ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಇನ್ನೂ ಪತ್ತೆಯಾಗದ ವಕೀಲ ರಾಜೇಶ್ ಭಟ್, ಲುಕ್ ಔಟ್ ನೋಟಿಸ್ ಜಾರಿ
KSN Rajesh Bhat: ಈ ಮಧ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ಗೆ ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿಸಿದ್ದಾರೆ. ಪ್ರಕರಣ ಬೇಧಿಸಲು ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು 6 ತಂಡಗಳನ್ನು ರಚಿಸಿದ್ದಾರೆ.
ಮಂಗಳೂರು: ತಮ್ಮ ಕಚೇರಿಯಲ್ಲಿ ತರಬೇತಿಯಲ್ಲಿದ್ದ ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪರಾರಿಯಾಗಿರುವ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಇನ್ನೂ ಪತ್ತೆಯಾಗಿಲ್ಲ. ಹಾಗಾಗಿ ವಕೀಲ ರಾಜೇಶ್ ಭಟ್ ವಿರುದ್ಧ ಈಗ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಈವರೆಗೂ ಪತ್ತೆಯಾಗಿಲ್ಲ. ಕೆ.ಎಸ್.ಎನ್.ರಾಜೇಶ್ ಭಟ್ ದೇಶ ಬಿಟ್ಟು ತೆರಳದಂತೆ, ಮತ್ತು ಅವರ ಪತ್ತೆಗೆ ದೇಶದ ಎಲ್ಲ ಏರ್ಪೋರ್ಟ್ಗಳಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಈ ಮಧ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ಗೆ ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿಸಿದ್ದಾರೆ. ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಪೊಲೀಸರ ನೆರವು ಸಹ ಕೇಳಿದ್ದಾರೆ. ಪ್ರಕರಣ ಬೇಧಿಸಲು ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು 6 ತಂಡಗಳನ್ನು ರಚಿಸಿದ್ದಾರೆ.
Also Read: ಮಂಗಳೂರು ವಿದ್ಯಾರ್ಥಿನಿಗೆ ವಕೀಲ ಕಿರುಕುಳ ಕೇಸ್: ಇನ್ನೂ ವಕೀಲ ರಾಜೇಶ್ ಭಟ್ ನಾಪತ್ತೆ, ಸಹಾಯ ಮಾಡಿದ ಸ್ನೇಹಿತ ಅರೆಸ್ಟ್
(Internship student physical misuse case look out notice issued against mangalore advocate ksn rajesh bhat)
Published On - 1:22 pm, Tue, 9 November 21