‘ಒಂದು ರೂಪಾಯಿಯೂ ಹಂಚದ ಏಕೈಕ ಆಭ್ಯರ್ಥಿ’ ಎಂಬ ಹೆಗ್ಗಳಿಕೆಯ ಕೋಟ ಶ್ರೀನಿವಾಸ ಪೂಜಾರಿಗೆ ಭರ್ಜರಿ ಜಯ
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ 3,672 ಮತಗಳನ್ನು ಗಳಿಸಿ ಜಯ ಸಾಧಿಸಿದ್ದಾರೆ. ಕಾಂಗ್ರಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,079 ಮತಗಳನ್ನು ಗಳಿಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡ ಸ್ಥಳೀಯ ವಿಧಾನ ಪರಿಷತ್ ದ್ವಿ ಸದಸ್ಯತ್ವ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಮೊದಲ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ 3,672 ಮತಗಳನ್ನು ಗಳಿಸಿ ಜಯ ಸಾಧಿಸಿದ್ದಾರೆ. ಕಾಂಗ್ರಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,079 ಮತಗಳನ್ನು ಗಳಿಸಿದ್ದಾರೆ. ಎಸ್ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 204 ಮತಗಳನ್ನು ಗಳಿಸಿದ್ದಾರೆ. 56 ಮತಗಳು ಅಸಿಂಧುವಾಗಿವೆ. ಒಟ್ಟು 6,011 ಮತಗಳಲ್ಲಿ 56 ಮತಗಳು ಅಸಿಂಧುಗೊಂಡಿದ್ದರಿಂದ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಲು 1,986 ಮತಗಳನ್ನು ಗಳಿಸಬೇಕಿತ್ತು.
ಗೆಲುವಿನ ಬಳಿಕ ವಿಜೇತ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮತ ಎಣಿಕಾ ಕೇಂದ್ರದ ಬಳಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಒಂದು ರೂಪಾಯಿ ಹಣ ಹಂಚದೆ ಗೆದ್ದಿರುವ ಏಕೈಕ ಅಭ್ಯರ್ಥಿ ಅನ್ನೊ ಹೆಮ್ಮೆ ಇದೆ. ಇದು ನಮ್ಮ ಮತದಾರರ ಗೆಲುವು. ಈಗಾಗಲೇ ನನಗೆ ಬಲಿಷ್ಠ ಖಾತೆಯನ್ನು ನೀಡಿದ್ದಾರೆ. ಅದನ್ನೇ ಇನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸುತ್ತೇನೆ. ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಂದೇ ಅಭ್ಯರ್ಥಿ ಹಾಕುವ ನಿರ್ಧಾರ ಪಕ್ಷದ್ದು ಎಂದು ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: KGF Babu: ರಾಜಕೀಯ ಸೋಲಿನಿಂದ ಕಂಗೆಟ್ಟು ಸೀದಾ ಆಟೋ ಹತ್ತಿ ಹೊರಟ ಕೋಟಿ ಧಣಿ ಬಾಬು