PSI ನೇಮಕಾತಿ ಹಗರಣದ ತನಿಖೆ ವೇಳೆ ಹೊರಬಿತ್ತು ಸ್ಫೋಟಕ ಮಾಹಿತಿ: ಆರ್.ಡಿ.ಪಾಟೀಲ್, ದಿವ್ಯಾ ಹಾಗರಗಿ ಡೀಲ್ಗೆ ಸಾಕ್ಷಿಗಳು ಲಭ್ಯ
ಒಬ್ಬೊಬ್ಬರ ಬಳಿ 40 ಲಕ್ಷ ದಿಂದ 80 ಲಕ್ಷದವರೆಗೂ ಹಣದ ವ್ಯವಹಾರ ನಡೆದಿರೋದು ಪತ್ತೆಯಾಗಿದೆ. ಆದ್ರೆ 9 ಅಭ್ಯರ್ಥಿಗಳ ಪೈಕಿ ಸದ್ಯ ಏಳು ಅಭ್ಯರ್ಥಿಗಳನ್ನು ಇದುವರೆಗೆ ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು: ರಾಜ್ಯದ 545 ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ತನಿಖೆ ವೇಳೆ ಸ್ಪೋಟಕ ಮಾಹಿತಿ ಹೊರಬಿದ್ದಿದೆ. PSI ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು ಆರ್ಡಿ ಪಾಟೀಲ್ ಹಾಗೂ ದಿವ್ಯಾ ಹಾಗರಗಿ ಜೊತೆ ಸಂಪರ್ಕ ಹೊಂದಿದ್ದರು ಎನ್ನುವುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ. ಸಿಐಡಿ ತನಿಖೆ ವೇಳೆ ಡೀಲ್ ನಡೆಸಿದ್ದಾನೆ ಎನ್ನುವುದಕ್ಕೆ ಹಲವು ಸಾಕ್ಷಿ ಲಭ್ಯವಾಗಿದ್ದು,ಆರ್ಡಿ ಪಾಟೀಲ್ ನಾಲ್ಕು ಆಭ್ಯರ್ಥಿಗಳನ್ನು ಡೀಲ್ ಮಾಡಿಸಿರೋದು ಪತ್ತೆಯಾಗಿದೆ. ದೀವ್ಯಾ ಹಾಗರಗಿ ಐದು ಅಭ್ಯರ್ಥಿಗಳನ್ನು ಡೀಲ್ ಮಾಡಿಸಿದ್ದಾಗಿ ತನಿಖೆ ವೇಳೆ ಬಹಿರಂಗವಾಗಿದೆ. ಇಬ್ಬರು ಸೇರಿ 9 ಅಭ್ಯರ್ಥಿಗಳನ್ನು ಡೀಲ್ ಮಾಡಿಸಿರೊದು ದೃಢವಾಗಿದೆ. ಎಷ್ಟು ಹಣಕ್ಕೆ ಯವ್ಯಾವ ಅಭ್ಯರ್ಥಿಯನ್ನು ಡೀಲ್ ಮಾಡಿಸಿದ್ರು ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಬ್ಬೊಬ್ಬರ ಬಳಿ 40 ಲಕ್ಷ ದಿಂದ 80 ಲಕ್ಷದವರೆಗೂ ಹಣದ ವ್ಯವಹಾರ ನಡೆದಿರೋದು ಪತ್ತೆಯಾಗಿದೆ. ಆದ್ರೆ 9 ಅಭ್ಯರ್ಥಿಗಳ ಪೈಕಿ ಸದ್ಯ ಏಳು ಅಭ್ಯರ್ಥಿಗಳನ್ನು ಇದುವರೆಗೆ ಅರೆಸ್ಟ್ ಮಾಡಲಾಗಿದೆ.
