ಮತ್ತೆ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅವ್ಯವಹಾರ; ಅಕ್ರಮವಾಗಿ ಹೆಚ್ಚಿನ ಸಂಬಳಕ್ಕೆ ಮಹಿಳಾ ಉಪನ್ಯಾಸಕಿ ನಿಯೋಜನೆ ಆರೋಪ

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅನುಧಾನಿತ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಉಪನ್ಯಾಸಕಿಯೊಬ್ಬರ ನಿಯೋಜನೆಯಲ್ಲಿ ಅಕ್ರಮ ಕೇಳಿ ಬಂದಿದೆ. ನಿಯಮಬಾಹಿರವಾಗಿ ಡಾ.ನೀತು ಸೂರಜ್ ಎಂಬ ಮಹಿಳಾ ಉಪನ್ಯಾಸಕಿಯೊಬ್ಬರ ನಿಯೋಜನೆ ಮಾಡಲಾಗಿದೆ.

ಮತ್ತೆ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅವ್ಯವಹಾರ; ಅಕ್ರಮವಾಗಿ ಹೆಚ್ಚಿನ ಸಂಬಳಕ್ಕೆ ಮಹಿಳಾ ಉಪನ್ಯಾಸಕಿ ನಿಯೋಜನೆ ಆರೋಪ
ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು
Follow us
TV9 Web
| Updated By: ಆಯೇಷಾ ಬಾನು

Updated on:May 10, 2022 | 4:19 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಲ್ಲಿ ಅವ್ಯವಹಾರ ಕಂಡು ಬಂದಿದೆ. ಬಗೆದಷ್ಟೂ ಅಕ್ರಮ‌ ಹೊರಬರುತ್ತಿದೆ. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅನುಧಾನಿತ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಉಪನ್ಯಾಸಕಿಯೊಬ್ಬರ ನಿಯೋಜನೆಯಲ್ಲಿ ಅಕ್ರಮ ಕೇಳಿ ಬಂದಿದೆ. ಕರ್ನಾಟಕದ ನಂಬರ್ 1 ದೇವಸ್ಥಾನ, ಪ್ರಸಿದ್ಧ ನಾಗಕ್ಷೇತ್ರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಇಲ್ಲಿನ ಆಡಳಿತ ಮಂಡಳಿಯ ಅಕ್ರಮಗಳು ಒಂದಾದ ನಂತರ ಒಂದು ಹೊರ ಬರುತ್ತಲೇ ಇದೆ. ಸದ್ಯ ಇಲ್ಲಿನ ಆಡಳಿತ ಮಂಡಳಿ ನಡೆಸಲ್ಪಡುವ ಕಾಲೇಜಿನಲ್ಲಿ ಅಕ್ರಮ ನೇಮಕಾತಿ ಮತ್ತು ತಾರತಮ್ಯ ವೇತನ ಹಗರಣ ಬಯಲಾಗಿದೆ.

ಶ್ರೀ ಕ್ಷೇತ್ರ ಕುಕ್ಕೆ ಕಾಲೇಜಿನಲ್ಲಿ ಅಕ್ರಮ ಮತ್ತು ತಾರತಮ್ಯ ಆರೋಪ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಪ್ರಸಿದ್ಧ ಮತ್ತು ಪವರ್ ಫುಲ್ ನಾಗಕ್ಷೇತ್ರ. ಅಲ್ಲದೇ ಆದಾಯದಲ್ಲಿ ಮುಂಚೂಣಿಯಲ್ಲಿರೋ ರಾಜ್ಯದ ದೇವಸ್ಥಾನ. ಇಲ್ಲಿನ ಆಡಳಿತ ಮಂಡಳಿಯಿಂದ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳ ಆರೋಪ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಹೌದು ಆಡಳಿತ ಮಂಡಳಿಯು ದೇವಸ್ಥಾನ ಆದಾಯದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಅನ್ನೊ ಆರೋಪಗಳು ಸಾಕಷ್ಟು ಕೇಳಿ ಬರುತ್ತಿದೆ. ಈ ಅಕ್ರಮಗಳನ್ನು ಪ್ರಶ್ನಿಸಿದ ಕಾರ್ಯನಿರ್ವಾಹಣಾಧಿಕಾರಿ ಡಾ.ನಿಂಗಯ್ಯ ಅವರ ವರ್ಗಾವಣೆಗೂ ಮಾಡಿಸುವ ಪ್ರಯತ್ನಗಳು ನಡೆದಿದ್ದವು. ಯಾವಾಗ ಈಓ ನಿಂಗಯ್ಯ ವರ್ಗಾವಣೆಗೆ ಕೈ ಹಾಕಿದ್ರೋ ಅವಾಗಿಂದ ಇವರ ಒಂದೇಂದ ಹಗರಣಗಳನ್ನು ಹೊರಬರುತ್ತಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಮಂಡಳಿಯಿಂದ ನಡೆಸಲ್ಪಡುವ ಕಾಲೇಜು ಕುಕ್ಕೆಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಲಯ. ಈ ಕಾಲೇಜಿನಲ್ಲಿ ಹದಿನೈದಕ್ಕೂ ಹೆಚ್ಚು ಜನ ಉಪನ್ಯಾಸಕ ಮತ್ತು ಬೋದಕೇತರ ಸಿಬ್ಬಂಧಿ ಇದ್ದಾರೆ. ಇದರಲ್ಲಿ ಅತಿಥಿ ಉಪನ್ಯಾಸಕರಿಗೆ ಕುಕ್ಕೆ ಆಡಳಿತ ಮಂಡಳಿ ಸಂಬಂಳವನ್ನು ನೀಡುತ್ತದೆ. ಆದ್ರೆ 2021 ರ ಆಗಸ್ಟ್ ನಲ್ಲಿ ಡಾ.ನೀತು ಸೂರಜ್ ಎಂಬ ಉಪನ್ಯಾಸಕಿಯನ್ನು ನೇಮಿಸಿಕೊಂಡಿದ್ದಾರೆ. ನಿಯಾಮಾವಳಿಗಳ ಪ್ರಕಾರ ನೇಮಕ ಮಾಡುವಾಗ ಕಾರ್ಯನಿರ್ವಹಣಾಧಿಕಾರಿಯ ಒಪ್ಪಿಗೆ ಮತ್ತು ಸಹಿ ಬೇಕು. ಆದ್ರೆ ಅದನ್ನು ಮಾಡದೇ ಸ್ವತಹ ತಾವೇ ನೇಮಕ ಮಾಡಿಕೊಂಡಿದ್ದಾರೆ.

