ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನ

ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ಈ ವೇಳೆ ರಂಗಸ್ಥಳದಲ್ಲಿ ನಿಂತಿದ್ದ ಶಿಶುಪಾಲನ ಪಾತ್ರದಾರಿಯಾಗಿದ್ದ ಗುರುವಪ್ಪ ಬಾಯಾರು ಅವರು ಸ್ಥಳದಲ್ಲೇ ಕುಸಿದು ಬಿದ್ದರು.

ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನ
ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು
Follow us
| Updated By: ಆಯೇಷಾ ಬಾನು

Updated on:Dec 23, 2022 | 9:49 AM

ಮಂಗಳೂರು: ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು(58) ರಂಗಸ್ಥಳದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಟೀಲು ಬಳಿಯ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷ ಯಕ್ಷಗಾನ ಕಾರ್ಯಕ್ರಮದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಕಟೀಲು 4ನೇ ಮೇಳದ ಹಿರಿಯ ಕಲಾವಿದ ಗುರುವಪ್ಪ ಬಾಯಾರು ಕಟೀಲಿನ ಸರಸ್ವತೀ ಸದನದಲ್ಲಿ ಗುರುವಾರ ರಾತ್ರಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸರಸ್ವತೀ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ಈ ವೇಳೆ ರಂಗಸ್ಥಳದಲ್ಲಿ ನಿಂತಿದ್ದ ಶಿಶುಪಾಲನ ಪಾತ್ರದಾರಿಯಾಗಿದ್ದ ಗುರುವಪ್ಪ ಬಾಯಾರು ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.

ಇದನ್ನೂ ಓದಿ: ಮಂಡ್ಯ: ಮಾಜಿ ಶಾಸಕ ಚಲುವರಾಯಸ್ವಾಮಿ ಮತ್ತು ಶಾಸಕ ಸುರೇಶ್ ಗೌಡ ನಡುವೆ ಟಾಕ್ ಫೈಟ್

ಗುರುವಪ್ಪ ಬಾಯಾರು ಅವರು ಬಹಳ ಸರಳ ವ್ಯಕ್ತಿತ್ವದ ಹಿರಿಯ ಕಲಾವಿದರಾಗಿ ಒಡನಾಡಿಗಳೊಡನೆ ಸ್ನೇಹಶೀಲರಾಗಿದ್ದು ಒದಗಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಕಲಾಸೇವೆ ಮಾಡುತ್ತಿದ್ದ ಉತ್ತಮ ಕಲಾವಿದರಾಗಿದ್ದರು. ಜೊತೆಗೆ ಒಳ್ಳೆಯ ಪ್ರಸಂಗಕರ್ತರೂ ಕೂಡ. ಮುತ್ತು ಪೋಣಿಸಿದಂತಾ ಹಸ್ತಾಕ್ಷರ. ಇವರ ಸುಭಗ ಸುಂದರ ಶೈಲಿಯ ಯಕ್ಷಗಾನದ ಹಾಡುಗಳು ಹೃದ್ಯ. ಡಾ. ಶಿಮಂತೂರು ನಾರಾಯಣ ಶೆಟ್ಟಿ ಅವರಿಂದ ಯಕ್ಷಗಾನ ಛಂದಸ್ಸಿನ ಮರ್ಮವನ್ನರಿತಿದ್ದ ಅವರು ಛಂದೋವಿಲಂಘನೆಯಾಗದಂತೆ ಸರಳವಾದ ಶೈಲಿಯಲ್ಲಿ ಸೊಗಸಾದ ಭಾಷೆಯಲ್ಲಿ ಹಾಡುಗಳನ್ನು ಹೊಸೆಯುತ್ತಿದ್ದರು. ಇವರ ಅನೇಕ ಪ್ರಸಂಗಗಳು ರಂಗದಲ್ಲಿ ಯಶಸ್ಸು ಕಂಡಿವೆ. ತುಳು – ಕನ್ನಡ ಭಾಷೆಗಳಲ್ಲಿ ಚೆಂದದ ಕವಿತೆ ಕಟ್ಟುತ್ತಿದ್ದ ಗುರುವಪ್ಪ ಬಾಯಾರು ಅವರ ಅನಿರೀಕ್ಷಿತ ನಿರ್ಗಮನದಿಂದ ಯಕ್ಷಗಾನ ರಂಗಭೂಮಿ ಒಬ್ಬ ಉತ್ತಮ ಪ್ರಸಂಗಕರ್ತನನ್ನು, ಉತ್ತಮ ಕಲಾವಿದನನ್ನು, ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ನಶ್ವರ ಬದುಕಿಗೊಂದು ಜ್ವಲಂತ ನಿದರ್ಶನವಾಗಿ ಅನೂಹ್ಯ ಲೋಕಕ್ಕೆ ತೆರಳಿದ ಬಾಯಾರು ಅವರಿಗೆ ಭಾಷ್ಪಾಂಜಲಿ ಎಂದು ಖ್ಯಾತ ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದಾರೆ.

