿಕೆ ಫ್ಯಾಕ್ಟರಿಗೆ ಬೆಂಕಿ! ಗೋಡೆ ಒಡೆದು ಸಿಬ್ಬಂದಿಯ ರಕ್ಷಣೆ

ರಾಮನಗರ: ಆಟಿಕೆ ಫ್ಯಾಕ್ಟರಿಗೆ ಬೆಂಕಿ ಬಿದ್ದಿದ್ದು, ಗೋಡೆ ಒಡೆದು ಸಿಬ್ಬಂದಿಯನ್ನು ರಕ್ಷಣೆ ಮಾಡಲಾದ ಘಟನೆ ಜಿಲ್ಲೆಯ ಚನ್ನಪಟ್ಟಣದ ಕುಡಿ ನೀರು ಕಟ್ಟೆ ಬಳಿ ನಡೆದಿದೆ. ಹೊಗೆ ಕಾಣಿಸಿಕೊಂಡದ್ದನ್ನು ಗಮನಿಸಿದ್ದ‌ ಪೊಲೀಸರು, ಬೆಂಕಿ ಹತ್ತುದ್ದಿಂತೆ ಅಗ್ನಿ ಶಾಮಕ‌ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಮುಂಬಾಗಿಲಿ‌ನಲ್ಲಿ ಬರುವುದಕ್ಕಾಗದ ಸ್ಥಿತಿಯಲ್ಲಿದ್ದ ಫ್ಯಾಕ್ಟರಿ ಸಿಬ್ಬಂದಿಯನ್ನು ಜೆಸಿಬಿಯಿಂದ ಹಿಂದಿನ ಗೋಡೆ ಒಡೆದು ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ‌ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮಾಡಿದ್ದು, ಎರಡು ವಾಟರ್ ಜೆಟ್ ಲಾರಿಯ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಇನ್ನು ರವಿವಾರ ಆದ ಕಾರಣ ಕಾರ್ಮಿಕರು ಕಡಿಮೆ ಸಂಖ್ಯೆಯಲ್ಲಿದ್ದರು. ಈ ಹಿನ್ನಲೆ ಭಾರಿ ಅನಾಹುತ ಅದೃಷ್ಟವಶಾತ್​ ತಪ್ಪಿದೆ.

ಇದನ್ನೂ ಓದಿ:ಗುರುಗ್ರಾಮ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು, ಹೊತ್ತಿಕೊಂಡ ಬೆಂಕಿ ಚಾಲಕ ಸಜೀವ ದಹನ

ಕೋಣನೂರು, ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಕೋಣನೂರು ಹಾಗೂ ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ನೂರಾರು ಎಕರೆ ಪ್ರದೇಶದ ವನಸಂಪತ್ತು ನಾಶವಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಬೇಸಿಗೆ ಆರಂಭಕ್ಕೂ ಮೊದಲೇ ಅರಣ್ಯದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ದನಕರುಗಳು ಮತ್ತು ಕಾಡು ಪ್ರಾಣಿಗಳ ಆಹಾರವಾಗಿದ್ದ ಪ್ರದೇಶ ಇದೀಗ ಸುಟ್ಟು ಕರಕಲಾಗಿದ್ದು, ಜಾನುವಾರುಗಳಿಗೆ ಮೇವಿಗೆ ಕೊರತೆಯಾಗುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Sun, 4 February 24

ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ಕಟ್ಟಡ ಕುಸಿತ: ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ
ಕಟ್ಟಡ ಕುಸಿತ: ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