ಇಂಜಿನ್ ಹಾಳಾಗಿ ದುಬೈಗೆ ಹೊರಡಬೇಕಾದ ವಿಮಾನ ವಿಳಂಬ; ಮಂಗಳೂರಿನಲ್ಲಿ ಅಧಿಕಾರಿಗಳ ವಿರುದ್ಧ ಪ್ರಯಾಣಿಕರ ಆಕ್ರೋಶ

| Updated By: ಆಯೇಷಾ ಬಾನು

Updated on: Jul 11, 2023 | 2:50 PM

ವಿಮಾನದ ಇಂಜಿನ್ ಹಾಳಾಗಿದೆ ಎಂದು ಪ್ರಯಾಣಿಕರಿಗೆ ಮಾಹಿತಿ ಕೊಟ್ಟು ಅಧಿಕಾರಿಗಳು ಸುಮ್ಮನಾಗಿದ್ದಾರೆ. ಆದ್ರೆ ಪ್ರಯಾಣಿಕರಿಗೆ ಯಾವುದೇ ಬದಲಿ ಅನುಕೂಲ ಮಾಡಿಕೊಟ್ಟಿಲ್ಲ. ಹೀಗಾಗಿ ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲೇ ಕಾದ ಪ್ರಯಾಣಿಕರು ರೋಸಿ ಹೋಗಿದ್ದಾರೆ.

ಇಂಜಿನ್ ಹಾಳಾಗಿ ದುಬೈಗೆ ಹೊರಡಬೇಕಾದ ವಿಮಾನ ವಿಳಂಬ; ಮಂಗಳೂರಿನಲ್ಲಿ ಅಧಿಕಾರಿಗಳ ವಿರುದ್ಧ ಪ್ರಯಾಣಿಕರ ಆಕ್ರೋಶ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ
Follow us on

ಮಂಗಳೂರು: ಮಂಗಳೂರಿನಿಂದ ದುಬೈಗೆ ಹೊರಡಬೇಕಾದ ವಿಮಾನ ವಿಳಂಬ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ(Mangalore Airport) ಪ್ರಯಾಣಿಕರು ಪರದಾಡುತ್ತಿರುವಂತಹ ಘಟನೆ ನಡೆದಿದೆ. ನಿನ್ನೆ(ಜು.10) ರಾತ್ರಿ 11‌ಕ್ಕೆ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಫ್ಲೈಟ್(Air India Flight) ವಿಳಂಬವಾಗಿದೆ. ಆದ್ರೆ ಅಧಿಕಾರಿಗಳು ಪ್ರಯಾಣಿಕರಿಗೆ ಬದಲಿ ಫ್ಲೈಟ್ ವ್ಯವಸ್ಥೆ ಮಾಡದೆ ಸುಮ್ಮನಿದ್ದಾರೆ. ಇದರಿಂದ ನಿನ್ನೆ ರಾತ್ರಿಯಿಂದ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಪರದಾಡುವಂತಾಗಿದೆ.

ವಿಮಾನದ ಇಂಜಿನ್ ಹಾಳಾಗಿದೆ ಎಂದು ಪ್ರಯಾಣಿಕರಿಗೆ ಮಾಹಿತಿ ಕೊಟ್ಟು ಅಧಿಕಾರಿಗಳು ಸುಮ್ಮನಾಗಿದ್ದಾರೆ. ಆದ್ರೆ ಪ್ರಯಾಣಿಕರಿಗೆ ಯಾವುದೇ ಬದಲಿ ಅನುಕೂಲ ಮಾಡಿಕೊಟ್ಟಿಲ್ಲ. ಹೀಗಾಗಿ ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲೇ ಕಾದ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಏರ್​ಪೋರ್ಟ್​ ಅಧಿಕಾರಿಗಳು ಮತ್ತು ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದ್ದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Bomb Scare: ವಿಮಾನದಲ್ಲಿ ಬಾಂಬ್ ಇದೆ ಎಂದು ಕೂಗಿದ ಪ್ರಯಾಣಿಕ, ಕೋಲ್ಕತ್ತಾದಿಂದ ದೋಹಾಗೆ ಹೊರಡಬೇಕಿದ್ದ ವಿಮಾನ ವಿಳಂಬ

ಸದ್ಯ ಪ್ರಯಾಣಿಕರು ತೀರ್ವ ತರಾಟೆ, ಗಲಾಟೆ ಮಾಡಿದ ಬಳಿಕ ಅಧಿಕಾರಿಗಳು ಬೇರೆ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಈಗ 130 ಪ್ರಯಾಣಿಕರು ವಿಮಾನ ಏರಿ ಕುಳಿತ್ರು. ತಡವಾದ್ರೆ ದುಬೈನಲ್ಲಿ ಕೆಲಸ ಕಳೆದುಕೊಳ್ಳೋ ಭೀತಿಯನ್ನು ಕೆಲವು ಉದ್ಯೋಗಿಗಳು ವ್ಯಕ್ತಪಡಿಸಿದ್ದು ಅಂತವರಿಂದ ವಿವರಣೆ ಪತ್ರ ಬರೆದುಕೊಡುವಂತೆ ಡಿಮ್ಯಾಂಡ್ ಮಾಡಲಾಗಿದೆ. ಹಾಗೂ ಏರ್ ಇಂಡಿಯಾ ಕಂಪನಿ ಕೂಡ ವಿವರಣೆ ಪತ್ರ ಬರೆದುಕೊಟ್ಟಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:50 am, Tue, 11 July 23