ಉಳಿದ ಇಬ್ಬರಿಗಾಗಿ ಹುಡುಕಲು ಆರ್ಡಿ ಪಾಟೀಲ್ ಬ್ಯಾಂಕ್ ಅಕೌಂಟ್ನಲ್ಲಿ ಮೂವತ್ತು ಲಕ್ಷ ಪತ್ತೆಯಾಗಿತ್ತು. ಅದ್ರೆ ಪಿಎಸ್ಐ ಕೇಸ್ಗೂ ಹಣಕ್ಕೂ ಲಿಂಕ್ ಸಿಗುತ್ತಿಲ್ಲಾ. ಪಿಎಸ್ಐ ಡೀಲ್ ಸಂಪೂರ್ಣ ನಗದು ವಿನಿಮಯ ಮೂಲಕ ನಡೆದಿದೆ. (ಕ್ಯಾಶ್ನಲ್ಲಿ) ಕಲಬುರಗಿಯಲ್ಲಿ ನಡೆದಿರೊ ಡೀಲ್ ಹಾಗೂ ಬೆಂಗಳೂರು ಡೀಲ್ಗೆ ಸಾಕಷ್ಟು ವ್ಯತ್ಯಾಸಗಳಿವೆ. ಪರೀಕ್ಷಾ ಕೇಂದ್ರ ಡೀಲ್ ನಡೆಸಿದ್ದು, ಕಲಬುರಗಿ ಅಲ್ಲಿ. ಪರೀಕ್ಷೆ ಸಮಯದಲ್ಲಿ ಬ್ಲೂಟೂತ್ ಹಾಗೂ ಪರೀಕ್ಷೆ ನಂತ್ರ ಒಎಂಆರ್ ತಿದ್ದಲಾಗಿದೆ. ಇಲ್ಲಿ ಸೆಂಟರ್ ಕೊಡುವಾಗ ಮಾತ್ರ ನೇಮಕಾತಿ ವಿಭಾಗ ಟಚ್ ಮಾಡಲಾಗಿದೆ. ಬೆಂಗಳೂರಿನಲ್ಲಿ ನೇಮಕಾತಿ ವಿಭಾಗದಲ್ಲೆ ಒಎಂಆರ್ ತಿದ್ದಲಾಗಿದೆ. ಪರೀಕ್ಷೆ ಬಳಿಕ ಸ್ಟ್ರಾಂಗ್ ರೂಮ್ಗೆ ಬಂದ ಒಎಆರ್ ಶೀಟ್ ಬದಲಾವಣೆ ಮಾಡಲಾಗಿದೆ. ನಗರದಲ್ಲಿ ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ನಡೆದಿರೋದು ಡೌಟ್ ಎಂದು ಸಿಐಡಿ ತನಿಖೆ ಹೇಳುತ್ತಿದೆ.
ರುದ್ರಗೌಡ ಪಾಟೀಲ್ಗೆ ಅದ್ದೂರಿ ಸನ್ಮಾನಕ್ಕೆ ಸಿದ್ದತೆ ಮಾಡಿಕೊಂಡಿದ್ದ ಬೆಂಬಲಿಗರು, ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆದಿತ್ತು. ತಮ್ಮ ಬೆಂಬಲಿಗರಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ ಮಾಡುವಂತೆ ರುದ್ರಗೌಡ ಹೇಳಿದ್ದನಂತೆ. ಜಾಮೀನಿನ ಮೇಲೆ ಹೊರಬರ್ತೀನಿ, ಅದ್ದೂರಿ ಸ್ವಾಗತ ಮಾಡಬೇಕು ಅಂತ ರುದ್ರಗೌಡ ಪಾಟೀಲ್ ಹೇಳಿದ್ದ. ಆ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ. ಕಳೆದ ಎಪ್ರಿಲ್ 23 ರಂದು ಕಿಂಗ್ ಪಿನ್ ರುದ್ರಗೌಡ ಪಾಟೀಲ್ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ವಶದಲ್ಲಿರೋ ರುದ್ರಗೌಡ, ಪಿಡಬ್ಲೂಡಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಜಾಮೀನು ಸಿಗದ ಹಿನ್ನೆಲೆಯಲ್ಲಿ ರುದ್ರಗೌಡ ಪಾಟೀಲ್ ಬೆಂಬಲಿಗರು ನಿರಾಸೆಗೊಂಡಿದ್ದಾರೆ.
ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ನಾಪತ್ತೆಯಾಗಿರೋರಿಗೆ ಸಿಐಡಿ ತಲಾಶ್ ನಡೆಸಿದೆ. ಶಾಂತಿಬಾಯಿ ಸೇರಿದಂತೆ ಕೆಲವರು ನಾಪತ್ತೆಯಾಗಿದ್ದು, ಕಳೆದ 35 ದಿನಗಳಿಂದ ಶಾಂತಿಬಾಯಿ ನಾಪತ್ತೆಯಾಗಿದ್ದಾರೆ. ಶಾಂತಿಬಾಯಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಆರೋಪ ಹೊಂದಿರೋ ಅಭ್ಯರ್ಥಿ. ಮತ್ತೊಂದಡೆ ಮಕ್ಕಳ ಪರವಾಗಿ ಡೀಲ್ ಮಾಡಿದ್ದ ತಂದೆಯೂ ನಾಪತ್ತೆಯಾಗಿದ್ದಾರೆ. ಸಿಐಡಿ ತನಿಖೆ ಪ್ರಾರಂಭ ಮಾಡುತ್ತಿದ್ದಂತೆ ಹೆತ್ತವರು ನಾಪತ್ತೆಯಾಗಿದ್ದಾರೆ.
