14 ವರ್ಷಗಳ ನಂತರ ವಿಶೇಷ ದಾಖಲೆ ಬರೆದ ಕೆಆರ್​ಎಸ್​ ಡ್ಯಾಂ; ರೈತರಿಗೆ ಸಂತಸ

2008ರ ಬಳಿಕ ಮೇ ತಿಂಗಳಲ್ಲಿ ಡ್ಯಾಂನಲ್ಲಿ 100 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದ ನೀರಿನ ಮಟ್ಟ ಏರಿಕೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ. ಕೆಆರ್​ಎಸ್​​ ಜಲಾಶಯದ ನೀರಿನ ಸಾಮರ್ಥ್ಯ 124.80 ಅಡಿ. ಜಲಾಶಯದ ಇಂದಿನ ಮಟ್ಟ 100.02 ಅಡಿ.

14 ವರ್ಷಗಳ ನಂತರ ವಿಶೇಷ ದಾಖಲೆ ಬರೆದ ಕೆಆರ್​ಎಸ್​ ಡ್ಯಾಂ; ರೈತರಿಗೆ ಸಂತಸ
ಕೆಆರ್​ಎಸ್​ ಡ್ಯಾಂ
Follow us
TV9 Web
| Updated By: sandhya thejappa

Updated on:May 16, 2022 | 9:43 AM

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ (Rain) ಹಿನ್ನೆಲೆ 14 ವರ್ಷಗಳ ನಂತರ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಜಲಾಶಯ (KRS Dam) ವಿಶೇಷ ದಾಖಲೆ ಬರೆದಿದೆ. ಮೇ ತಿಂಗಳಲ್ಲೇ 100 ಅಡಿ ನೀರು ಸಂಗ್ರಹವಾಗಿದೆ. 2008ರ ಬಳಿಕ ಮೇ ತಿಂಗಳಲ್ಲಿ ಡ್ಯಾಂನಲ್ಲಿ 100 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದ ನೀರಿನ ಮಟ್ಟ ಏರಿಕೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ. ಕೆಆರ್​ಎಸ್​​ ಜಲಾಶಯದ ನೀರಿನ ಸಾಮರ್ಥ್ಯ 124.80 ಅಡಿ. ಜಲಾಶಯದ ಇಂದಿನ ಮಟ್ಟ 100.02 ಅಡಿ. 1,171 ಕ್ಯೂಸೆಕ್ ಒಳಹರಿವು ಇದೆ. ಹಾಗೇ, 1,061 ಕ್ಯೂಸೆಕ್ ಹೊರಹರಿವು ಇದೆ.

ರಾಜ್ಯದಲ್ಲಿ ಐದು ದಿನಗಳ ಕಾಲ ಭಾರಿ ಮಳೆ:

ಆಂಧ್ರ ಪ್ರದೇಶದ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಮಳೆ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ರಾಮನಗರ, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಕೇರಳದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಇಂದೂ ಮುಂದುವರಿಯಲಿದ್ದು, ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ಮತ್ತು ಕೇರಳ ರಾಜ್ಯದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ
Image
PSI ನೇಮಕಾತಿ ಹಗರಣದ ತನಿಖೆ ವೇಳೆ ಹೊರಬಿತ್ತು ಸ್ಫೋಟಕ ಮಾಹಿತಿ: ಆರ್​.ಡಿ.ಪಾಟೀಲ್, ದಿವ್ಯಾ ಹಾಗರಗಿ ಡೀಲ್​ಗೆ ಸಾಕ್ಷಿಗಳು ಲಭ್ಯ
Image
ಕರ್ನಾಟಕದಲ್ಲಿ ಇಂದಿನಿಂದ ಶಾಲೆಗಳು ಆರಂಭ; ಬಿಎಂಟಿಸಿ ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ
Image
ಬೆಂಗಳೂರು ನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಮಳೆ; ಹವಾಮಾನ ಇಲಾಖೆ ಮಾಹಿತಿ
Image
CSK vs GT: ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಮೊದಲ ವಿಕೆಟ್: ಸಿಎಸ್​ಕೆಯಲ್ಲೊಬ್ಬ ಜೂ. ಮಾಲಿಂಗ

ಅಸಾನಿ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ. ಆದರೂ ಮೇಲ್ಮೈ ಸುಳಿಗಾಳಿಯ ಕಾರಣದಿಂದ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಪ್ರಸಾದ್ ಹೇಳಿದ್ದಾರೆ.

ಮೇ ಅಂತ್ಯಕ್ಕೇ ಮುಂಗಾರು ಪ್ರವೇಶ: ರಾಜ್ಯದಲ್ಲಿ ಪ್ರತಿವರ್ಷ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಆರಂಭವಾಗುತ್ತಿತ್ತು. ಆದರೆ ಈ ಬಾರಿ ವಾಡಿಕೆಗಿಂತ ಮೊದಲೇ ಮಾನ್ಸೂನ್ ಮಳೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪ್ರತಿವರ್ಷ ಜೂನ್ 1 ಅಥವಾ ಅದರ ಬಳಿಕ ಕೇರಳದ ಕರಾವಳಿಯಲ್ಲಿ ಮುಂಗಾರು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮೇ 27ಕ್ಕೆ ಕೇರಳಕ್ಕೆ, ಬಳಿಕ 3 ದಿನದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಮುಂಗಾರು ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರಿಗೆ ಪ್ರವೇಶಿಸಿ, ಬಳಿಕ 3 ದಿನಗಳಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡಿಗೆ ಪ್ರವೇಶಿಸುತ್ತದೆ. ಹೀಗಾಗಿ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:34 am, Mon, 16 May 22