ಇನ್ನು ಇಲ್ಲಿ ಹತ್ತು ಹದಿನೈದು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದವರಿಗೆ 6 ಸಾವಿರದಿಂದ 13 ಸಾವಿರದವರೆಗೂ ಸಂಬಳ ಕೊಡಲಾಗಿತ್ತಿದೆ. ಆದ್ರೆ ಡಾ.ನೀತು ಸೂರಜ್ ಗೆ ತಿಂಗಳಿಗೆ 45 ಸಾವಿರ ಸಂಬಳ ಫಿಕ್ಸ್ ಮಾಡಿದ್ದಾರೆ. ಡಾ.ನೀತು ಸೂರಜ್, ಇಲ್ಲಿನ ಆಡಳಿತ ಮಂಡಳಿ ಸದಸ್ಯ ಪ್ರಸನ್ನ ದರ್ಬೆ ಅವರ ಶಿಪಾರಸ್ಸಿನಲ್ಲಿ ಬಂದವರು. ಆದ್ರಿಂದ ಸಂಬಳದಲ್ಲಿ ತಾರತಮ್ಯ ಮಾಡಿ ಕುಕ್ಕೆ ಆದಾಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ.’ಆಡಳಿತ ಮಂಡಳಿ ಸದ್ಯಸ್ಯ ಪ್ರಸನ್ನ ದರ್ಬೆ ತನ್ನ ಪರಿಚಯಸ್ಥರಾದ ಡಾ.ನೀತು ಗೆ ಇಲ್ಲಿ ಅಕ್ರಮವಾಗಿ ಕೆಲಸ ಕೊಡಿಸಿದ್ದಾರೆ. ಅದು ಅಲ್ಲದೇ ಅವರಿಗೆ ಯಾರಿಗೂ ಇಲ್ಲದ 45 ಸಾವಿರ ಸಂಬಳ ಫಿಕ್ಸ್ ಮಾಡಿದ್ದಾರೆ. ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಶ್ರೀವತ್ಸ ಎಂಬ ಸದಸ್ಯರನ್ನು ಹೊರತು ಪಡಿಸಿ ಎಲ್ಲಾ ಸದಸ್ಯರು ಸಾಕಷ್ಟು ಅಕ್ರಮಗಳಿಗೆ ಸಾಥ್ ನೀಡಿದ್ದಾರೆ. ಕಾರ್ಯನಿರ್ವಾಣಾಧಿಕಾರಿ ಡಾ. ನಿಂಗಯ್ಯ ಅವರನ್ನು ಹೊರಗಿಟ್ಟು ಇಷ್ಟೆಲ್ಲಾ ಅಕ್ರಮ ಮಾಡಿದ್ದು, ಅದನ್ನು ಪ್ರಶ್ನಿಸಿದ ನಿಂಗಯ್ಯ ಅವರನ್ನ ಎತ್ತಂಗಡಿ ಮಾಡಿಸಲು ಸರ್ಕಾದ ಮಟ್ಟದಲ್ಲಿ ತಂತ್ರ ಮಾಡುತ್ತಿದ್ದಾರೆ.’

ಆಡಳಿತ ಮಂಡಳಿ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಸ್ಥಳೀಯರು ಇನ್ನು ಈ ಬಗ್ಗೆ ಧಾರ್ಮಕ ದತ್ತಿ ಇಲಾಖೆಗೂ ಕೂಡ ದೂರು ನೀಡಲಾಗಿದೆ. ಮುಜರಾಯಿ ಸಚಿವ ಶಶಿಕಲಾ ಜೊಲ್ಲೆ ಗಮನಕ್ಕೂ ಕೂಡ ತರಲಾಗಿದೆ. ಆದ್ರೆ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಇಲ್ಲಿ ನ್ಯಾಯ ಸಿಗದೇ ಹೋದ್ರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ಸಮಿತಿ ಮುಂದಾಗಿದೆ. ಅದೇನೆ ಇರಲಿ ದೇವರ ಹಣದಲ್ಲೂ ಅಕ್ರಮ ಮಾಡುವವರಿಗೆ ಇನ್ನಾದ್ರು ಮನವರಿಕೆಯಾಗಬೇಕಿದೆ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Tue, 10 May 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