CSK vs GT: ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಮೊದಲ ವಿಕೆಟ್: ಸಿಎಸ್​ಕೆಯಲ್ಲೊಬ್ಬ ಜೂ. ಮಾಲಿಂಗ

Matheesha Pathirana, IPL 2022: ಗುಜರಾತ್ ಈ ಪಂದ್ಯವನ್ನು ಗೆದ್ದರೂ ಒಂದು ಕ್ಷಣ ಚೆನ್ನೈ ಬೌಲಿಂಗ್ ದಾಳಿಗೆ ಹೆದರಿದ್ದು ಸುಳ್ಳಲ್ಲ. ಮುಖ್ಯವಾಗಿ ಅದು ಜೂನಿಯರ್ ಮಾಲಿಂಗ ಎಂದೇ ಕರೆಯಲ್ಪಡುವ ಶ್ರೀಲಂಕಾದ ಯುವ ವೇಗಿ ಮಥೀಶಾ ಪತಿರಾನಾ ಅವರ ಬೌಲಿಂಗ್​ನಲ್ಲಿ.

CSK vs GT: ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಮೊದಲ ವಿಕೆಟ್: ಸಿಎಸ್​ಕೆಯಲ್ಲೊಬ್ಬ ಜೂ. ಮಾಲಿಂಗ
Matheesha Pathirana CSK vs GT IPL 2022
Follow us
TV9 Web
| Updated By: Vinay Bhat

Updated on:May 16, 2022 | 8:32 AM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧವೂ ಚೆನ್ನೈ ಸೂಪರ್ ಕಿಂಗ್ಸ್ (CSK vs GT) ತಂಡ ಸೋಲು ಕಂಡಿತು. ಹಾರ್ದಿಕ್ (Hardik Pandya) ಪಡೆಯ ಕಠಿಣ ಬೌಲಿಂಗ್​ ಮುಂದೆ ಸಿಎಸ್​​ಕೆ ಬ್ಯಾಟರ್​ಗಳು ರನ್ ಗಳಿಸಲು ಪರದಾಡಿದರು. ಬ್ಯಾಟಿಂಗ್​ನಲ್ಲೂ ಮಿಂಚಿದ ಜಿಟಿ 7 ವಿಕೆಟ್​ಗಳ ಅಮೋಘ ಗೆಲುವಿನೊಂದಿಗೆ ಬರೋಬ್ಬರಿ 20 ಪಾಯಿಂಟ್ ಕಲೆಹಾಕಿದೆ. ಗುಜರಾತ್ ಈ ಪಂದ್ಯವನ್ನು ಗೆದ್ದರೂ ಒಂದು ಕ್ಷಣ ಚೆನ್ನೈ ಬೌಲಿಂಗ್ ದಾಳಿಗೆ ಹೆದರಿದ್ದು ಸುಳ್ಳಲ್ಲ. ಮುಖ್ಯವಾಗಿ ಅದು ಜೂನಿಯರ್ ಮಾಲಿಂಗ ಎಂದೇ ಕರೆಯಲ್ಪಡುವ ಶ್ರೀಲಂಕಾದ ಯುವ ವೇಗಿ ಮಥೀಶಾ ಪತಿರಾನಾ (Matheesha Pathirana) ಅವರ ಬೌಲಿಂಗ್​ನಲ್ಲಿ. ಹೌದು, ಗುಜರಾತ್ ವಿರುದ್ಧ ಕಣಕ್ಕಿಳಿಯುವ ಮೂಲಕ ಪತಿರಾನಾ ಸಿಎಸ್​ಕೆ ಪರ ಐಪಿಎಲ್​ ಟೂರ್ನಿಗೆ ಪದಾರ್ಪಣೆ ಮಾಡಿದರು. ವಿಶೇಷ ಎಂದರೆ ಇವರು ತಮ್ಮ ಚೊಚ್ಚಲ ಪಂದ್ಯದ, ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತು ಮಿಂಚಿದರು.

ಲಂಕಾ ದಿಗ್ಗಜ ಲಸಿತ್ ಮಾಲಿಂಗ ಅವರಂತೆಯೇ ಸ್ಲಿಂಗ್ಲಿಂಗ್ ಬೌಲಿಂಗ್ ಶೈಲಿಗೆ ಹೆಸರುವಾಸಿಯಾಗಿರುವ ಪತಿರಾನಾ 8ನೇ ಓವರ್ ಬೌಲಿಂಗ್ ಮಾಡಲು ಬಂದರು. ಇವರ ಈ ವಿಶೇಷ ಬೌಲಿಂಗ್ ಶೈಲಿಯನ್ನು ಅರಿಯದ ಶುಭ್ಮನ್ ಗಿಲ್ ಎಲ್​ಬಿ ಬಲೆಗೆ ಸಿಲುಕಿದರು. ಗಿಲ್ ರಿವ್ಯೂ ತೆಗೆದುಕೊಂಡರೂ ಪ್ರಯೋಜನಕ್ಕೆ ಬರಲಿಲ್ಲ. ಈ ಮೂಲಕ ಪತಿರಾನಾ ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲೇ ವಿಕೆಟ್ ಪಡೆದರು. ಒಟ್ಟು 3.1 ಓವರ್ ಬೌಲಿಂಗ್ ಮಾಡಿದ ಇವರು 24 ರನ್ ನೀಡಿ 2 ವಿಕೆಟ್ ಕಿತ್ತರು.

