ಕಾಸರಗೋಡು: ಆ್ಯಂಬುಲೆನ್ಸ್ ಡಿಕ್ಕಿ: ಕಾರಿನಲ್ಲಿ ತೆರಳುತ್ತಿದ್ದ ಮೂವರ ದುರ್ಮರಣ
ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕುಂಜತ್ತೂರು ಬಳಿ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಆ್ಯಂಬುಲೆನ್ಸ್ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿಗೆ ಡಿಕ್ಕಿ ಹೊಡೆದು ರಸ್ತೆಯಲ್ಲೇ ಆ್ಯಂಬುಲೆನ್ಸ್ ಉರುಳಿಬಿದ್ದಿದೆ. ಆ್ಯಂಬುಲೆನ್ಸ್ನಲ್ಲಿದ್ದ ರೋಗಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
ಮಂಗಳೂರು, ಮೇ 07: ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ (accident) ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸಾವನ್ನಪ್ಪಿರುವಂತಹ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕುಂಜತ್ತೂರು ಬಳಿ ನಡೆದಿದೆ. ಶ್ರೀನಾಥ, ಶರತ್ ಮೆನನ್ ಸೇರಿದಂತೆ ಮೂವರು ದುರ್ಮರಣ (death) ಹೊಂದಿದ್ದು, ಮೃತರು ಕೇರಳದ ತ್ರಿಶೂರು ಜಿಲ್ಲೆ ಗುರುವಾಯೂರು ನಿವಾಸಿಗಳು ಎಂದು ತಿಳಿದುಬಂದಿದೆ. ಕಾಸರಗೋಡಿನಿಂದ ಮಂಗಳೂರಿಗೆ ಆ್ಯಂ ಬುಲೆನ್ಸ್ನಲ್ಲಿ ರೋಗಿ ಕರೆದೊಯ್ಯಲಾಗುತ್ತಿತ್ತು. ಮಂಗಳೂರು ಕಡೆಯಿಂದ ಮಂಜೇಶ್ವರದತ್ತ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
ಆ್ಯಂಬುಲೆನ್ಸ್ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿಗೆ ಡಿಕ್ಕಿ ಹೊಡೆದು ರಸ್ತೆಯಲ್ಲೇ ಆ್ಯಂಬುಲೆನ್ಸ್ ಉರುಳಿಬಿದ್ದಿದೆ. ಆ್ಯಂಬುಲೆನ್ಸ್ನಲ್ಲಿದ್ದ ರೋಗಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಯಾಣಿಕನ ಬಳಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆಟೋ ಚಾಲಕನ ಬಂಧನ
ಬೆಂಗಳೂರು: ಪ್ರಯಾಣಿಕನ ಬಳಿ ಕಳ್ಳತನ ಮಾಡಿದ್ದ ಆಟೋ ಚಾಲಕನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಬೈದ್ರು ಅಂತಾ ಬೇಸತ್ತು ಮನೆ ಬಿಟ್ಟು ಓರ್ವ ಯುವಕ ಹೋಗಿದ್ದ. ಆಟೋ ಮೂಲಕ ರೈಲ್ವೆ ನಿಕ್ದಾಣಕ್ಕೆ ಹೋಗುತ್ತಿದ್ದ. ಈ ವೇಳೆ ತಾನು ಹಾಕಿಕೊಳ್ತಿದ್ದ ಚಿನ್ನಾಭರಣಗಳನ್ನ ಬ್ಯಾಗ್ನಲ್ಲಿ ಹಾಕಿಟ್ಟುಕೊಳ್ಳುತ್ತಿದ್ದ. ಅದನ್ನ ಗಮನಿಸಿ ಆಟೋನಿಲ್ಲಿಸಿದ್ದ ಚಾಲಕ ನಂತರ ಯುವಕನಿಗೆ ಬೆದರಿಸಿ ಚಿನ್ನಾಭರಣಗಳಿದ್ದ ಬ್ಯಾಗ್ ಕಸಿದು ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಬೀದರ್: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: ಅಧಿಕಾರಿ ಸಾವು
ನಂತರ ಬೇರೆ ಆಟೋ ಮಾಡಿಕೊಂಡು ಮೆಜೆಸ್ಟಿಕ್ ಮೂಲಕ ಯುವಕ ಪುರಿಗೆ ಹೋಗಿದ್ದ. ಈ ಬಗ್ಗೆ ಯುವಕನ ಪೋಷಕರು ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದ. ತನಿಖೆ ವೇಳೆ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಯುವಕ ಪತ್ತೆಯಾಗಿದ್ದ.
ಇದನ್ನೂ ಓದಿ: ಸೈಬರ್ ಕ್ರೈಂ: 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ
ಕರೆತಂದು ಪೋಷಕರಿಗೆ ಒಪ್ಪಿಸಿಸಲಾಗಿದೆ. ಮೈಮೇಲಿನ ಚಿನ್ನ ಎಲ್ಲಿ ಎಂದು ಕೇಳ್ದಾಗ ಕಳ್ಳತನದ ಬಗ್ಗೆ ಯುವಕ ಹೇಳಿದ್ದಾನೆ. ನಂತರ ಯುವಕನ ಪೋಷಕರು ಮತ್ತೊಂದು ದೂರು ದಾಖಲಿಸಿದ್ದರು. ಸದ್ಯ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:25 pm, Tue, 7 May 24