Mangaluru News: ಭಾರಿ ಮಳೆಗೆ ಮಂಗಳೂರಿನಲ್ಲಿ ಗುಡ್ಡ ಕುಸಿತ, ಸಮುದ್ರದಲ್ಲಿ ಜೋರಾದ ಅಲೆಗಳ ಅಬ್ಬರ: ರೆಡ್​ ಅಲರ್ಟ್ ಘೋಷಣೆ

| Updated By: ವಿವೇಕ ಬಿರಾದಾರ

Updated on: Jul 05, 2023 | 11:39 AM

ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದೆ. ಅದರಲ್ಲೂ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪಿ.ವಿ.ಎಸ್ ಬಳಿ ಗುಡ್ಡ ಕುಸಿತಗೊಂಡಿದೆ.

Mangaluru News: ಭಾರಿ ಮಳೆಗೆ ಮಂಗಳೂರಿನಲ್ಲಿ ಗುಡ್ಡ ಕುಸಿತ, ಸಮುದ್ರದಲ್ಲಿ ಜೋರಾದ ಅಲೆಗಳ ಅಬ್ಬರ: ರೆಡ್​ ಅಲರ್ಟ್ ಘೋಷಣೆ
ಕುಸಿದಿರುವ ಗುಡ್ಡ
Follow us on

ದಕ್ಷಿಣ ಕನ್ನಡ: ಕರ್ನಾಟಕದಲ್ಲಿ ಮುಂಗಾರು (Monsoon) ಚುರುಕುಗೊಂಡಿದೆ. ಅದರಲ್ಲೂ ಉತ್ತರ ಕನ್ನಡ (Uttar Kannada), ಉಡುಪಿ (Udupi) ಹಾಗೂ ದಕ್ಷಿಣ ಕನ್ನಡ (Dakshin Kannada) ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪಿ.ವಿ.ಎಸ್ ಬಳಿ ಗುಡ್ಡ ಕುಸಿತಗೊಂಡಿದೆ. ಪಿ.ವಿ.ಎಸ್​​ ನಿಂದ ಕೆ.ಎಸ್ ರಾವ್ ರೋಡ್​​ಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಗುಡ್ಡ ಕುಸಿದ ಹಿನ್ನಲೆ ಪಕ್ಕದಲ್ಲಿದ್ದ ಹಳೆಯ ಕಟ್ಟಡದ ಗೋಡೆ ಕೂಡ ಕುಸಿತವಾಗಿದೆ. ಗುಡ್ಡ ಕುಸಿತವಾದ ಸ್ಥಳಕ್ಕೆ ಟಾರ್ಪಲ್ ಹೊದಿಕೆ ಹಾಕಲಾಗಿದ್ದು, ಇನ್ನಷ್ಟು ಮಣ್ಣು ಕುಸಿಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಗೆ ಹವಾಮಾನ ‌ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿಯ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾದ ಹಿನ್ನೆಲೆ ಮಂಗಳೂರಿನ ಉಚ್ಚಿಲ, ಉಳ್ಳಾಲ ಕಡಲ ತೀರ ಫುಲ್ ರಫ್ ಆಗಿದೆ. ಅಲೆಗಳು ಮನೆ, ಬೀಚ್ ರೆಸಾರ್ಟ್​​ಗಳಿಗೆ ಅಪ್ಪಳಿಸುತ್ತಿರುವ ಹಿನ್ನೆಲೆ ಜನರು ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಭೂ ಕುಸಿತದ ಬಗ್ಗೆ ಇರಲಿ ಎಚ್ಚರ: ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

ಮಳೆಗಾಳಿಯಿಂದ  ತೆಂಗಿನ ಮರಗಳು ಧರೆಗೆ ಉರುಳಿವೆ. ಇದರಿಂದ ಸಮಯದ್ರದ ಅಂಚಿನ ಹಲವು ಮನೆಗಳು ಅಪಾಯದಲ್ಲಿವೆ. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಬಿಟ್ಟು ಬಿಟ್ಟು ಮಳೆ  ಸುರಿಯುತ್ತಿದೆ. ಮುಳುಗಡೆ ಪ್ರದೇಶಗಳಲ್ಲಿನ ಜನರು ಎಚ್ಚರಿಕೆಯಿಂದ ಇರಬೇಕು. ಜನರು ಸಮುದ್ರದ ಕಡೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ನೀಡಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕಾರವಾರದ ಬಸ್ ನಿಲ್ದಾಣ ಡಿಪೋ ಕಚೇರಿಯೊಳಗೆ ನುಗ್ಗಿದ ನೀರು

ಕಾರವಾರ: ಮಳೆಯಿಂದಾಗಿ ಕಾರವಾರದ ಹಬ್ಬುವಾಡದಲ್ಲಿರುವ ಸರಕಾರಿ ಬಸ್ ನಿಲ್ದಾಣ ಡಿಪೋ ಕಚೇರಿಯೊಳಗೆ ಮಳೆ‌ ನೀರು ನುಗ್ಗಿತ್ತು. ಡಿಪೋ ಕಚೇರಿಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದ್ದು ದಾಖಲೆಗಳು ನೀರು ಪಾಲಾಗಿವೆ. ಮಳೆಗೆ ಕಾರವಾರ, ಭಟ್ಕಳ ನಗರ ರಸ್ತೆಗಳು ಜಲಾವೃತಗೊಂಡಿವೆ. ಹೆಚ್ಚಿನ ಮಳೆಯಾದಲ್ಲಿ ಸೋನಾರವಾಡ, ಎಲ್.ಐಸಿ ಕಾಲೋನಿ, ಗುನಿಗಿ ವಾಡದ ಮನೆಗಳಿಗೂ ನೀರು ತುಂಬುವ ಆತಂಕ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Wed, 5 July 23