ಮಂಗಳೂರಿನಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ ವಿಚಾರ; ಅಷ್ಟಮಂಗಲ ಪ್ರಶ್ನೆ ಮೊರೆ ಹೋದ ಹಿಂದೂ ಸಂಘಟನೆ

| Updated By: ವಿವೇಕ ಬಿರಾದಾರ

Updated on: May 16, 2022 | 10:27 AM

Mangalore Dargah: ಮಂಗಳೂರಿನಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ ವಿಚಾರವಾಗಿ ಹಿಂದು ಸಂಘಟನೆಗಳು ಅಷ್ಟಮಂಗಲ ಪ್ರಶ್ನೆ ಮೊರೆ ಹೋಗಿದ್ದಾರೆ.

ಮಂಗಳೂರಿನಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ ವಿಚಾರ; ಅಷ್ಟಮಂಗಲ ಪ್ರಶ್ನೆ ಮೊರೆ ಹೋದ ಹಿಂದೂ ಸಂಘಟನೆ
ಮಳಲಿ ದರ್ಗಾ
Follow us on

ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ (Malali) ಎಂಬಲ್ಲಿನ ದರ್ಗಾವನ್ನು (Dargah) ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನದ (Temple) ಮಾದರಿ ಪತ್ತೆಯಾಗಿತ್ತು. ಈ ಸಂಬಂಧ ಕೋರ್ಟ್ ನಿಂದ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು. ಸದ್ಯ ಅಲ್ಲಿ ಪತ್ತೆಯಾಗಿರೊದು ದರ್ಗಾನಾ, ದೇವಸ್ಥಾನನಾ, ಬಸದಿನಾ ಅನ್ನೊ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರವಾಗಿ ಹಿಂದು ಸಂಘಟನೆಗಳು ಅಷ್ಟಮಂಗಲ ಪ್ರಶ್ನೆ ಮೊರೆ ಹೋಗಿದ್ದಾರೆ. ಅಷ್ಟಮಂಗಲ ಪ್ರಶ್ನೆ ಮೊರೆ ಹೋಗಲು ವಿ.ಎಚ್‌.ಪಿ ಮತ್ತು ಭಜರಂಗದಳ ಚಿಂತನೆ ನಡೆಸಿವೆ. ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿದ ಹಿಂದೂ ಸಂಘಟನೆಗಳು, ಕೇರಳದಿಂದ ಪೊದುವಾಳ್ ರನ್ನು ಕರೆಸಿ ಪ್ರಶ್ನಾ ಚಿಂತನೆಯನ್ನು ಮಾಡಲು ನಿರ್ಧಾರ ಮಾಡಿವೆ.

ಅಷ್ಟಮಂಗಳ ಪ್ರಶ್ನಾ ಚಿಂತನೆಗೆ ಇನ್ನಷ್ಟೆ ದಿನಾಂಕ ನಿಗದಿಯಾಗಬೇಕಿದೆ. ಇನ್ನೂ ದರ್ಗಾ ಇರೋ ಜಾಗದಲ್ಲಿ ದೇವಸ್ಥಾನ ಇತ್ತೆಂದು ವಿ.ಎಚ್.ಪಿ ವಾದಮಾಡುತ್ತಿದೆ. ಪ್ರಶ್ನಾಚಿಂತನೆಯಲ್ಲಿ ಐತಿಹಾಸಿಕ, ಧಾರ್ಮಿಕ ಹಿನ್ನೆಲೆ ಗೋಚರವಾಗುವ ಸಾಧ್ಯತೆ ಇದೆ.

ಈಗಾಗಲೇ ಹಳೆಯ ಭೂ ದಾಖಲೆಗಳನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ. ಏಪ್ರಿಲ್ 21 ರಂದು ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ನವೀಕರಣದ ಸಲುವಾಗಿ ಮುಂಭಾಗ ಕೆಡವಲಾಗಿತ್ತು. ಆಗ ದರ್ಗಾದ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಮಾಹಿತಿ ತಿಳಿದು ಮಂಗಳೂರು ತಹಶೀಲ್ದಾರ್ ಪುರಂದರ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತಹಶೀಲ್ದಾರ್ ಮುಂದಾಗಿದ್ದಾರೆ. ಸದ್ಯಕ್ಕೆ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆ ತಹಶಿಲ್ದಾರ್ ಸೂಚನೆ ನೀಡಿದ್ದಾರೆ. ಪ್ರಸ್ತುತ ದರ್ಗಾದ ನವೀಕರಣ ಕಾಮಗಾರಿ‌ ಸ್ಥಗಿತಗೊಂಡಿದೆ.

ಇದನ್ನೂ ಓದಿ
ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ: ಹೊಸಕೋಟೆ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್: ಮದ್ಯ ಮಾರಾಟ ನಿಷೇಧ
14 ವರ್ಷಗಳ ನಂತರ ವಿಶೇಷ ದಾಖಲೆ ಬರೆದ ಕೆಆರ್​ಎಸ್​ ಡ್ಯಾಂ; ರೈತರಿಗೆ ಸಂತಸ
PSI ನೇಮಕಾತಿ ಹಗರಣದ ತನಿಖೆ ವೇಳೆ ಹೊರಬಿತ್ತು ಸ್ಫೋಟಕ ಮಾಹಿತಿ: ಆರ್​.ಡಿ.ಪಾಟೀಲ್, ದಿವ್ಯಾ ಹಾಗರಗಿ ಡೀಲ್​ಗೆ ಸಾಕ್ಷಿಗಳು ಲಭ್ಯ
Mangalore Dargah: ಮಂಗಳೂರಿನಲ್ಲಿ ದರ್ಗಾ ನವೀಕರಣದ ವೇಳೆ ಹಿಂದೂ ಶೈಲಿಯ ದೇವಸ್ಥಾನ ಪತ್ತೆ!

ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಸಹ ಸ್ಥಳಕ್ಕೆ ಭೇಟಿ ನೀಡಿದ್ದರು. ಇಲ್ಲಿ ದೇವಸ್ಥಾನವಿತ್ತು ಎಂದು ಹಿಂದೂಪರ ಸಂಘಟನೆ ಮುಖಂಡರು ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ. ಇನ್ನು, ದರ್ಗಾ ಆಡಳಿತ ಮಂಡಳಿಯು ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಡೆಗೆ ಸಮ್ಮತಿ ಸೂಚಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.