ಇಂದು ಮಳಲಿ‌ ಮಸೀದಿ ವಿವಾದ ವಿಚಾರಣೆ, ಎಲ್ಲರ ಚಿತ್ತ ಮಂಗಳೂರು ನ್ಯಾಯಾಲಯದತ್ತ

ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿ ವಿವಾದದ ವಿಚಾರಣೆಯನ್ನು ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಡೆಸಲಿದೆ.

ಇಂದು ಮಳಲಿ‌ ಮಸೀದಿ ವಿವಾದ ವಿಚಾರಣೆ, ಎಲ್ಲರ ಚಿತ್ತ ಮಂಗಳೂರು ನ್ಯಾಯಾಲಯದತ್ತ
ವಿವಾದಿತ ಮಳಲಿ ಮಸೀದಿ
Edited By:

Updated on: Jun 14, 2022 | 10:07 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿ ವಿವಾದದ ವಿಚಾರಣೆಯು ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಡೆಸಲಿದೆ. ಮಸೀದಿ ನವೀಕರಣದ ವೇಳೆ ಹುಟ್ಟಿಕೊಂಡ ವಿವಾದ ಕೋರ್ಟ್ ಮೆಟ್ಟಿಲೇರಿ ವಿಚಾರಣೆ ಹಂತದಲ್ಲಿದೆ. ಜೂನ್ 10 ರಂದು ವಾದ ಆಲಿಸಿದ್ದ ಕೋರ್ಟ್, ವಿಚಾರಣೆಯನ್ನು ಜೂ.14ಕ್ಕೆ ಮುಂದೂಡಿತ್ತು. ಅದರಂತೆ ಇಂದು (ಜೂ.14) ವಿಚಾರಣೆ ನಡೆಸಲಿದ್ದು, ಎಲ್ಲರ ಚಿತ್ತ ಕೋರ್ಟ್ ಮೇಲಿದೆ

ಇದನ್ನೂ ಓದಿ: ಸುಬ್ರಹ್ಮಣ್ಯಪುರ ಕೆರೆ, ಬೇಗೂರು ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್​​ ಸೂಚನೆ

ಮಳಲಿ ಮಸೀದಿ ಪುನರ್ ನಿರ್ಮಾಣಕ್ಕೆ ಮಸೀದಿ ಆಡಳಿತ ಮಂಡಳಿ ಮುಂದಾಗಿತ್ತು. ಈ ವೇಳೆ ದೇವಸ್ಥಾನದ ಶೈಲಿಯಲ್ಲಿ ಕಟ್ಟಡ ಕಂಡುಬಂದಿತ್ತು. ಹಿಂದುತ್ವಪರ ಸಂಘಟನೆಗಳು ಸ್ಥಳಕ್ಕೆ ಧಾವಿಸಿ ಮಸೀದಿ ಪುನರ್ ನಿರ್ಮಾಣಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದವು. ಮಸೀದಿಯ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಮಳಲಿ‌ ಮಸೀದಿ ಪರ ವಕೀಲ ಎಂ.ಪಿ.ಶೆಣೈ ಹಾಗೂ ವಿಶ್ವ ಹಿಂದೂ ಪರಿಷತ್ ಪರ ವಕೀಲ ಚಿದಾನಂದ ಕೆದಿಲಾಯ ಅವರು ವಾದ ಮಂಡಿಸುತ್ತಿದ್ದಾರೆ.

ಇದನ್ನೂ ಓದಿ: ಇದು ಸರಿಯಲ್ಲ: ಉತ್ತರ ಪ್ರದೇಶ ಸರ್ಕಾರದ ಬುಲ್​ಡೋಜರ್ ಆಟಾಟೋಪಕ್ಕೆ ಅಲಹಾಬಾದ್ ಹೈಕೋರ್ಟ್ ನಿವೃತ್ತ ಸಿಜೆ ಆಕ್ಷೇಪ

ಮಂಗಳೂರಿನ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ಸಂದರ್ಭ ಮಸೀದಿ 700 ವರ್ಷಗಳ ಹಿಂದಿನಿಂದ ಇದೆ ಎಂದು ಮಸೀದಿ ಪರ ವಕೀಲರು ವಾದಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಎಚ್​ಪಿ ಪರ ವಕೀಲರು, ಪರಿಶೀಲನೆಗೆ ಕಮಿಷನ್ ಒಂದನ್ನು ನೇಮಕ ಮಾಡಲು ಮನವಿ ಮಾಡಿದ್ದರು. ಆದರೆ ಕೆಳಹಂತದ ನ್ಯಾಯಾಲಯ ಮಳಲಿ ಮಸೀದಿಯ ಯಥಾಸ್ಥಿತಿಯನ್ನು ಮುಂದುವರೆಸಬಹುದು ಎಂದು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿದ ವಿಎಚ್​ಪಿ, ಹೈಕೋರ್ಟ್ ಮೆಟ್ಟಿಲೇರಿತ್ತು. ಅದರಂತೆ ನಿನ್ನೆ ವಿಚಾರಣೆ ನಡೆಸಿದ ಹೈಕೋರ್ಟ್, ಮಳಲಿ ಮಸೀದಿ ಬಗ್ಗೆ ಮಂಗಳೂರಿನ ಸಿವಿಲ್ ಕೋರ್ಟ್ ವಿಚಾರಣೆ ಮಾತ್ರವೇ ಮಾಡಬೇಕು, ಆದೇಶ ಹೊರಡಿಸುವಂತಿಲ್ಲ ಎಂದು ಸೂಚಿಸಿತ್ತು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:07 am, Tue, 14 June 22