ಇದನ್ನೂ ಓದಿ
Image
IPL 2022: ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿರುವ ಪಾಂಡ್ಯ ಪಡೆ..!
Image
IPL 2022: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಗುಜರಾತ್ ಟೈಟನ್ಸ್, ಸಿಎಸ್​ಕೆ ಆಟಗಾರರು..!
Image
ತ್ರಿಕೋನಾ ಸರಣಿಗೆ USA ತಂಡ ಪ್ರಕಟ: ಭಾರತೀಯ ನಾಯಕ
Image
IPL 2022: ಸಿಕ್ಸ್​ಗಳ ಸುರಿಮಳೆ: ಐಪಿಎಲ್​ನಲ್ಲಿ ಹೊಸ ದಾಖಲೆ

2020 ಮತ್ತು 2022ರ ಅಂಡರ್ 19 ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದ 19 ವರ್ಷದ ಯುವ ವೇಗಿ ಮಥೀಶಾ ಪತಿರಾನಾ ಅವರನ್ನು ಆ್ಯಡಂ ಮಿಲ್ನೆ ಜಾಗಕ್ಕೆ ಆಯ್ಕೆ ಮಾಡಲಾಗಿತ್ತು. 2022 ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ, ಅವರು ನಾಲ್ಕು ಪಂದ್ಯಗಳಲ್ಲಿ 27.28 ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಅಲ್ಲದೆ ಅವರ ಎಕನಾಮಿ ರೇಟ್ ಕೇವಲ 6.16 ಆಗಿತ್ತು. ಮಥೀಶಾ ಕೇವಲ ಒಂದು ಲಿಸ್ಟ್ ಎ ಮತ್ತು 2 ಟಿ 20 ಪಂದ್ಯಗಳನ್ನಾಡಿದ್ದಾರೆ. ಬಲಗೈ ಮಧ್ಯಮ ವೇಗಿ ಪತಿರಾನಾ ಅವರ ಬೌಲಿಂಗ್ ಶೈಲಿಯು ಲಸಿತ್ ಮಾಲಿಂಗ ಅವರನ್ನು ಹೋಲುತ್ತದೆ. ಹೀಗಾಗಿ ಮಥೀಶಾ ಜೂನಿಯರ್ ಮಾಲಿಂಗ ಎಂದೇ ಖ್ಯಾತಿ ಪಡೆದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಸಿಎಸ್‌ಕೆ ಆರಂಭದಲ್ಲೇ ಡ್ವೇನ್‌ ಕಾನ್ವೆ(5) ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಬಳಿಕ ಜೊತೆಯಾದ ಮೊಯಿನ್‌ ಅಲಿ(21) ಹಾಗೂ ರುತುರಾಜ್‌ ಗಾಯಕ್ವಾಡ್‌(53) 2ನೇ ವಿಕೆಟ್‌ಗೆ 57 ರನ್‌ಗಳ ಉತ್ತಮ ಜೊತೆಯಾಟದಿಂದ ಚೇತರಿಕೆ ನೀಡಿದರು. ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದ ರುತುರಾಜ್‌, ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ನಂತರ ಬಂದ ಎನ್‌. ಜಗದೀಸನ್‌(39*) ಸಹ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಆದರೆ ಇವರಿಬ್ಬರ ವಿಕೆಟ್‌ ಪತನದ ಬಳಿಕ ಶಿವಂ ದುಬೆ(0) ಹಾಗೂ ನಾಯಕ ಎಂ.ಎಸ್.ಧೋನಿ(7) ನಿರೀಕ್ಷಿತ ರನ್‌ ಕಲೆಹಾಕುವಲ್ಲಿ ವಿಫಲವಾದರು. ಪರಿಣಾಮ ಸಿಎಸ್‌ಕೆ 20 ಓವರ್‌ಗಳಲ್ಲಿ 135 ರನ್‌ಗಳಿಸಲಷ್ಟೇ ಶಕ್ತವಾಯಿತು.

ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ತಂಡ ವೃದ್ಧಿಮಾನ್ ಸಹಾ ಅಜೇಯ ಅರ್ಧಶತಕದ (67*) ನೆರವಿನಿಂದ 19.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸಹಾ ಹಾಗೂ ಶುಭಮನ್ ಗಿಲ್ (18) ಮೊದಲ ವಿಕೆಟ್‌ಗೆ 59 ರನ್ ಒಟ್ಟು ಸೇರಿಸಿದರು. ಮ್ಯಾಥ್ಯೂ ವೇಡ್ 20 ರನ್‌ಗಳ ಕಾಣಿಕೆ ನೀಡಿದರು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸಹಾ ಅರ್ಧಶತಕ ಸಾಧನೆ ಮಾಡಿದರು. 57 ಎಸೆತಗಳನ್ನು ಎದುರಿಸಿದ ಸಹಾ 67 ರನ್ (8 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:32 am, Mon, 16 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್