ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ; ಟಿವಿ9 ಬಳಿ ಘಟನೆ ಮಾಹಿತಿ ಬಿಚ್ಚಿಟ್ಟ ಸಂತ್ರಸ್ತೆ

ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ; ಟಿವಿ9 ಬಳಿ ಘಟನೆ ಮಾಹಿತಿ ಬಿಚ್ಚಿಟ್ಟ ಸಂತ್ರಸ್ತೆ
ವಕೀಲ ರಾಜೇಶ್ ಭಟ್

ಟಿವಿ9 ಜೊತೆ ಮಾತನಾಡಿದ ಸಂತ್ರಸ್ತೆ ಸೆಪ್ಟೆಂಬರ್ 25ರಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹೋಗಿದ್ದೆ. ಮಧ್ಯಾಹ್ನದವರೆಗೂ ಕಚೇರಿಯಲ್ಲಿ ಕೆಲಸ ಮಾಡಿದೆ. ಕೆ.ಎಸ್.ಎನ್. ರಾಜೇಶ್ ಭಟ್ ಮಧ್ಯಾಹ್ನ 2:00 ಗಂಟೆಗೆ ತನ್ನ ಚೇಂಬರಿಗೆ ನನ್ನನ್ನು ಕರೆದಿದ್ದರು.

TV9kannada Web Team

| Edited By: Ayesha Banu

Oct 24, 2021 | 9:42 AM

ಮಂಗಳೂರು: ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಈವರೆಗೂ ಪತ್ತೆಯಾಗಿಲ್ಲ. ರಾಜೇಶ್ ಭಟ್ಗಾಗಿ ಮಂಗಳೂರು ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಸದ್ಯ ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಟಿವಿ9ಗೆ ಸಂತ್ರಸ್ತ ಯುವತಿ ಮಾತನಾಡಿದ್ದಾರೆ.

ಟಿವಿ9 ಜೊತೆ ಮಾತನಾಡಿದ ಸಂತ್ರಸ್ತೆ ಸೆಪ್ಟೆಂಬರ್ 25ರಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹೋಗಿದ್ದೆ. ಮಧ್ಯಾಹ್ನದವರೆಗೂ ಕಚೇರಿಯಲ್ಲಿ ಕೆಲಸ ಮಾಡಿದೆ. ಕೆ.ಎಸ್.ಎನ್. ರಾಜೇಶ್ ಭಟ್ ಮಧ್ಯಾಹ್ನ 2:00 ಗಂಟೆಗೆ ತನ್ನ ಚೇಂಬರಿಗೆ ನನ್ನನ್ನು ಕರೆದಿದ್ದರು. ಎಮೋಷನಲ್ ಕೇಸ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ನಾನು ತನ್ನ ಕೌಟುಂಬಿಕ ಸಮಸ್ಯೆ ಹೇಳಿಕೊಂಡಿದ್ದೆ. ಆಗ ನನ್ನನ್ನು ಸಂತೈಸಲು ವಕೀಲ ರಾಜೇಶ್ ತಬ್ಬಿಕೊಂಡರು. ಬ್ಯಾಡ್ ಟಚ್ ಗಮನಕ್ಕೆ ಬಂದರೂ ಗೊಂದಲದಲ್ಲಿದ್ದೆ. ಖಾಸಗಿ ಅಂಗಾಂಗಗಳನ್ನ ಮುಟ್ಟಿ ಕಿರುಕುಳ ನೀಡಿದ್ದ ರಾಜೇಶ್. ಆಗ ನಾನು ಆತನಿಂದ ತಪ್ಪಸಿಕೊಂಡು ಹೊರ ಹೋಗಿದ್ದಾಗಿ ಸಂತ್ರಸ್ತ ಯುವತಿ ಮಂಗಳೂರಿನಲ್ಲಿ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಇನ್ನು ಹೊರಗೆ ಗೊತ್ತಾದರೆ ನಿನ್ನ ಡೆಡ್ ಬಾಡಿ ಸಿಗುತ್ತೆ ಅಂತ ಬೆದರಿಕೆ ಹಾಕಿದ್ದಾರೆ ಎಂದರು.