ಸಿಐಡಿ ತನಿಖೆ ವೇಳೆ ಡೀಲ್ ರಹಸ್ಯ ಬಿಚ್ಚಿಟ್ಟ ಆರೊಪಿಗಳು:
ಯಾವುದೇ ಲಾಡ್ಜ್, ಮನೆಯಲ್ಲಿ ಡೀಲ್ ಕುದುರಿಸುತ್ತಿರಲಿಲ್ಲ. ಬದಲಿಗೆ ರಸ್ತೆಯಲ್ಲೇ ಡೀಲ್, ಕಲಬುರಗಿಯ ಉದನೂರು ರಸ್ತೆಯಲ್ಲೇ ಅಕ್ರಮದ ಪ್ಲ್ಯಾನ್ ರೂಪಿಸುತ್ತಿದ್ದ. ತನ್ನ ನಿರ್ಮಾಣ ಹಂತದ ಮನೆ ಬಳಿ ರುದ್ರಗೌಡ ಡೀಲ್ ಮಾಡುತ್ತಿದ್ದ. ವೈಜನಾಥ್, ಆನಂದ್ ಜೊತೆ ಸೇರಿ ಕಿಂಗ್ಪಿನ್ ಡೀಲ್ ಮಾಡ್ತಿದ್ದ. ಕೆಎಸ್ಆರ್ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ ಮತ್ತು ಬೆರಳಚ್ಚು ವಿಭಾಗದ ಸಿಪಿಐ ಆನಂದ್ ಜೊತೆ ಸೇರಿ ಕಾರಿನಲ್ಲೇ ಕುಳಿತು ಕಿಲಾಡಿಗಳು ಅಕ್ರಮದ ಪ್ಲ್ಯಾನ್ ರೂಪಿಸುತ್ತಿದ್ದರು. ಮತ್ತೊಂದೆಡೆ ಮಂಜುನಾಥ್ ಮೇಳಕುಂದಿ, ಕಾಶೀನಾಥ್ ಜೊತೆ ಸೇರಿ ದಿವ್ಯಾ & ಗ್ಯಾಂಗ್ನಿಂದ ತನ್ನ ಮನೆಯಲ್ಲಿ ಡೀಲ್ ಮಾಡಲಾಗುತ್ತಿತ್ತು ಎಂದು ವಿಚಾರಣೆ ವೇಳೆ ಡೀಲ್ ರಹಸ್ಯಗಳನ್ನು ಆರೋಪಿಗಳು ಬಿಚ್ಚಿಟ್ಟಿದ್ದಾರೆ.
ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು:
ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ಬಯಲಾಗುತ್ತಿದ್ದಂತೆ ಕರ್ನಾಟಕ ಸರ್ಕಾರ (Karnataka Government) ಮರು ಪರೀಕ್ಷೆ ನಡೆಸುವುದಾಗಿ ಮಹತ್ವದ ತೀರ್ಮಾನ ತೆಗದುಕೊಂಡಿದೆ. ಈ ತೀರ್ಮಾನವನ್ನು ವಿರೋಧಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಜೊತೆಗೆ ದೇಶದ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ನೊಂದ ಪಿಎಸ್ಐ ಅಭ್ಯರ್ಥಿಗಳು ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡು ಪುಟಗಳ ಪತ್ರ ಬರೆದು ನ್ಯಾಯ ಓದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಈ ಪತ್ರ ಬರೆದವರು ಯಾರು ಎಂಬುದು ತಿಳಿದುಬಂದಿಲ್ಲ. ತಮ್ಮ ಹೆಸರನ್ನು ಪತ್ರದಲ್ಲಿ ನಮೂದಿಸಿಲ್ಲ. ಪಿಎಸ್ಐ ಪರೀಕ್ಷೆಯಲ್ಲಿ ಆಯ್ಕೆಯಲ್ಲಿ ಮೋಸ ಹೊದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಿ ಎಂದು ಬರೆಯಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:02 am, Mon, 16 May 22