AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಪೊಲೀಸ್ ಸಿಬ್ಬಂದಿಯೇ ದೈಹಿಕವಾಗಿ ಬಳಸಿಕೊಂಡ ಆರೋಪ; ಸಂತ್ರಸ್ತೆ ಗರ್ಭಿಣಿ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ಕೊಡುವ ನೆಪದಲ್ಲಿ ಮನೆಗೆ ಬರುತ್ತಿದ್ದ ಕಾನ್ಸ್ಟೇಬಲ್ ಶಿವರಾಜ್ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವೇ ಇದೀಗ ಕೇಳಿಬಂದಿದ್ದು ಪ್ರಕರಣ ದಾಖಲಾಗಿದೆ.

ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಪೊಲೀಸ್ ಸಿಬ್ಬಂದಿಯೇ ದೈಹಿಕವಾಗಿ ಬಳಸಿಕೊಂಡ ಆರೋಪ; ಸಂತ್ರಸ್ತೆ ಗರ್ಭಿಣಿ
ಆರೋಪಿ ಕಾನ್ಸ್​ಟೇಬಲ್ ಶಿವರಾಜ್
TV9 Web
| Edited By: |

Updated on:Sep 27, 2021 | 10:54 PM

Share

ಮಂಗಳೂರು: ಪೊಲಿಸ್ ಸಿಬ್ಬಂದಿಯೋರ್ವ ಅತ್ಯಾಚಾರ ಪ್ರಕರಣವೊಂದರ ಸಂತ್ರಸ್ತೆಯನ್ನೇ ದೈಹಿಕವಾಗಿ ಬಳಸಿಕೊಂಡು ಗರ್ಭಿಣಿಯನ್ನಾಗಿಸಿದ ಆರೋಪವೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 2 ವರ್ಷದ ಹಿಂದೆ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆಯೆಂದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಪ್ರಕರಣ ಸಂಬಂಧ ಠಾಣೆಗೆ ದೂರು ನೀಡಿದ್ದರು. ಆದರೆ ದೂರು ನೀಡಿದ ಪೊಲೀಸ್ ಠಾಣೆಯ ಸಿಬ್ಬಂದಿಯೇ ಸಂತ್ರಸ್ತ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡ ಆರೋಪ ಕೇಳಿಬಂದಿದೆ.

ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಶಿವರಾಜ್ ಎಂಬಾತ ಸಂತ್ರಸ್ತೆಯ ಕುಟುಂಬಕ್ಕೆ ಪರಿಚಯವಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ಕೊಡುವ ನೆಪದಲ್ಲಿ ಮನೆಗೆ ಶಿವರಾಜ್ ಸಂತ್ರಸ್ತೆಯ ಮನೆಗೆ ಆಗಾಗ ಬರುತ್ತಿದ್ದ. ಇದೇ ಸಂದರ್ಭದಲ್ಲಿ ಸಂತ್ರಸ್ತೆಯ ಮೇಲೆ ಕಾನ್ಸ್ಟೇಬಲ್ ಶಿವರಾಜ್ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವೇ ಇದೀಗ ಕೇಳಿಬಂದಿದ್ದು ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಯುವತಿಯಲ್ಲಿ ದೈಹಿಕ ಬದಲಾವಣೆ ಕಂಡುಬಂದಿದ್ದು ಪೋಷಕರು ಮಗಳನ್ನು ಪ್ರಶ್ನಿಸಿದ್ದಾರೆ. ಈವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆ ತನಗೆ ಐದೂವರೆ ತಿಂಗಳಾಗಿದ್ದು, ಕಾನ್ಸ್ಟೇಬಲ್ ಶಿವರಾಜ್​ನಿಂದ ಗರ್ಭಿಣಿಯಾಗಿದ್ದಾಗಿ ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ಕಾನ್ಸ್ಟೇಬಲ್ ಶಿವರಾಜ್​ ಕರೆಸಿ ಪ್ರಶ್ನಿಸಿದಾಗ ಹಣ ಕೊಡುತ್ತೇನೆ ಅಬಾರ್ಷನ್ ಮಾಡಿಸುವಂತೆ ಆತ ಪುಸಲಾಯಿಸಿದ್ದಾನೆ. ಆದರೆ ಅಬಾರ್ಷನ್ ಮಾಡಿಸಲು ಯುವತಿಯ ತಂದೆ ನಿರಾಕರಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಆದರೆ ಸೆಪ್ಟೆಂಬರ್ 18ರಿಂದ ಯುವತಿ ಮತ್ತು ತಾಯಿ ನಾಪತ್ತೆಯಾಗಿದ್ದಾರೆ. ಆಸ್ಪತ್ರೆಗೆ ಹೋಗುವುದಾಗಿ ಹೇಳಿ ತೆರಳಿದ್ದ ತಾಯಿ, ಮಗಳು ಮರಳಿ ಮನೆಗೆ ಬಂದಿಲ್ಲ. ಕಾನ್ಸ್​ಟೇಬಲ್ ಶಿವರಾಜ್ ಆನ್​ಲೈನ್​  35,000 ಟ್ರಾನ್ಸ್​ಫರ್ ಮಾಡಿ ಅಬಾರ್ಷನ್ ಮಾಡಿಸುವಂತೆ ಹೇಳಿದ್ದು, ಅಂತೆಯೇ ಮಾಡಿಸಿರುವುದಾಗಿ ಯುವತಿಯ ತಾಯಿ ಫೋನ್ ಮೂಲಕ ತಿಳಿಸಿದ್ದಾಳೆ. ಆದರೆ ಎಲ್ಲಿ ವಾಸವಿದ್ದೇವೆ ಎಂದು ತಿಳಿಸಿಲ್ಲ. ಪಿಸಿ ಶಿವರಾಜ್ ಕೂಡ ತಲೆಮರೆಸಿಕೊಂಡಿದ್ದಾನೆ ಎಂಬುದಾಗಿ ಯುವತಿಯ ತಂದೆ ಇದೀಗ ದಾಖಲಿಸಿರುವ ಪ್ರಕರಣದಲ್ಲಿ ವಿವರಿಸಿದ್ದಾರೆ.

ಆರೋಪಿತ ಪೊಲೀಸ್ ಸಿಬ್ಬಂದಿ ಶಿವರಾಜ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಈಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 

ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ

Temple Tour: ತ್ರಿಮೂರ್ತಿಗಳಿಂದ ಸ್ಥಾಪನೆಯಾದ ಕುರುಡು ಮಲೆ ಸಾಲಿಗ್ರಾಮ ಗಣಪನ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ

(Kadaba Police Station Constable physically exploits of a rape victim case registered)

Published On - 5:46 pm, Mon, 27 September 21