Omicron: ಕರ್ನಾಟಕದಲ್ಲಿ ಮತ್ತೆ 6 ಒಮಿಕ್ರಾನ್ ಪ್ರಕರಣ ಪತ್ತೆ; ದಕ್ಷಿಣ ಕನ್ನಡದಲ್ಲೇ ಐವರಿಗೆ ಒಮಿಕ್ರಾನ್ ದೃಢ

Omicron Cases: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಐವರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಶಿಕ್ಷಣ ಸಂಸ್ಥೆಯೊಂದರಲ್ಲಿ ನಾಲ್ವರಿಗೆ ಒಮಿಕ್ರಾನ್ ದೃಢವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಸಚಿವ ಡಾ.ಕೆ. ಸುಧಾಕರ್ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.

Omicron: ಕರ್ನಾಟಕದಲ್ಲಿ ಮತ್ತೆ 6 ಒಮಿಕ್ರಾನ್ ಪ್ರಕರಣ ಪತ್ತೆ; ದಕ್ಷಿಣ ಕನ್ನಡದಲ್ಲೇ ಐವರಿಗೆ ಒಮಿಕ್ರಾನ್ ದೃಢ
ಸಾಂದರ್ಭಿಕ ಚಿತ್ರ
Edited By:

Updated on: Dec 18, 2021 | 9:19 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತ್ತೆ ಇಂದು (ಡಿಸೆಂಬರ್ 18) ಆರು ಮಂದಿಗೆ ಒಮಿಕ್ರಾನ್ ಸೋಂಕು ದೃಢವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಸಚಿವ ಡಾ.ಕೆ. ಸುಧಾಕರ್ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಐವರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಶಿಕ್ಷಣ ಸಂಸ್ಥೆಯೊಂದರಲ್ಲಿ ನಾಲ್ವರಿಗೆ ಒಮಿಕ್ರಾನ್ ದೃಢವಾಗಿದೆ. ಟೆಸ್ಟ್‌ಗೆ ಕಳಿಸಿದ್ದ 14 ಜನರ ಪೈಕಿ ನಾಲ್ವರಿಗೆ ಒಮಿಕ್ರಾನ್ ಸೋಂಕು ಇರುವುದು ಖಚಿತವಾಗಿದೆ. ಮತ್ತೊಂದು ಶಿಕ್ಷಣ ಸಂಸ್ಥೆಯಲ್ಲಿ ಒಬ್ಬರಿಗೆ ಒಮಿಕ್ರಾನ್ ಕಂಡುಬಂದಿದೆ. ಟೆಸ್ಟ್‌ಗೆ ಕಳಿಸಿದ್ದ 19 ಜನರ ಪೈಕಿ ಒಬ್ಬರಿಗೆ ಒಮಿಕ್ರಾನ್ ಇರುವುದು ದೃಢವಾಗಿದೆ. ಅದರಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇಂದು ಐವರಿಗೆ ಒಮಿಕ್ರಾನ್ ಖಚಿತವಾಗಿದೆ.

ಬ್ರಿಟನ್‌ನಿಂದ ಬಂದಿದ್ದ ಯುವತಿಗೆ ಒಮಿಕ್ರಾನ್ ಸೋಂಕು ದೃಢವಾಗಿದೆ. ಬ್ರಿಟನ್‌ನಿಂದ ಬೆಂಗಳೂರಿಗೆ ಬಂದಿದ್ದ 18 ವರ್ಷದ ಯುವತಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ. ಅದರ ಪ್ರಕಾರ ಇಂದು ಒಟ್ಟು ಆರು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ.

ವಿಜಯನಗರ: ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್​
ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್​ ದೃಢವಾಗಿದೆ. ವಿಜಯನಗರ ಜಿಲ್ಲೆ ಹೊಸಪೇಟೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ. 350 ವಿದ್ಯಾರ್ಥಿಗಳಿಗೆ ರಾಂಡಮ್​ ಟೆಸ್ಟ್ ನಡೆಸಿದ ವೇಳೆ ಇಬ್ಬರಿಗೆ ಪಾಸಿಟಿವ್​ ಖಚಿತವಾಗಿದೆ. ಹೀಗಾಗಿ, ಆರೋಗ್ಯ ಇಲಾಖೆ ಸಿಬ್ಬಂದಿ ಆರ್​ಟಿಪಿಸಿಆರ್ ಟೆಸ್ಟ್​ಗೆ ಮುಂದಾಗಿದ್ದಾರೆ. ಸರ್ಕಾರಿ ಶಾಲೆಯ ಇತರೆ ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ ಹೆಚ್ಚಿದೆ. ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Omicron  ದೆಹಲಿಯಲ್ಲಿ ಒಮಿಕ್ರಾನ್ ರೂಪಾಂತರಿಯ 10 ಹೊಸ ಪ್ರಕರಣ ಪತ್ತೆ

ಇದನ್ನೂ ಓದಿ: Omicron Death: ಒಮಿಕ್ರಾನ್​ ವೈರಸ್​ಗೆ ಇಂಗ್ಲೆಂಡ್​ನಲ್ಲಿ ಮೊದಲ ಬಲಿ; ಕೊವಿಡ್ ರೂಪಾಂತರಿಯಿಂದ ವಿಶ್ವಾದ್ಯಂತ ಹೈ ಅಲರ್ಟ್​

Published On - 6:47 pm, Sat, 18 December 21