ಸಿಸಿಟಿವಿ ಫುಟೇಜ್ ಡಿಲೀಟ್ ಇನ್ನು ಸೆಪ್ಟೆಂಬರ್ 25 ಮತ್ತು 26ರ ಸಿಸಿಟಿವಿ ಫುಟೇಜ್ ಡಿಲೀಟ್ ಆಗಿದೆ. ಮಂಗಳೂರಿನ ಕರಂಗಲ್ಪಾಡಿ ಯಲ್ಲಿರುವ ವಕೀಲ ರಾಜೇಶ್ ಭಟ್ ಕಚೇರಿಗೆ ನೆನ್ನೆ ಮಹಜರಿಗೆ ಹೋದ ವೇಳೆ ಡಿಲೀಟ್ ಆಗಿರುವ ವಿಚಾರ ಬೆಳಕಿಗೆ‌ ಬಂದಿದೆ.

ಸಂತ್ರಸ್ತೆ ಕೆಲಸಕ್ಕೆ ಸೇರಿದ ಕೆಲದಿನಗಳಲ್ಲಿ ವಕೀಲ ರಾಜೇಶ್ ಭಟ್ ವಾಟ್ಸಪ್ ಮೆಸೇಜ್ನಲ್ಲಿ ಸೆಲ್ಫಿ ಕೇಳಿದ್ದನಂತೆ. ಈ ವೇಳೆ ಸೆಲ್ಫಿ ಕಳಿಸಲು ಸಂತ್ರಸ್ತ ಯುವತಿ ನಿರಾಕರಿಸಿದ್ದಳಂತೆ. ಸಿಸಿಟಿವಿಯಲ್ಲಿದ್ದ ಸಂತ್ರಸ್ತ ಯುವತಿಯ ಚಲನವಲನ ವಿಡಿಯೋಗಳು ಮತ್ತು ಫೋಟೋ ಕ್ರಾಪ್ ಮಾಡಿ ಆಕೆಯ ಮೊಬೈಲ್ಗೆ ರಾಜೇಶ್ ಭಟ್ ಕಳುಹಿಸುತ್ತಿದ್ದನಂತೆ. ಯಾವಾಗಲೂ ಸ್ಮೈಲ್ ಮಾಡುತ್ತಾ ಇರು ಚೆನ್ನಾಗಿ ಕಾಣುತ್ತೀಯ ಅಂತ ಕಾಮೆಂಟ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಟಿವಿ9 ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಇನ್ನು ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಈ ರೀತಿ ಆಗುತ್ತಿರುವ ಬಗ್ಗೆ ತಿಳಿಸಲು ಸಂತ್ರಸ್ತೆ ಆರೋಪಿ ರಾಜೇಶ್ ಭಟ್ ಪತ್ನಿಯನ್ನು ಸಂಪರ್ಕಿಸಿದ್ದರು. ರಾಜೇಶ್ ಭಟ್ನ ಲೈಂಗಿಕ ಕಿರುಕುಳದ ಬಗ್ಗೆ ಪತ್ನಿಗೆ ಮಾಹಿತಿ ನೀಡಿದ್ದರು. ಕಚೇರಿಯ ಸಿಸಿಟಿವಿ ದೃಶ್ಯವನ್ನು ಕೂಡ ಪರಿಶೀಲಿಸಿ ಅಂತ ಹೇಳಿದ್ರು. ತಾನು ಆರೋಪಿಯ ಪತ್ನಿ ಜೊತೆ ಮಾತನಾಡಿರುವ ಆಡಿಯೋ ರೆಕಾರ್ಡ್ ಮಾಡಿರುವ ವಿಚಾರ ಸಂತ್ರಸ್ತೆ ಟಿವಿ9ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಇಂಟರ್ನ್​ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ; ಈವರೆಗೂ ಪತ್ತೆಯಾಗದ ವಕೀಲ ರಾಜೇಶ್ ಭಟ್

Follow us on

Related Stories

Most Read Stories

Click on your DTH Provider to Add TV9 Kannada