Published On - 8:55 am, Fri, 23 December 22

10 ಸೆಕೆಂಡ್​ನಲ್ಲಿ 5 ಬಾರಿ ಬಿಜೆಪಿ ನಾಯಕನಿಗೆ ನಮಸ್ಕರಿಸಿದ ಐಎಎಸ್​ ಅಧಿಕಾರಿ
10 ಸೆಕೆಂಡ್​ನಲ್ಲಿ 5 ಬಾರಿ ಬಿಜೆಪಿ ನಾಯಕನಿಗೆ ನಮಸ್ಕರಿಸಿದ ಐಎಎಸ್​ ಅಧಿಕಾರಿ
ದರ್ಶನ್​ಗೆ 4 ಹೆಜ್ಜೆ ನಡೆಯಲೂ ಆಗ್ತಿಲ್ಲ; ಕಣ್ಣೀರು ಹಾಕುವಂತಿದೆ ಈ ವಿಡಿಯೋ
ದರ್ಶನ್​ಗೆ 4 ಹೆಜ್ಜೆ ನಡೆಯಲೂ ಆಗ್ತಿಲ್ಲ; ಕಣ್ಣೀರು ಹಾಕುವಂತಿದೆ ಈ ವಿಡಿಯೋ
ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಯುವಕ ನಿಧನ
ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಯುವಕ ನಿಧನ
ದೇವರಾಜೇಗೌಡ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ವರಸೆ ಬದಲಿಸಿದ ರೇವಣ್ಣ
ದೇವರಾಜೇಗೌಡ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ವರಸೆ ಬದಲಿಸಿದ ರೇವಣ್ಣ
ಆ ಹೆಸರು ಹೇಳಲೂ ಹನುಮಂತನಿಗೆ ನಾಚಿಕೆ: ವಿಡಿಯೋ
ಆ ಹೆಸರು ಹೇಳಲೂ ಹನುಮಂತನಿಗೆ ನಾಚಿಕೆ: ವಿಡಿಯೋ
ನನ್ನ ಮನವೊಲಿಕೆಗೆ ಯಾವ ನಾಯಕನೂ ಪ್ರಯತ್ನಿಸಿಲ್ಲ: ಅಜ್ಜಂಪೀರ್ ಖಾದ್ರಿ
ನನ್ನ ಮನವೊಲಿಕೆಗೆ ಯಾವ ನಾಯಕನೂ ಪ್ರಯತ್ನಿಸಿಲ್ಲ: ಅಜ್ಜಂಪೀರ್ ಖಾದ್ರಿ
ಚನ್ನಪಟ್ಟಣ: ನಿಖಿಲ್ ಸ್ಪರ್ಧಿಸಬಾರದು ಅಂತ ಹೇಳೋದಿಕ್ಕಾಗುತ್ತೆಯೇ? ಶಿವಕುಮಾರ್
ಚನ್ನಪಟ್ಟಣ: ನಿಖಿಲ್ ಸ್ಪರ್ಧಿಸಬಾರದು ಅಂತ ಹೇಳೋದಿಕ್ಕಾಗುತ್ತೆಯೇ? ಶಿವಕುಮಾರ್
ಯುವತಿಯ ತುಟಿಗೆ ಮುತ್ತಿಡಲು ಹೋದ ಪೊಲೀಸ್; ವಿಡಿಯೋ ವೈರಲ್
ಯುವತಿಯ ತುಟಿಗೆ ಮುತ್ತಿಡಲು ಹೋದ ಪೊಲೀಸ್; ವಿಡಿಯೋ ವೈರಲ್
ಎನ್​ಡಿಎ ಅಭ್ಯರ್ಥಿ ಬಂಗಾರು ಹಣಮಂತು ಗೆಲ್ಲೋದು ಶತಸಿದ್ಧ: ಶ್ರೀರಾಮುಲು
ಎನ್​ಡಿಎ ಅಭ್ಯರ್ಥಿ ಬಂಗಾರು ಹಣಮಂತು ಗೆಲ್ಲೋದು ಶತಸಿದ್ಧ: ಶ್ರೀರಾಮುಲು
ಬಿಗ್ ಬಾಸ್​ನಿಂದ ಹೊರಬಿದ್ದ ಜಗದೀಶ್​ಗೆ ಸುದ್ದಿಯಲ್ಲಿರುವ ಹಪಾಹಪಿ ಇರುವಂತಿದೆ
ಬಿಗ್ ಬಾಸ್​ನಿಂದ ಹೊರಬಿದ್ದ ಜಗದೀಶ್​ಗೆ ಸುದ್ದಿಯಲ್ಲಿರುವ ಹಪಾಹಪಿ ಇರುವಂತಿದೆ